Political News: ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಪ್ರೆಸ್ಮೀಟ್ ನಡೆಸಿ, ಮಾತನಾಡಿದ್ದು ಕೇಂದ್ರ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸ್ಟಿಂಗ್ ಡೈರೆಕ್ಟರ್-ಪ್ರೊಡ್ಯೂಸರ್ ಕುಮಾರಸ್ವಾಮಿ. ಈ ಸಂಪೂರ್ಣ ಸ್ಟಿಂಗ್ ಆಪರೇಷನ್ನ ನಿರ್ದೇಶಕ ಮತ್ತು ನಿರ್ಮಾಪಕ ಎಚ್. ಡಿ. ಕುಮಾರಸ್ವಾಮಿ. ಇದರ ಹಿಂದಿನ ಹುನ್ನಾರವನ್ನು ಸಿಸಿಬಿ ತನಿಖೆ ಬಹಿರಂಗಪಡಿಸಲಿದೆ. ಒಂದೇ ಕಲ್ಲಿನಲ್ಲಿ 4 ಹಕ್ಕಿ ಹೊಡೆಯುವ ಪ್ಲಾನ್ ಇದು. ಬಿಜೆಪಿ ಕುಮಾರಸ್ವಾಮಿ ಅವರನ್ನು ದಾಳವಾಗಿ ಬಳಸಿಕೊಂಡು ನಾಲ್ಕು ಪ್ರಮುಖ ಉದ್ದೇಶಗಳನ್ನು ಸಾಧಿಸಲು ಹೊರಟಿದೆ ಎಂದು ಲಕ್ಷ್ಮಣ್ ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಅವರ ತೇಜೋವಧೆ ಮಾಡಿ, ಅವರ ವರ್ಚಸ್ಸು ಹಾಗೂ ಅಹಿಂದ ಮತಗಳನ್ನು ಕಾಂಗ್ರೆಸ್ ವಿರುದ್ಧ ತಿರುಗಿಸುವುದು. ಡಿ. ಕೆ. ಶಿವಕುಮಾರ್ ಅವರ ಜನಪ್ರಿಯತೆಯನ್ನು ಸಹಿಸದೆ, 2028ರ ಚುನಾವಣೆ ದೃಷ್ಟಿಯಿಂದ ಅವರನ್ನು ರಾಜಕೀಯವಾಗಿ ಮುಳುಗಿಸುವುದು. ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ತಂದು, 2028ರಲ್ಲಿ ಜೆಡಿಎಸ್-ಬಿಜೆಪಿ ಸರ್ಕಾರ ರಚಿಸುವುದು. ಸುಳ್ಳುಗಳನ್ನೇ ಸತ್ಯವೆಂದು ನಂಬಿಸಲು ದಿನಕ್ಕೆ ಎರಡೆರಡು-ಮೂರು ಪತ್ರಿಕಾಗೋಷ್ಠಿಗಳನ್ನು ನಡೆಸಿ ಜನರಲ್ಲಿ ಕಾಂಗ್ರೆಸ್ ವಿರುದ್ಧ ಕೆಟ್ಟ ಅಭಿಪ್ರಾಯ ಮೂಡಿಸುವುದು ಕುಮಾರಸ್ವಾಮಿ ಉದ್ದೇಶ ಎಂದು ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.
ದಿನಾಂಕ 27/8/2026 ರಂದು ಎಚ್. ಡಿ. ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ರು. ಈ ಸ್ಟಿಂಗ್ ವಿಡಿಯೋ ತೋರಿಸಿ ಚರ್ಚಿಸಿದ್ದಾರೆ. 2028ರಲ್ಲಿ ಕಾಂಗ್ರೆಸ್ ಸೋಲಿಸಿ, 2029ರ ಲೋಕಸಭೆಯಲ್ಲಿ 28ಕ್ಕೆ 28 ಕ್ಷೇತ್ರ ಗೆಲ್ಲಿಸಿ ಎನ್ಡಿಎ ಅಧಿಕಾರಕ್ಕೆ ತರುತ್ತೇವೆ ಎಂದು ಹೇಳಿ ಮೋದಿಯವರಿಂದ ‘ಗೋ ಅಹೆಡ್’ ಪಡೆದು ಇವರು ಕಾರ್ಯಾಚರಣೆಗೆ ಇಳಿದಿದ್ದಾರೆ.
