Political News: ಕೇಂದ್ರ ಸಚಿವರಾದ ಬಳಿಕ, ಮೊದಲ ಬಾರಿಗೆ ಹೆಚ್.ಡಿ.ಕುಮಾರಸ್ವಾಮಿ ಬೆಂಗಳೂರಿಗೆ ಬಂದಿದ್ದು, ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಜಿ.ಟಿ.ದೇವೇಗೌಡರು, ಈ ಬಾರಿ ಮೈತ್ರಿ ಒಂದಾಗಿ ಕೆಲಸ ಮಾಡಿದೆ. ಮೈಸೂರಿನಲ್ಲಿ ಯದುವೀರ್ ಗೆದ್ದಿದ್ರೆ ಅದು ಜೆಡಿಎಸ್ ವೋಟಿನಿಂದ. ಹಾಗೇ ಕೋಲಾರದಲ್ಲಿ ಮಲ್ಲೇಶ್ ಬಾಬು ಗೆದ್ದಿದ್ರೆ ಅದ್ರಿಂದ ಬಿಜೆಪಿ ವೋಟಿನಿಂದ. ಹಾಗೇ ಚಿಕ್ಕಬಳ್ಳಾಪುರ, ಬೇರೆ ಕಡೆಯೂ ಜೆಡಿಎಸ್ ಕೊಡುಗೆ ಕೊಟ್ಟಿದೆ. ಆದ್ರೆ ಕುಟುಂಬ ರಾಜಕಾರಣ ಅಂತಾರೆ. ದೇವೇಗೌಡರು,ಕುಮಾರಸ್ವಾಮಿ ಇಲ್ಲದಿದ್ರೆ ಪಕ್ಷ ಉಳಿತಿತ್ತಾ? ಎಂದು ಜಿಟಿಡಿ ಪ್ರಶ್ನಿಸಿದ್ದಾರೆ.
ಮತ್ತೆ ಮತ್ತೊಂದು ಹುಲಿ ಬರ್ತಿದೆ. ಕುಮಾರಸ್ವಾಮಿ ಜನಪ್ರಿಯತೆ ಶಾಶ್ವತವಾಗಿ ಉಳಿದಿದೆ. ಕುಮಾರಸ್ವಾಮಿ ನಮಗೆ ಆಶಾಕಿರಣವಾಗಿದ್ದಾರೆ. ಕುಮಾರಸ್ವಾಮಿ, ರೇವಣ್ಣ ಇಬ್ಬರು ರಾಜ್ಯಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ನಾವು ಮೂಲೆಯಲ್ಲಿ ಕುಳಿತಿದ್ದಾವ ದೇವರು ಒಂದು ಅವಕಾಶ ಕೊಟ್ಟಿದೆ. ಬಿಜೆಪಿಯನ್ನು ಜೊತೆಗೆ ಸೇರಿಸಿಕೊಂಡು ಹೋಗಬೇಕಿದೆ. ಎಷ್ಟೇ ಕಷ್ಟ ಆದ್ರೂ ಒಂದಾಗಿ ಹೋರಾಡಿ ಮತ್ತೆ ಸರ್ಕಾರ ತರಬೇಕು. ನೀವೆ ಕುಮಾರಸ್ವಾಮಿ ಆಗಬೇಕು ಎಂದು ನಿಖಿಲ್ ಕುಮಾರ್‌ಗೆ ಜಿಟಿಡಿ ಕರೆ ನೀಡಿದ್ದಾರೆ.
ಇಡೀ ದೇಶವನ್ನು ಕುಮಾರಸ್ವಾಮಿ ಸುತ್ತಬೇಕಿದೆ. ಸಂಘಟನೆ ಮಾಡಬೇಕಿದೆ. ನಮಗೆ ಜಿಲ್ಲಾ ಪಂಚಾಯತ್,ತಾಲೂಕು ಪಂಚಾಯತ ಚುನಾವಣೆಯಲ್ಲಿ ಕಡಿವಾಣ ಹಾಕಬೇಕು. ಗೂಳಿಗೆ ಕಡಿವಾಣ ಹಾಕಿಲ್ಲ ಅಂದ್ರೆ ನಮಗೆ ಉಳಿಗಾಲ ಇಲ್ಲ. ನಮ್ಮ ಮೆಂಬರ್ ಶಿಪ್ ಜುಲೈ 30 ಒಳಗೆ ಮುಗಿಬೇಕು. ಮತ್ತೆ ನಾವು ಅಧಿಕಾರಕ್ಕೆ ಬರಬೇಕು. ದೇವೇಗೌಡರು ಇರುವಾಗಲೇ ನಮ್ಮ ಪಕ್ಷ ಬೆಳೆಯಬೇಕು. ಜಿಟಿಡಿ ಹೋದ್ರು, ಮಂಜಣ್ಣ ಹೋದ್ರು ಅಂದರು. ಯಾರಾದ್ರೂ ಹೋದರಾ? ಇಲ್ಲ. ನಾವೆಲ್ಲ ಕುಮಾರಸ್ವಾಮಿ ,ದೇವೇಗೌಡರ ಜೊತೆ ಇದ್ದೆವೆ. ಕುಮಾರಸ್ವಾಮಿ ಮಾತನ್ನು ಅಧಿಕಾರಿಗಳು ಕೇಳ್ತಾರೆ ಎಂದು ದೇವೇಗೌಡರು ಹೇಳಿದ್ದಾರೆ.
ಬಿಎಸ್‌ವೈ ವಿರುದ್ಧ ರಾಜಕೀಯ ವೈಷಮ್ಯ: ಕಾಂಗ್ರೆಸ್ ವಿರುದ್ಧ ಪ್ರಹ್ಲಾದ್ ಜೋಶಿ ಕಿಡಿ
ಹಲವು ಒತ್ತಡಗಳ ನಡುವೆಯೇ ದರ್ಶನ್‌ನನ್ನು ಅರೆಸ್ಟ್ ಮಾಡಿದ ಪೊಲೀಸ್ ಅಧಿಕಾರಿ ಯಾರು ಗೊತ್ತಾ..?