ರಾಷ್ಟ್ರೀಯ ಸುದ್ದಿ : ಗುಜರಾತ್ ಜೈಲಿನಲ್ಲಿ ವ್ಯಕ್ತಿಯೊಬ್ಬ ಕೊಲೆ ಆರೋಪದ ಮೇಲೆ ಸೆರೆವಾಸ ಅನುಭವಿಸುತ್ತಿದ್ದನು. ಹೈಕೋರ್ಟ್ ಖೈದಿಗೆ ರಿಜಿಸ್ಟ್ರಿ ಜಾಮೀನು ಮಂಜೂರು ಮಾಡಿ ಬಿಡುಗಡೆಗೆ ಆದೇಶ ಹೊರಡಿಸಿತ್ತು. ಆದರೆ ಜೈಲು ಆಧಿಕಾರಿಗಳ ನಿರ್ಲಕ್ಷದಿಂದ ಖೈದಿಯೊಬ್ಬ ಮಾರು ವರ್ಷ ಹೆಚ್ಚು ಸೆರೆವಾಸ ಅನುಭವಿಸಿದ ಘಟನೆ ನಡೆದಿದೆ.
ಚಂದನ್ ಜಿ ಠಾಕೂರ್ ಅವರು ಮೂರು ವರ್ಷಗಳ ನಂತರ ಬಿಡುಗಡೆಗೆ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸುವ ವೇಳೆ ಜೈಲರ್ ಮಾಡಿದ ಎಡವಟ್ಟು ಬಯಲಾಗಿದೆ. 2020 ರ ಸೆಪ್ಟೆಂಬರ್ ತಿಂಗಳಲ್ಲಿ ಖೈದಿಯ ಶಿಕ್ಷೆಯನ್ನು ಅಮಾನತುಗೊಳಿದ ಹೈಕೋರ್ಟ್ ರಿಜಿಸ್ತ್ರಿ ಜಾಮೀನು ಆದೇಶವನ್ನು ಜೈಲು ಅಧಿಕಾರಿಗಳಿಗೆ ಮೇಲ್ ಮೂಲಕ ಕಳುಹಿಸಿದ್ದರು.
ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆ ಮೇಲ್ ಅನ್ನು ನಿರ್ಲಕ್ಷಿಸಿದ್ದ ಅಧಿಕಾರಿಗಳು ಆದೇಶದ ಅರಿವಿಲ್ಲದೆ ಖೈದಿಗೆ ಹೆಚ್ಚುವರಿ ಶಿಕ್ಷೆ ನೀಡಿದೆ. ಅಧಿಕಾರಿಗಳ ನಿರ್ಲಕ್ಷದಿಂದ ಆಗಿರುವ ಘಟನೆಗೆ 14 ದಿನಗಳ ಒಳಗಾಗಿ ಖೈದಿಗೆ ಒಂದು ಲಕ್ಷ ಪರಿಹಾರ ನೀಡುವಂತೆ ಜೈಲು ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚಿಸಿದೆ.
ಹುಚ್ಚವನಹಳ್ಳಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ..!