Health Tips: ಇತ್ತೀಚಿನ ದಿನಗಳಲ್ಲಿ ಹಲವರು ಕ್ಯಾನ್ಸರ್ ಸಮಸ್ಯೆಯಿಂದ ಬಳಲಿ ಸಾವನ್ನಪ್ಪುತ್ತಿದ್ದಾರೆ. ಬಿಪಿ ಶುಗರ್ ಯಾವ ರೀತಿ ಕಾಮನ್ ಆಗಿಬಿಟ್ಟಿದೆಯೋ, ಅದೇ ರೀತಿ ಮುಂದೆ ಕ್ಯಾನ್ಸರ್ ಅಂದ್ರೆ, ಕಾಮನ್ ರೋಗ ಅನ್ನೋ ಥರ ಆದರೂ ಆಗಬಹುದು. ಯಾಕಂದ್ರೆ ನಮ್ಮ ಜೀವನ ಶೈಲಿಯೂ ಅದೇ ರೀತಿ ಇದೆ. ಹಾಗಾದ್ರೆ ಕ್ಯಾನ್ಸರ್ ಇದೆ ಎಂದು ಕಂಡುಹಿಡಿಯುವುದು ಹೇಗೆ ಅಂತಾ ತಿಳಿಯೋಣ ಬನ್ನಿ..
ಗುಟ್ಕಾ, ಧೂಮಪಾನ ಸೇವನೆ ಮಾಡುವುದರಿಂದ, ಅನುವಂಶಿಕವಾಗಿ, ಪ್ಲಾಸ್ಟಿಕ್ ಕಪ್, ಪ್ಲೇಟ್ ಹೆಚ್ಚು ಬಳಸುವುದರಿಂದ, ಇವಿಷ್ಟು ಕಾರಣಗಳಿಂದ ಹೆಚ್ಚಾಗಿ ಕ್ಯಾನ್ಸರ್ ರೋಗ ಬರುತ್ತದೆ. ಅತೀ ಹೆಚ್ಚಾಗಿ ಸ್ಮೋಕ್ ಮಾಡುವುದರಿಂದ, ಗುಟ್ಕಾ ಸೇವನೆ ಮಾಡುವುದರಿಂದ, ಪ್ರತಿದಿನ ಪ್ಲಾಸ್ಟಿಕ್ ಕಪ್‌ನಲ್ಲಿ ಟೀ, ಕಾಫಿ ಸೇವನೆ ಮಾಡುವುದರಿಂದ, ಬಿಸಿ ಬಿಸಿಯಾದ ಆಹಾರವನ್ನು ಅತೀಯಾಗಿ ಸೇವಿಸುವುದರಿಂದ, ಹೆಚ್ಚು ಖಾರವಾದ ಆಹಾರ ಸೇವಿಸುವುದರಿಂದ ಕ್ಯಾನ್ಸರ್ ಬರುತ್ತದೆ.
ಅಲ್ಲದೇ, ನಾವು ಜೀವಿಸುವ ರೀತಿ, ಧೂಳು ಹೆಚ್ಚಾಗಿರುವ ಪ್ರದೇಶದಲ್ಲಿ ಓಡಾಟ, ಇವುಗಳು ಕೂಡ ಕ್ಯಾನ್ಸರ್ ಬರಲು ಕಾರಣವಾಗುತ್ತದೆ. ಅಲ್ಲದೇ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದಲ್ಲಿ, ಕ್ಯಾನ್ಸರ್ ಬೇಗ ನಮ್ಮ ದೇಹವನ್ನು ಆವರಿಸಿಬಿಡುತ್ತದೆ. ಇನ್ನು ಕ್ಯಾನ್ಸರ್ ಇದೆ ಎಂದು ಗೊತ್ತಾಗುವುದು ಹೇಗೆ ಎಂದರೆ, ನಮ್ಮ ದೇಹದ ಯಾವುದೇ ಭಾಗದಲ್ಲಿ ಹೆಚ್ಚು ನೋವಾಗುತ್ತಿದ್ದರೆ, ಒಮ್ಮೆ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು.
ಉದಾಹರಣೆಗೆ, ಸ್ತನ ಕ್ಯಾನ್ಸರ್ ಬರುವಾಗ, ನಮ್ಮ ಸ್ತನದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಅದು ಸ್ಪ್ರೆಡ್ ಆದಾಗ, ಕುತ್ತಿಗೆ ಬಳಿ ನೋವು, ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಆದರೆ ನೋವು ಪಸರಿಸಿಕೊಳ್ಳುವ ಮುನ್ನ ನೀವು ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.