Hubli News: ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸ್ವಾಗತದ ಬಳಿಕ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಧಾರವಾಡ ಲೋಕಸಭಾ ಕ್ಷೇತ್ರದ ಜನತೆ ಸತತ ಐದನೇ ಬಾರಿಗೆ ಆರ್ಶೀವಾದ ಮಾಡಿದ್ದಾರೆ. ನಮ್ಮ ಪ್ರಧಾನಿ ಮೋದಿಯವರ ಕ್ಯಾಬಿನೆಟ್‌ನಲ್ಲಿ ಎರಡನೇ ಬಾರಿ ಮಂತ್ರಿ ಜವಾಬ್ದಾರಿ ನೀಡಿದ್ದಾರೆ. ಮಂತ್ರಿ ಮಂಡಳದಲ್ಲಿ ಎರಡನೇ ಬಾರಿ ಅವಕಾಶ ನೀಡಿದಲ್ಕೆ ಮೋದಿಯವರಿಗೆ ಕೃತಜ್ಞತೆ ಹೇಳುತ್ತೇನೆ ಎಂದರು.
ರಾಜ್ಯ ಸರ್ಕಾರದ 10 ಕೆಜಿ ಅಕ್ಕಿ ವಿಚಾರದಲ್ಲಿ ಈ ಹಿಂದೆ ನಡೆದ ಹಗ್ಗಜಗ್ಗಾಟ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ಈ ಹಿಂದೆ ಕೇಂದ್ರದಕ್ಲಿ ನಮ್ಮ ಸರ್ಕಾರ ಅಧಿಕಾರದಲ್ಲಿ ಇತ್ತು. ಈಗಲೂ ಮತ್ತೆ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬಂದಿದೆ. ಈ ಹಿಂದೆ ಹಲವು ರಾಜ್ಯಗಳಲ್ಲಿ ಹೆಚ್ಚು ಪಡಿತರ ಅಕ್ಕಿ ನೀಡುವುದಾಗಿ ಹೇಳಿಕೊಂಡಿದ್ವು. ಆದರೆ ಅದಕ್ಕೆ ಅವಕಾಶವಿರಲಿಲ್ಲ. ಇದರ ಬಗ್ಗೆ ಈ ಹಿಂದಿನ ಆಹಾರ ಮತ್ತು ನಾಗರಿಗರ ವ್ಯವಹಾರಗಳ ಸಚಿವರೊಂದಿಗೆ ಚರ್ಚೆ ಮಾಡಿದೆ. ಇಲಾಖೆಯ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಬರುವ ದಿನಗಳಲ್ಲಿ ಇದರ ಬಗ್ಗೆ ಅಧ್ಯಯನ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಯಡಿಯೂರಪ್ಪ ಬಂಧನಲ್ಕೆ ವಾರಂಟ್ ವಿಚಾರದ ಬಗ್ಗೆ ಮಾತನಾಡಿದ ಜೋಶಿ, ಮೊನ್ನೆ ರಾಹುಲ್ ಗಾಂಧಿಯವರಿಗೆ ಕೋರ್ಟ್ ನಾನ್ ಬೆಲೆಬಲ್ ವಾರಂಟ್ ನೀಡಿತ್ತು. ಸುಳ್ಳ ಆರೋಪದ ಕೇಸನಲ್ಲಿ ಅವರಿಗೆ ಕೋರ್ಟ್ ವಾರಂಟ್ ನೀಡಿತ್ತು. ಈ ಬೆಳವಣಿಗೆಯ ಬಳಿಕ ಕೆಲವು ಕೃತ್ಯಗಳು ಆರಂಭವಾಗಿವೆ. ಯಡಿಯೂರಪ್ಪನವರು ರಾಜ್ಯ ಕಂಡ ಜನಪ್ರಿಯ ನಾಯಕರಲ್ಲಿ ಒಬ್ಬರಾಗಿದ್ದಾರೆ. 81-82 ವಯಸ್ಸಿನ ಹಿರಿಯ ಜೀವ ಅದೂ. ಈ ವಯಸ್ಸಿನಲ್ಲಿ ಅವರ ಮೇಲೆ ಈ ರೀತಿಯ ಆರೋಪ ಮಾಡುವುದೇ ಅಪಚಾರವಾಗಿದೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಬಿ.ನಾಗೇಂದ್ರರವರು ರಾಜೀನಾಮೆ ನೀಡಿದ್ದಾರೆ.