ಎಚ್. ಡಿ. ಕುಮಾರಸ್ವಾಮಿ ಅವರ ಜೊತೆ ಕೆಲಸ ಮಾಡುತ್ತಿರುವ ರಿತೇಶ್ ಪಾಂಡೆ, ವಿನೋದ್ ಶರ್ಮ ಹಾಗೂ ಮಾಧ್ಯಮ ವಿಭಾಗ ನೋಡಿಕೊಳ್ಳುವ ಮಾಜಿ ಪತ್ರಕರ್ತ ಪ್ರಜ್ವಲ್ ಪ್ರಸಾದ್ ಈ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ.
ಪ್ರಜ್ವಲ್ ಪ್ರಸಾದ್ ಸ್ಟಿಂಗ್ ಆಪರೇಷನ್ಗಳಲ್ಲಿ ಪರಿಣತಿ ಹೊಂದಿದವ. ಈ ಮೂವರೂ ಕುಮಾರಸ್ವಾಮಿ ಅವರ ಬಳಿ ತಿಂಗಳಿಗೆ ಲಕ್ಷಾಂತರ ರೂಪಾಯಿ ವೇತನ ಪಡೆಯುವ ಉದ್ಯೋಗಿಗಳು. ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೃಪಾ ಅಳವ ಅವರ ಸಂಭಾಷಣೆಯ ಸ್ಟಿಂಗ್ ಮಾಡಲಾಗಿತ್ತು. ಇದನ್ನು ರಾಕೇಶ್ ಶೆಟ್ಟಿ ಜೊತೆಗಿದ್ದ ಬಾಗೇಪಲ್ಲಿ ಪ್ರಶಾಂತ್ ಎಂಬಾತ ಮಾಡಿದ್ದು. ನಂತರ ಇದು ಕುಮಾರಸ್ವಾಮಿ ಬಣದ ಕೈಸೇರಿದೆ ಎಂದು ಲಕ್ಷ್ಮಣ ಹೇಳಿಕೆ ನೀಡಿದ್ದಾರೆ.
ಯಾರಿಗೂ ಸುಳಿವು ಸಿಗಬಾರದೆಂದು ದೆಹಲಿಯ ಕರೋಲ್ ಬಾಗ್ನಲ್ಲಿ 50,000 ರೂ. ನಗದು ನೀಡಿ ಮೊಬೈಲ್ ಖರೀದಿ ಮಾಡಿದ್ದಾರೆ. 7,700 ರೂ. ಮತ್ತು 10,000 ರೂ. ಮೌಲ್ಯದ ಎರಡು ಮೊಬೈಲ್ ಖರೀದಿಸಲಾಗಿದೆ. ಅಂಗಡಿಯವನ ಸಿಮ್ ಹಾಕಿ ಚೆಕ್ ಮಾಡಿದಾಗಲೇ ಸಿಸಿಬಿಗೆ ಐಎಂಇಐ ನಂಬರ್ ಸಿಕ್ಕಿದೆ. ಕೇಂದ್ರ ಸಚಿವರ ಅಧಿಕೃತ ನಿವಾಸದಿಂದಲೇ ಅಪ್ಲೋಡ್ ಆಗಿದೆ.
ನವದೆಹಲಿಯ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರ ಅಧಿಕೃತ ನಿವಾಸದಿಂದಲೇ ವೈ-ಫೈ ಬಳಸಿ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಬಂಧಿತ ರಿತೇಶ್ ಪಾಂಡೆ ಹೇಳಿಕೆ ನೀಡಿದ್ದು, ಕುಮಾರಸ್ವಾಮಿ ಅವರ ಸಮ್ಮುಖದಲ್ಲೇ ಪ್ರಜ್ವಲ್ ಪ್ರಸಾದ್ ವಿಡಿಯೋ ಅಪ್ಲೋಡ್ ಮಾಡಿದ್ದಾನೆ ಎಂದು ಒಪ್ಪಿಕೊಂಡಿದ್ದಾನೆ.
29.30 ಲಕ್ಷ ಸಂಶಯಾಸ್ಪದ ಹಣ ವರ್ಗಾವಣೆಯಾಗಿದೆ. ಪ್ರಜ್ವಲ್ ಪ್ರಸಾದ್, ರಿತೇಶ್ ಪಾಂಡೆ ಮತ್ತು ವಿನೋದ್ ಶರ್ಮ ನಡುವೆ 29,30,000 ರೂಪಾಯಿ ಆನ್ಲೈನ್ ವಹಿವಾಟು ನಡೆದಿದೆ. ಈ ಹಣದ ಮೂಲದ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಹೇಳಿದ್ದಾರೆ.




