Wednesday, September 11, 2024

Latest Posts

ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದ ಬಗ್ಗೆ ಬೇಸರ ವ್ಯಕ್ತಪಡಿಸಿದ ಹೆಚ್.ಡಿ.ಕುಮಾರಸ್ವಾಮಿ

- Advertisement -

Political News: ಕೇಂದ್ರ ಸಚಿವರಾದ ಬಳಿಕ ಹೆಚ್.ಡಿ.ಕುಮಾರಸ್ವಾಮಿ ಮೊದಲ ಬಾರಿ ಬೆಂಗಳೂರಿನ ಜೆಡಿಎಸ್ ಕಚೇರಿಗೆ ಬಂದಿದ್ದು, ಕುಮಾರಸ್ವಾಮಿ ಅವರಿಗೆ ಕಾರ್ಯಕರ್ತರು ಭರ್ಜರಿ ಸ್ವಾಗತ ಕೋರಿದ್ದಾರೆ.

ಈ ವೇಳೆ ಮಾತನಾಡಿರುವ ಕುಮಾರಸ್ವಾಮಿ, ಜೆಡಿಎಸ್ ಅತ್ಯಂತ ಕಷ್ಟದ ದಿನಗಳಲ್ಲಿಯೂ ಪಕ್ಷದ ತಮ್ಮ ಶ್ರಮಕ್ಕೆ ೨೦೦೮ ರಿಂದ ಯಾವುದೇ ರೀತಿ ಪಕ್ಷ ದುಡಿಮೆಗೆ ಪ್ರತಿಫಲ ಸಿಕ್ಕಿಲ್ಲ ಎಂಬ ಕೊರಗು ಇದೆ. ಹಾಗಿದ್ದರು ಎಲ್ಲರೂ ಪಕ್ಷವನ್ನು ಉಳಿಸಿದ್ದೀರಾ. ಅದಕ್ಕೆ ನಿಮ್ಮೆಲ್ಲರಿಗೆ ಧನ್ಯವಾದಗಳು ಅರ್ಪಿಸುತ್ತೇನೆ. ಮೋದಿ ಎರಡು ಬಾರಿ ಪ್ರಧಾನಿಯಾಗಿ ಪರಿಣಾಮವಾಗಿ ದೇಶ ಮುನ್ನಡೆಸಿದರು. ಮೂರನೇ ಬಾರಿಗೆ ಪ್ರಧಾನಿಯಾಗಿದ್ದಾರೆ. ಅವರ ಮಂತ್ರಿಮಂಡಲದಲ್ಲಿ ಕೇಂದ್ರ ಸಚಿವನಾಗಿ ಪ್ರಮಾಣಸ್ವೀಕಾರ ಮಾಡಿದ್ದು ನಿಮ್ಮ ಮುಖಾಂತರ ಅರ್ಪಣೆ ಮಾಡ್ತೀನಿ ಎಂದು ಹೆಚ್ಡಿಕೆ ಹೇಳಿದ್ದಾರೆ.

೨೦೧೮ ರ ದಿನವನ್ನು ಇವತ್ತು ನೆನಪಿಸಿಕೊಳ್ತಿನಿ. ಬಹುಮತ ಬರದಿದ್ದಾಗ ಕಾಂಗ್ರೆಸ್ ಪಕ್ಷದ ದೆಹಲಿಯ ನಾಯಕರು ದೇವೇಗೌಡರ ಮನೆಗೆ ಬಂದು. ಎರಡು ಪಕ್ಷ ಸೇರಿ ಸರ್ಕಾರ ಮಾಡಬೇಕಂತ ಒತ್ತಡ ಹಾಕಿದ್ರು. ಇವತ್ತು ಪಾದಾರ್ಪಣೆ ಮಾಡಿದ್ದೇನೆ. ವಿಮಾನ ನಿಲ್ದಾಣದಿಂದ ಬರಬೇಕಾದ್ರೆ ಪಕ್ಷದ ಕಾರ್ಯಕರ್ತರು ಬೃಹತ್ ಸಭೆ ಮಾಡಿದ್ರು. ಅವತ್ತು ನಾನು ಸಿಎಂ ಇದ್ದಾಗ ಸನ್ಮಾನ ಏರ್ಪಾಡು ಮಾಡಿದ್ರು. ಇದೇ ವೇದಿಕೆಯಲ್ಲಿ ಆಗ ಕಣ್ಣಲ್ಲಿ ನೀರಾಕಿದ್ದು ನೀವು ಯಾರು ಮರೆತಿಲ್ಲಾ. ಯಾವ ರೀತಿ ನಡೆಸಿಕೊಂಡಿದ್ರು ವಿಷಕಂಠನಾಗಿದ್ದೇನೆ ಎಂದು ಹೇಳಿದ್ದೆ. ಆದ್ರೆ ಇವತ್ತು ಸಂತೋಷದಿಂದ ನಾನು ಮಾತಾನಾಡುತ್ತಿದ್ದೇನೆ. ಯಾವುದೇ ಕಲ್ಮಷ ಇಟ್ಟುಕೊಳ್ಳದೆ ಮಾತಾನಾಡುತ್ತಿದ್ದೇನೆ.

ಪ್ರಧಾನಿ ಮೋದಿಯವರಿಗೆ ಕಾರ್ಯಕರ್ತರ ಸಮ್ಮುಖದಲ್ಲಿ ನನ್ನ ವಂದನೆಗಳನ್ನ ಸಲ್ಲಿಸಿದ್ದೇನೆ. ದತ್ತ ಅವರಿಗೆ ಬಿಜೆಪಿ ಜೆಡಿಎಸ್ ಹೊಂದಾಣಿಕೆ ಸಮಸ್ಯೆ ಆಗಿತ್ತು. ದೇವೇಗೌಡರ ಮಾರ್ಗದರ್ಶನದಲ್ಲಿ ಅವರು ಬೆಳೆದಿದ್ದಾರೆ. ನನಗು ದತ್ತಣ ಅವರಿಗೂ ಕೆಲ ವಿಚಾರದಲ್ಲಿ ಹತ್ತಿರದಲ್ಲಿಲ್ಲಾ. ೨೦೦೬ ರಲ್ಲಿ ನಾನು ಬಯಸಿ ಸಿಎಂ ಆಗಲಿಲ್ಲ. ಆಗಲು ಬಹುಮತ ಬರದಿದ್ದಾಗ ದೇವೇಗೌಡ್ರು ಕಾಂಗ್ರೆಸ್ ನ ನಂಬಿದ್ರು. ಅವತ್ತು ಅರುಣ್ ಜೈಟ್ಲಿಯವರು ಉಸ್ತುವಾರಿಯಾಗಿ ಕೆಲಸ ಮಾಡಿದ್ರು. ಚುನಾವಣೆಯ ಫಲಿತಾಂಶದ ನಂತರ ನನ್ನ ಭೇಟಿಯಾಗಬೇಕಂತ ಪತ್ರಕರ್ತರ ಮನೆಯಲ್ಲಿ ಸಭೆ ಏರ್ಪಾಡಾಗಿತ್ತು. ಕರ್ನಾಟಕದಲ್ಲಿ ಬಿಜೆಪಿ ಜೆಡಿಎಸ್ ಸರ್ಕಾರ ಮಾಡೋಣಾ ಎಂದು ಹೆಚ್ಡಿಕೆ ಕರೆ ನೀಡಿದ್ದಾರೆ.

ನಿಮ್ಮ ತಂದೆಯವರ ಶಕ್ತಿ ಗೊತ್ತಿದೆ. ನಿಮಗೆ ಸಿಎಂ ಕೊಡ್ತಿವಿ ಅಂದಿದ್ರು. ಆದ್ರೆ ಪಕ್ಷ ಕಟ್ಟೊಕೆ ನಿರ್ಧಾರ ಮಾಡಿದ್ದೇನೆ ಅಂತಾ ಅರುಣ್ ಜೈಟ್ಲಿಯವರಿಗೆ ಹೇಳಿದ್ದೆ. ನಂತರ ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದ್ವು. ಅದರ ಬಗ್ಗೆ ಮುಂದೆ ಯಾರಾದ್ರು ಪುಸ್ತಕ ಬರೆಯುತ್ತಾರೆ. ಅವರು ಕಾರ್ಯಕರ್ತರಿಗೆ ಸ್ಥಾನವನ್ನು ಕೊಡೊದಕ್ಕೆ ಬಿಡಲಿಲ್ಲಾ. ಅಲ್ಲಿಂದ ಹೊಸ ಬದಲಾವಣೆ ಪ್ರಾರಂಭವಾಯ್ತು. ಸರ್ಕಾರ ವಿಸರ್ಜನೆಗೆ ದೇವೇಗೌಡರು ಹೇಳಿದ್ರು. ತಾತ್ಕಾಲಿಕವಾಗಿ ಸರ್ಕಾರ ರಚನೆ ಮಾಡೋದಕ್ಕೆ ಬಿಜೆಪಿ ಮುಂದಾಗಿತ್ತು. ಅವತ್ತು ಯಡಿಯೂರಪ್ಪ ಅವರಿಗೆ ಅಧಿಕಾರ ಕೊಡಬೇಕು ಅಂತ ಇದ್ದೆ. ಕೊಡದೆ ಇರೋದಕ್ಕೆ ಹಲವು ಕುತಂತ್ರಗಳು ನಡೆಯಿತು. ಅದಕ್ಕೆ ಬಲಿಯಾದವನು ನಾನು. ೨೦೦೮ ರಿಂದ ಪಕ್ಷವನ್ನ ಉಳಿಸೊದಕ್ಕೆ ಪ್ರಯತ್ನ ಮಾಡಿದ್ದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಬಿಎಸ್‌ವೈ ವಿರುದ್ಧ ರಾಜಕೀಯ ವೈಷಮ್ಯ: ಕಾಂಗ್ರೆಸ್ ವಿರುದ್ಧ ಪ್ರಹ್ಲಾದ್ ಜೋಶಿ ಕಿಡಿ

ಹಲವು ಒತ್ತಡಗಳ ನಡುವೆಯೇ ದರ್ಶನ್‌ನನ್ನು ಅರೆಸ್ಟ್ ಮಾಡಿದ ಪೊಲೀಸ್ ಅಧಿಕಾರಿ ಯಾರು ಗೊತ್ತಾ..?

Sandalwood News: ಕೊನೆಗೂ ಸತ್ಯ ಬಾಯ್ಬಿಟ್ಟ ದರ್ಶನ್ ಮತ್ತು ಪವಿತ್ರಾ

- Advertisement -

Latest Posts

Don't Miss