ಈಗ ಸಿದ್ದರಾಮಯ್ಯನವರು ರಾಜೀನಾಮೆ ಒತ್ತಡ ಬರುತ್ತೆ ಅಂತಾ ಅದನ್ನು ಮರೆಮಾಚಲು ಯಡಿಯೂರಪ್ಪ ವಿಚಾರ ತಂದಿದ್ದಾರೆ. ಯಡಿಯೂರಪ್ಪನವರ ವಾರಂಟ್ ವಿಚಾರದಲ್ಲಿ ದ್ವೇಷ ರಾಜಕಾರಣ ಇದೆ. ರಾಜ್ಯ ಸರ್ಕಾರ ದ್ವೆಷ ರಾಜಕಾರಣ ಮಾಡುತ್ತಿದೆ. ಎಲ್ಲವನ್ನೂ ಜನ ಗಮನಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ & ಡಿಸಿಎಂ ಡಿಕೆಶಿ ಸೇಡಿನ ರಾಜಕಾರ ಜನಕ್ಕೂ ಗೊತ್ತಾಗುತ್ತಿದೆ. ಇದರ ಕುರಿತು ಸರ್ಕಾರದ ವಿರುದ್ಧ ಉಗ್ರ ಹೋರಾಟ ರೂಪಿಸುತ್ತೇವೆ. ಈ ಪ್ರಕರಣ ವಿಚಾರಣೆಗೆ ಯಡಿಯೂರಪ್ಪನವರು ಸಮಯ ಕೇಳಿದ್ದಾರೆ. ಒಂದೇ ಬಾರಿ ಹಾಜರಾಗದೇ ಇರುವುದನ್ನು ಇಟ್ಟುಕೊಂಡು ವಾರಂಟ್ ನೀಡಲಾಗಿದೆ. ಈ ಕೇಸ್ ಆಗಿಆರು ತಿಂಗಳು ಆಗಿದೆ. ದೂರು ನೀಡಿದ ಸಂದರ್ಭದಲ್ಲಿ ಅಂದೇ ಗೃಹ ಮಂತ್ರಿಗಳು ಇದರಲ್ಲಿ ಸತ್ಯ ಕಾಣಿಸುತ್ತಿಲ್ಲ ಎಂದಿದ್ದರು. ಈಗ ನ್ಯಾಯಾಲಯಕ್ಕೆ ಹೋಗಿ ಸರ್ಕಾರ ನಾನ್ ಬೆಲೆಬಲ್ ವಾರಂಟ್ ಕೇಳಿದೆ. ಪಬ್ಲಿಕ್ ಪ್ರಾಸ್ಯೂಕ್ಯೂಟರ್ ಮೂಲಕ ವಾರಂಟ್ ತಂದಿದೆ. ರಾಜ್ಯ ಸರ್ಕಾರದ ದ್ವೆಷ ರಾಜಕಾರಣ ಎಷ್ಟೀದೆ ಎಂದು ತೋರಿಸುತ್ತದೆ. ಈಗಾಗಲೇ ಜನ ಲೋಕಸಭಾ ಚುನಾವಣೆಯಲ್ಲಿ ತಲ್ಲ ಉತ್ತರ ನೀಡಿ 9 ಸ್ಥಾನ ನೀಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. 1,87 ಕೋಟಿ ವರ್ಗಾವಣೆಯಲ್ಲಿ ಸಿಎಂ ಸಿದ್ಧರಾಮಯ್ಯನವರ ಕೈಯಿದೆ. ಇದನ್ನು ಮುಚ್ಚಿಕೊಳ್ಳಲು ಯಡಿಯೂರಪ್ಪರನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಜೋಶಿ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ಗ್ಯಾರಂಟಿಗಳಿ ಮುಂದುವರೆಗೆ ಸ್ವಪಕ್ಷದವರ ವಿರೋಧ ವಿಚಾರದ ಬಗ್ಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ನವರ ಮೊದಲತಮ್ಮಲಿರುವ ಗೊಂದಲ ನಿವಾರಣೆ ಮಾಡಿಕೊಳ್ಳಲಿ. ಸಿಎಂರವರು ಗ್ಯಾರಂಟಿ ನಿಲ್ಲಿಸುವುದಿಲ್ಲ ಅಂತಾರೆ. ಅವರ ಪಕ್ಷದ ಶಾಸಕರು ಕೆಲವು ಸಚಿವರು ನಿಲ್ಲಿಸಬೇಕು ಅಂತಾರೆ. ಇತ್ತೀಚೆಗೆ ಕಾಂಗ್ರೆಸ್‌ನ ಆಂತರಿಕ ಬೇಗುದಿ ಹೆಚ್ಚಾಗಿದೆ. ರಾಜ್ಯದಲ್ಲಿ ಇನ್ನೂ ಗ್ಯಾರಂಟಿಗಳು ಜನಕ್ಕೆ ತಲುಪೇ ಇಲ್ಲ. ಇದು ರಾಜ್ಯ ಸರ್ಕಾರ ಲೋಕಸಭಾ ಚುನಾವಣೆಯ ಗಿಮಿಕ ಗ್ಯಾರಂಟಿ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ಈ ಕೊಲೆ ತನಿಖೆ ಕಟ್ಟುನಿಟ್ಟಾಗಿ ನಡೆಯಬೇಕು. ಯಾವುದೇ ಪ್ರಭಾವಕ್ಕೆ ಒಳಗಾಗದೆ ಇದನ್ನು ತನಿಖೆ ನಡೆಸಬೇಕು. ರೇಣುಕಾಸ್ವಾಮಿ ಕೊಲೆ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು. ಆದರೆ ಇದರಲ್ಲಿ ಕಾಂಗ್ರೆಸ್‌ನ ಶಾಸಕರು ಸಚಿವರು ತನಿಖೆಯಲ್ಲಿ ಹಸ್ತಕ್ಷೇಪ ಆರೋಪ ಕೇಳಿ ಬರುತ್ತಿದೆ. ತನಿಖೆಗೂ ಮೊದಲೇ ಪ್ರಭಾವಿ ಆರೋಪಿಯನ್ನು ಪ್ರಕರಣದಿಂದ ಮುಕ್ತ ಮಾಡಲು ಯತ್ನಿಸುತ್ತಿದ್ದಾರೆ. ಇದು ಸರಿಯಾದ ಬೆಳವಣಿಗೆ ಅಲ್ಲ. ಯಾರ ಪ್ರಭಾವಕ್ಕೆ ಒಳಗಾಗದೇ ಪೊಲೀಸರು ತನಿಖೆ ಮಾಡಬೇಕು. ನಾಳೆ ಹೈಕೋರ್ಟ್ ಮತ್ತೊಂದು ಕೋರ್ಟ್ಗೆ ಹೋದಲ್ಲಿ ಪೊಲೀಸರೇ ಉತ್ತರ ನೀಡಬೇಕು. ಅಮಾಯಕ ರೇಣುಕಾಸ್ವಾಮಿ ಕುಟುಂಕ್ಕೆ ಇಲ್ಲಿ ಅನ್ಯಾಯವಾಗಿದೆ. ಕುಟುಂಬಕ್ಕೆ ಅನ್ಯಾಯ ಆಗಿರುವುದು ಸತ್ಯ. ಆ ಕುಟುಂಬಕ್ಕೆ ಬೆಂಗಳೂರು ಪೊಲೀಸ್ ಕಮಿಷನರ್ ನ್ಯಾಯ ಕೊಡಿಸುವ ಜವಾಬ್ದಾರಿ ಇದೆ. ಆರೋಪಿಗಳಿಗೆ ಕಠಿಣ ಅತ್ಯಂತ ಉಗ್ರ ಶಿಕ್ಷ ಆಗುವ ನಿಟ್ಡಿನಲ್ಲಿ ತನಿಖೆ ನಡೆಸಬೇಕು. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಸಂದೇಶ ಈ ಪ್ರಕರಣದಿಂದ ತಿಳಿಯಬೇಕು ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.




