ಹಾಸನ: ಹಾಸನದಲ್ಲಿಂದು ಜೆಡಿಎಸ್ ಸಭೆ ನಡೆದಿದ್ದು, ಈ ವೇಳೆ ಭಾಷಣ ಮಾಡಿದ ರೇವಣ್ಣ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ನಮ್ಮಅಭ್ಯರ್ಥಿ ಸ್ವರೂಪ್ ಗೆ ಟಿಕೆಟ್ ನೀಡಿದೆ. ಭವಾನಿಯವರೇ ಕುಮಾರಸ್ವಾಮಿ ಅವರಿಗೆ ಫೋನ್ ಮಾಡಿ ಟಿಕೆಟ್ ನೀಡುವಂತೆ ಹೇಳಿದ್ದರು. ನನಗೆ ನಮ್ಮ ಮಾವ ದೇವೆಗೌಡರ ಆರೋಗ್ಯ ಮುಖ್ಯ ಎಂದು ನಿರ್ಧಾರ ಮಾಡಿದ್ದಾರೆ. ಮೇ೧೦ ರಂದು ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ಕೊಡಬೇಕು. ತೆನೆ ಹೊತ್ತ ಮಹಿಳೆಗೆ ಮತ ನೀಡಿ ನಮ್ಮ ಅಭ್ಯರ್ಥಿ ಗೆಲ್ಲಿಸಬೇಕು ಎಂದು ರೇವಣ್ಣ ಮನವಿ ಮಾಡಿದ್ದಾರೆ.
ಮುಸಲ್ಮಾನರಿಗೆ ತೊಂದರೆ ಕೊಟ್ಟರೆ ನಾವು ಸುಮ್ಮನೇ ಇರೋದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆ. 2B ರಿಸರ್ವೇಷನ್ ಕೊಟ್ಟಿದ್ದು ದೇವೇಗೌಡರು . ಅದನ್ನು ಬಿಜೆಪಿಯವರು ತೆಗೆದು ಹಾಕಿದ್ದಾರೆ. ನಾವು ಅಧಿಕಾರಕ್ಕೆ ಬಂದು ಅದನ್ನ ಮತ್ತೆ ನೀಡುತ್ತೇವೆ ಎಂದು ರೇವಣ್ಣ ಭರವಸೆ ನೀಡಿದ್ಧಾರೆ.
‘ಆ ಮೂರು ಜನರನ್ನು ಮುದುರಿ, ಮೂಲೆಗೆ ಹಾಕಿ ನಮ್ಮ ರವಿ ಅಣ್ಣನನ್ನ ಪಕ್ಕಾ ಗೆಲ್ಲಿಸುತ್ತಾರೆ’
ಸಾವಿರಾರು ಕಾರ್ಯಕರ್ತರ ಬೆಂಬಲದೊಂದಿಗೆ ಶಾಸಕ ಎಲ್.ಎನ್ ನಾರಾಯಣಸ್ವಾಮಿ ನಾಮಪತ್ರ ಸಲ್ಲಿಕೆ
ಶೆಟ್ಟರ್ ಧ್ವಜ ಬದಲಿಸಿದರೆ ವಿಚಾರಧಾರೆ ಬದಲಾದೀತೇ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನೆ..