ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮೊದಲೇ 5 ಗ್ಯಾರಂಟಿ ಯೋಜನೆಗಳನ್ನು ಜಾರಿತರುವ ಬಗ್ಗೆ ಘೋಷಿಸಿತ್ತು.ಅದರಂತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಂದೊಂದಾಗಿ 5 ಯೋಜನೆಗಳನ್ನು ಜಾರಿಗೆ ಕೂಡಾ ತಂದಿದೆ. ಈ ಪೈಕಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂ. ನೀಡುವ ಗೃಹಲಕ್ಷೀ ಯೋಜನೆಯೂ ಒಂದು. ರಾಜ್ಯದಲ್ಲಿ ಇಗಾಗಲೇ ಎಲ್ಲಾ ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸಿದ್ದು ಈಗಾಗಲೇ 11 ತಿಂಗಳುಗಳಿಂದ ಪ್ರತೀ ತಿಂಗಳು 2000 ರೂಪಾಯಿಯಂತೆ ಹಣವನ್ನು ಗೃಹಿಣಿಯರು ಪಡೆಯುತ್ತಿದ್ದಾರೆ. ಆದ್ರೀಗ ಸರಕಾರ ಹೊಸ ರೂಲ್ಸ್ ಜಾರಿ ಮಾಡಿದೆ.
ಹೊಸ ನಿಯಮದಡಿ ಕೆಲವು ಮಹಿಳೆಯರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮೆ ಆಗೋದಿಲ್ಲ. ರಾಜ್ಯದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅಕ್ರಮಗಳು ನಡೆಯುತ್ತಿವೆ. ಅರ್ಹತೆ ಇಲ್ಲದವರು ಸುಳ್ಳು ದಾಖಲೆಗಳನ್ನು ನೀಡಿ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಿದ್ದಾರಂತೆ. ಇಂತವರ ರೇಷನ್ ಕಾರ್ಡ್‍ಗಳನ್ನು ಕ್ಯಾನ್ಸಲ್ ಮಾಡುವುದಕ್ಕೆ ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಅದೇ ರೀತಿ ಗೃಹಲಕ್ಷ್ಮಿ ಯೋಜನೆಯ ವಿಚಾರದಲ್ಲಿ ಸಹ ಹಲವು ಮಹಿಳೆಯರು ಸುಳ್ಳು ಮಾಹಿತಿ ನೀಡಿ ಪ್ರತಿ ತಿಂಗಳು ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರಂತೆ. ಹೆಚ್ಚು ಆದಾಯ ಹೊಂದಿರುವವರು ಮತ್ತು ಟ್ಯಾಕ್ಸ್ ಪಾವತಿ ಮಾಡುತ್ತಿರುವವರು ಸಹ ಗೃಹಲಕ್ಷ್ಮಿಯೋಜನೆಯ ಫಲಾನುಭವಿಗಳಾಗಿದ್ದಾರೆ. ಇಂತವರನ್ನು ಹುಡುಕುವ ಪ್ರಕ್ರಿಯೆಯನ್ನು ಸರ್ಕಾರ ಶುರುಮಾಡಿದೆ.
ಇಷ್ಟೇ ಅಲ್ಲದೇ ಯುವಜನರಿಗಾಗಿ ವಿದ್ಯಾನಿಧಿ ಯೋಜನೆ, ಅನ್ನಭಾಗ್ಯ ಯೋಜನೆಯನ್ನೂ ಜಾರಿಗೆ ತಂದಿತ್ತು. ಆದ್ರೀಗ ಗೃಹಲಕ್ಷ್ಮೀ ಯೋಜನೆ ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರಿಗೆ ವರದಾನವಾಗಿದೆ. ಕಳೆದ 11 ತಿಂಗಳುಗಳಲ್ಲಿ 22 ಸಾವಿರ ರೂಪಾಯಿ ಹಣವನ್ನು ಮಹಿಳೆಯರು ಪಡೆದುಕೊಂಡಿದ್ದರು. ಆದರೆ ಕೆಲವು ಮಹಿಳೆಯರಿಗೆ ಇನ್ಮುಂದೆ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪಡೆಯೋದಕ್ಕೆ ಸಾಧ್ಯವಿಲ್ಲ. ಗೃಹಲಕ್ಷ್ಮೀ ಯೋಜನೆ ಜಾರಿಗೂ ಮೊದಲೇ ಸರಕಾರ ಯಾರಿಗೆಲ್ಲಾ ಈ ಯೋಜನೆಯ ಲಾಭ ಪಡೆಯಬಹುದು ಅನ್ನೋದನ್ನು ತಿಳಿಸಿತ್ತು. ಆದ್ರೂ ಕೂಡ ಜಿಎಎಸ್‍ಟಿ ಹಾಗೂ ಆದಾಯ ತೆರಿಗೆ ಪಾವತಿ ಮಾಡುವವರಿಗೆ ಈ ಯೋಜನೆಯ ಲಾಭ ಸಿಗೋದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿತ್ತು.
ಆದಾಯ ತೆರಿಗೆ ಪಾವತಿದಾರರು ಹಾಗೂ ಜಿಎಸ್‍ಟಿ ಪಾವತಿದಾರರು ಕೂಡ ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಆದರೆ ಸರ್ಕಾರ ಇದೀಗ ಗೃಹಲಕ್ಷ್ಮೀ ಯೋಜನೆಯ ವಿಚಾರದಲ್ಲಿ ಕಠಿಣ ರೂಲ್ಸ್ ಜಾರಿ ಮಾಡಿದೆ. ಸುಮಾರು 26 ಸಾವಿರಕ್ಕೂ ಹೆಚ್ಚು ಮಹಿಳೆಯರು ಆದಾಯ ತೆರಿಗೆ ಪಾವತಿ ಮಾಡುತ್ತಿದ್ರೂ, ಗೃಹ ಲಕ್ಷ್ಮೀ ಯೋಜನೆಯ ಲಾಭ ಪಡೆದಿದ್ದಾರೆ. ಇದೀಗ ಅಂತಹ ಖಾತೆಗಳನ್ನು ಸರ್ಕಾರ ಪತ್ತೆ ಹಚ್ಚಿದೆ. ಹೀಗಾಗಿ, ಇದೇ ತಿಂಗಳಿನಿಂದ ಅಂತಹ ಖಾತೆ ಹಣ ಹಾಕೋದನ್ನು ನಿರ್ಬಂಧಿಸಿದೆ.