Friday, August 8, 2025

Latest Posts

‘ನೀನು ಗಂಡ್ಸೆ ಅಲ್ಲ ಅಂತೆಲ್ಲ ನನ್ನನ್ನ ಬೈದ್ರು. ನಾನು ಸಹಿಸಿಕೊಂಡೆ ಆದ್ರೆ…’

- Advertisement -

ಮಂಡ್ಯ: ಮಾಜಿ ಸಿಎಂ ಎಸ್.ಎಂ.ಕೃಷ್ಣ ಸಹೋದರನ ಪುತ್ರ ಗುರುಚರಣ್ ಕಾಂಗ್ರೆಸ್ ತೊರೆದು, ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಸೋಮನಹಳ್ಳಿಯಲ್ಲಿರುವ ತಮ್ಮ ಮನೆಯಲ್ಲೇ ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಗೊಂಡ ಗುರು ಚರಣ್‌ಗೆ ಪಕ್ಷದ ಬಾವುಟ ಕೊಟ್ಟು, ಶಾಲು ಹೊದಿಸಿ, ಮಾಜಿ ಸಿಎಂ ಕುಮಾರಸ್ವಾಮಿ ಜೆಡಿಎಸ್‌ಗೆ ಬರಮಾಡಿಕೊಂಡಿದ್ದಾರೆ. ಜೊತೆಗೆ ಜೆಡಿಎಸ್ ಕಾರ್ಯಕರ್ತರು ಕೂಡ ಉಪಸ್ಥಿತರಿದ್ದರು.

ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆಶಿ ಎರಡು ವರ್ಷದಿಂದಲೂ ಗುರುಚರಣ್‌ಗೆ ಟಿಕೇಟ್ ನೀಡುತ್ತೇವೆ ಎಂದು ಹೇಳಿದ್ದರು. ಆದರೆ, ನಾವು ಪಕ್ಷ ಕೊಟ್ಟ ಎಲ್ಲಾ ಜವಾಬ್ದಾರಿ ಮಾಡಿದ್ರೂ ಕೂಡ, ಪಕ್ಷಕ್ಕೆ ದುಡಿಯದೆ ಇರೋರಿಗೆ ಟಿಕೆಟ್ ನೀಡಿದ್ದಾರೆ. ಪಕ್ಷಕ್ಕೆ, ಸಮಾಜಕ್ಕೆ ಏನಾದ್ರು ಸೇವೆ ಮಾಡಿದ್ದರೆ, ರಾಜವಂಶಸ್ಥರು ಏನಾದ್ರು ಆಗಿದ್ರೆ ನಾವು ಅವರನ್ನು ಒಪ್ಪಿಕೊಳ್ತಾ ಇದ್ವಿ. ಈಗ ಹಣದ ಬಲ ಇದೆ ಅಂತ ಟಿಕೆಟ್ ಕೊಟ್ರೆ ನಮ್ಮ ಕತೆ ಕಾರ್ಯಕರ್ತರ ಕತೆ ಏನು.? ಮುಂದು ಟೆರರಿಸ್ಟ್ ಹತ್ರ ಎಲ್ಲಾ ಇದೆ ಅಂತ ಟಿಕೆಟ್ ಕೊಟ್ರೆ ನಮ್ಮ ಕತೆ ಏನು.? ಎಂದು ಗುರುಚರಣ್ ಪ್ರಶ್ನಿಸಿದ್ದಾರೆ.

ಅಲ್ಲದೇ, ನಾನು ಪಕ್ಷ ಹೇಳಿದ ಎಲ್ಲವನ್ನೂ ಮಾಡಿಕೊಂಡು ಬಂದಿದ್ದೇವೆ. ನಾನು ಎಲ್ಲವನ್ನು ಒಪ್ಪಿಕೊಂಡಮೇಲೆ ಟಿಕೆಟ್ ತಪ್ಪಿಸಿದ್ದು ಯಾಕೆ. ಎಸ್ ಎಂ ಕೃಷ್ಣ ಅವ್ರು ಪಕ್ಷ ಬಿಟ್ಟು ಹೋದಾಗ್ಲು ನಮ್ಮ ತಂದೆ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಇರ್ತೇವೆ ಅಂತ ಹೇಳಿದ್ರು. ಕಾಂಗ್ರೆಸ್ ಪಕ್ಷದವ್ರು ಕೇವಲ ಮುಯ್ಯಿ ಹಾಕಿಸಿಕೊಳ್ಳುವ ಕೆಲಸ ಮಾಡಿದ್ರು. ಒಂದು ರೂಪಾಯಿ ಪಕ್ಷ ನನಗೆ ಕೊಟ್ಟಿದ್ಯಾ ಕೇಳಿ. ನೀನು ಗಂಡ್ಸೆ ಅಲ್ಲ ಅಂತೆಲ್ಲ ನನ್ನನ್ನ ಬೈದ್ರು. ನಾನೇನೆ ಸಹಿಸಿಕೊಂಡೆ ಆದ್ರೆ ನಮ್ಮ ಕಾರ್ಯಕರ್ತರು ಸಹಿಸಿಕೊಳ್ಳಬೇಕಲ್ಲ ಎಂದು ಗುರುಚರಣ್ ಬೇಸರ ವ್ಯಕ್ತಪಡಿಸಿದ್ದಾರೆ.

ಸಂಸದರಿಗೆ ಮದ್ದೂರಲ್ಲಿ ಏನ್ ನಡಿತಿದೆ ಅಂತಾನೆ ಗೊತ್ತಿಲ್ಲ. ಯಾರದ್ದೋ ಮಾತು ಕೇಳಿಕೊಂಡು ಈಗ ಅವರಿಗೆ ಟಿಕೆಟ್ ನೀಡಿದ್ದಾರೆ‌. ಈಗ ಟಿಕೆಟ್ ನೀಡಿರುವವನು ಹಣ ಬಿಟ್ರೆ ಬೇರೆ ಏನಿದೆ ಹೇಳಿ. ಅವನಿಗೆ ಐದು ಊರಲ್ಲಿ ಇಬ್ಬರು ಮೂವರ ಹೆಸರು ಹೇಳಲಿ ಸಾಕು. ನಾನು ಚಾಲೆಂಜ್ ಮಾಡ್ತೇನೆ. ಅವನು ಹೆಸರು ಹೇಳಿದ್ರೆ ರಾಜಕೀಯವನ್ನೆ ಬಿಟ್ಟುಬಿಡುತ್ತೇನೆ ಎಂದು ಗುರುಚರಣ್ ಸವಾಲ್ ಹಾಕಿದ್ದಾರೆ.

ನಾಮಪತ್ರ ಸಲ್ಲಿಸಿದ ಡಿ.ಕೆ.ಮೋಹನ್: ಸಾಥ್ ಕೊಟ್ಟ ಶರತ್ ಬಚ್ಚೇಗೌಡ

ಚಾಮರಾಜಪೇಟೆ ಬಿಜೆಪಿ ಅಭ್ಯರ್ಥಿ ಭಾಸ್ಕರ್ ರಾವ್ ನಾಮಪತ್ರ ಸಲ್ಲಿಕೆ

ಅತೀಕ್ ಅಹಮದ್‌ಗೆ ಭಾರತ ರತ್ನ ನೀಡಬೇಕು ಎಂದವನನ್ನ ಪಕ್ಷದಿಂದ ಉಚ್ಛಾಟಿಸಿದ ಕಾಂಗ್ರೆಸ್..

- Advertisement -

Latest Posts

Don't Miss