Gujarat ನ ದ್ವಾರಕಾಧೀಶ ಮಂದಿರ ಬಂದ್!

ದ್ವಾರಕದೇಶಾದ್ಯಂತ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದ್ದು ದೇವಾಲಯಗಳಲ್ಲಿನ ನಿರ್ಬಂಧಗಳನ್ನು ಕಠಿಣಗೊಳಿಸಲಾಗಿದೆ. ಈ ಸಾಲಿಗೆ ಈಗ ಗುಜರಾತ್ ನ ಪ್ರಸಿದ್ಧ ದೇವಾಲಯ ದ್ವಾರಕಾಧೀಶ ಮಂದಿರವೂ ಸೇರ್ಪಡೆಯಾಗಿದೆ.

“ಕೋವಿಡ್-19 ಹಿನ್ನೆಲೆಯಲ್ಲಿ ಹೆಚ್ಚು ಮಂದಿ ಆಗಮಿಸುವುದಕ್ಕೆ ತಡೆಗಟ್ಟಲು ದ್ವಾರಕೆಯಲ್ಲಿರುವ ದ್ವಾರಕಾಧೀಶ ಮಂದಿರವನ್ನು ಜ.17 ರಿಂದ 23 ವರೆಗೆ ಬಂದ್ ಮಾಡಲಾಗಿದೆ.

ಪೂರ್ಣಿಮೆಯ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವುದು ವಾಡಿಕೆಯಾಗಿದೆ. ಭಕ್ತಾದಿಗಳಿಗೆ ಅಷ್ಟೇ ನಿರ್ಬಂಧ ವಿಧಿಸಲಾಗಿದ್ದು ದೇವಾಲಯದ ಅರ್ಚಕರು ಎಂದಿನಂತೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಿದ್ದಾರೆ, ಇದರ ನೇರಪ್ರಸಾರ ವ್ಯವಸ್ಥೆ ಇರಲಿದೆ” ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಕೋವಿಡ್-19, ಓಮಿಕ್ರಾನ್ ತಡೆಗೆ ಗುಜರಾತ್ ನ ಸರ್ಕಾರ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿದೆ.

About The Author