Health Tips: ಆಹಾರ ಸೇವನೆ ಅಂದ್ರೆ, ಅದು ನಮ್ಮ ಆರೋಗ್ಯ ಅಭಿವೃದ್ಧಿ ಮತ್ತು ಆರೋಗ್ಯ ಹಾಳು ಮಾಡುವ ಎರಡೂ ಕೆಲಸ ಮಾಡಬಲ್ಲ ಕ್ರಿಯೆ. ನಾವು ಆರೋಗ್ಯಕರ ಆಹಾರ ಸೇವಿಸಿದ್ರೆ, ಅದು ನಮ್ಮ ಆರೋಗ್ಯ ಅಭಿವೃದ್ಧಿ ಮಾಡುತ್ತದೆ. ಇಲ್ಲವಾದಲ್ಲಿ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಅದೇ ರೀತಿ ನಾವು ಕೆಲವು ಆಹಾರ ತಿನ್ನುವಾಗ ಹುಷಾರಾಗಿರಬೇಕು. ವೈದ್ಯರಾದ ಡಾ.ಆಂಜೀನಪ್ಪ ಈ ಬಗ್ಗೆ ವಿವರಿಸಿದ್ದು, ಪೋರ್ಕ್ ತಿನ್ನುತ್ತಿದ್ದಲ್ಲಿ ನಾವು ಹೇಗೆ ಎಚ್ಚರವಾಗಿರಬೇಕು ಅಂತಾ ವಿವರಿಸಿದ್ದಾರೆ.
ಪೋರ್ಕ್ ಅಂದ್ರೆ ಹಂದಿ ಮಾಂಸ ಸೇವನೆ ಮಾಡಬೇಕು ಅಂದ್ರೆ, ಅದನ್ನು ಚೆನ್ನಾಗಿ ಬೇಯಿಸಿಯೇ ತಿನ್ನಬೇಕು ಅಂತಾರೆ ವೈದ್ಯರು. ಏಕೆಂದರೆ, ಹಂದಿ ಮಾಂಸವನ್ನು ಅರ್ದಂಬರ್ಧ ಬೇಯಿಸಿ ತಿಂದರೆ, ಮೂರ್ಛೆ ರೋಗ ಬರುವ ಸಾಧ್ಯತೆ ಇರುತ್ತದೆ.
ವೈದ್ಯರು ಈ ಬಗ್ಗೆ ಉದಾಹರಣೆ ಕೊಟ್ಟಿದ್ದು, ಹಂದಿ ಮಾಂಸವನ್ನು ಇಷ್ಟಪಟ್ಟು ತಿನ್ನುವ ಓರ್ವ ಬಾಲಕಿಯನ್ನು ಕರೆದುಕೊಂಡು, ಅವಳ ತಾಯಿ ವೈದ್ಯರ ಬಳಿ ಬಂದಿದ್ದರಂತೆ. ಆ ಬಾಲಕಿಗೆ ಮೂರ್ಛೆರೋಗವಿದೆ ಎಂದಾಗ, ನೀನು ನಾನ್‌ವೆಜ್ ತಿಂತಿಯಾ..? ಅಂತಾ ಕೇಳಿದಾಗ, ಆಕೆ ಹೌದು ಎಂದಿದ್ದಾಳೆ. ಹಂದಿ ಮಾಂಸ ತಿಂತಿಯಾ ಎಂದು ಕೇಳಿದಾಗ, ಹೌದು, ಅದರಲ್ಲಿರುವ ಕೆಲವು ಭಾಗಗಳನ್ನು ನಾನು ಇಷ್ಟಪಟ್ಟು ತಿನ್ನುತ್ತೇನೆ ಎಂದಿದ್ದಾಳೆ.
ಆಗ ವೈದ್ಯರು ಆಕೆಯ ಬ್ರೇನ್ ಎಕ್ಸ್‌ರೇ ಮಾಡಿಸಿದ್ದಾರೆ. ಬ್ರೇನ್‌ನಲ್ಲಿ ಮೊಟ್ಟೆ ಹುಟ್ಟಿಕೊಂಡಿತ್ತು. ಯಾಕೆ ಆ ಮೊಟ್ಟೆ ಹುಟ್ಟಿಕೊಂಡಿತ್ತು ಎಂದರೆ, ಆಕೆ ಹಂದಿ ಮಾಂಸವನ್ನು ಸರಿಯಾಗಿ ಬೇಯಿಸದೇ, ಹಸಿ ಹಸಿಯಾಗೇ ತಿನ್ನುತ್ತಿದ್ದಳು. ಈ ಕಾರಣಕ್ಕೆ ಆಕೆಯ ಮೆದುಳಲ್ಲಿ ಮೊಟ್ಟೆ ಹುಟ್ಟಿತ್ತು. ಅಲ್ಲದೇ, ಇದೇ ಕಾರಣಕ್ಕೆ ಆಕೆಗೆ ಮೂರ್ಛೆರೋಗವೂ ಬಂದಿತ್ತು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.