Friday, October 18, 2024

Latest Posts

ಗುರುದೀಪ್ ಸಿಂಗ್ಗೆ ಕಂಚಿನ ಹಾರ

- Advertisement -

ಬಾರ್ಮಿಂಗ್ಹ್ಯಾಮ್: ಭಾರತದ ವೇಟ್ಲಿಫ್ಟಟರ್ ಗುರುದೀಪ ಸಿಂಗ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚು ಗೆದ್ದಿದ್ದಾರೆ.
ಪುರುಷರ 109 ಕೆಜಿ ವಿಭಾಗದಲ್ಲಿ ಒಟ್ಟು 390 ಕೆ.ಜಿ ಭಾರ ಎತ್ತುವಲ್ಲಿ ಯಶಸ್ವಿಯಾದರು.

ಸ್ನ್ಯಾಚ್ನಲ್ಲಿ 167 ಕೆಜಿ ಭಾರ ಎತ್ತುವ ಮೂಲಕ ಆರಂಭಿಸಿದ ಗುರುದೀಪ್ ಮೊದಲ ಪ್ರಯತ್ನದಲ್ಲಿ ವಿಫಲರಾದರು. ಎರಡನೆ ಪ್ರಯತ್ನದಲ್ಲಿ ಯಶಸ್ವಿಯಾದ ಅವರು ಕೊನೆಯ ಪ್ರಯತ್ನದಲ್ಲಿ 173 ಕೆಜಿ ಭಾರ ಎತ್ತಿದರು.

ಸ್ನ್ಯಾಚ್ನಲ್ಲಿ 167 ಕೆಜಿ ಹಾಗೂ ಕ್ಲೀನ್ ಅಂಡ್ ಜರ್ಕ್ನಲ್ಲಿ 223 ಕೆಜಿ ಭಾರ ಎತ್ತಿದರು.

ಕ್ಲೀನ್ ಅಂಡ್ ಜರ್ಕ್ನ ಮೊದಲ ಪ್ರಯತ್ನದಲ್ಲಿ 207ಕೆಜಿ ಭಾರ ಎತ್ತಿದರು. ಎರಡನೆ ಪ್ರಯತ್ನದಲ್ಲಿ 215ಕೆಜಿ ಭಾರ ಎತ್ತುವಲ್ಲಿ ಎಡವಿದರು. ಮೂರನೆ ಪ್ರಯತ್ನದಲ್ಲಿ 8ಕೆಜಿ ಭಾರ ಹೆಚ್ಚಿಸಲಾಯಿತು.

ನಿರ್ಣಾಯಕ ಹಂತದಲ್ಲಿ ಗುರುದೀಪ್ 223 ಕೆಜಿ ಭಾರ ಎತ್ತಿ ಅಚ್ಚರಿ ನೀಡಿದರು. ಇದು ಅವರ ಅತ್ಯುತ್ತಮ ವೈಯಕ್ತಿಕ ಶ್ರೇಷ್ಠ ಪ್ರದರ್ಶನವಾಯಿತು.

- Advertisement -

Latest Posts

Don't Miss