ಹಾಸನ: ೧೬ನೇ ವಾರ್ಡಿನ ನಗರಸಭೆ ಸದಸ್ಯರಾದ ಪ್ರಶಾಂತ್ ನಾಗರಾಜು ಹತ್ಯೆಯಾದ ಮೇಲೆ ತೆರವು ಆಗಿದ್ದ ಸ್ಥಾನಕ್ಕೆ ಚುನಾವಣೆಗೆ ಸ್ಪರ್ದೆ ಮಾಡಿದ್ದ ನವೀನ್ ನಾಗರಾಜು ಅವರ ಅವಿರೋಧ ಆಯ್ಕೆ ಸಹಕರಿಸಿದ ಜೆಡಿಎಸ್ ಮುಖಂಡರಿಗೆ ಹಾಗೂ ಮತದಾರರಿಗೆ ಅಭಿನಂದನೆ ಹೇಳುತ್ತೇನೆ. ಎರಡು ದಿನಗಳ ಹಿಂದೆ ಮೈಸೂರಿನಲ್ಲಿ ನಡೆದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರ ತರಬೇತಿ ಶಿಬಿರದಲ್ಲಿ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಯಾವುದೇ ಮಾತುಕತೆ ನಡೆದಿರುವುದಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹೆಚ್.ಪಿ. ಸ್ವರೂಪ್ ತಿಳಿಸಿದರು.
ಹಾಸನ ನಗರಸಭೆ 16ನೇ ವಾರ್ಡ್ ಉಪ ಚುನಾವಣೆ: ಜೆಡಿಎಸ್ ನವೀನ್ ನಾಗರಾಜ್ ಅವಿರೋಧ ಆಯ್ಕೆ..
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರದಂದು ಮಾತನಾಡಿ, ತೆರವುಗೊಂಡಿದ್ದ ೧೬ನೇ ವಾರ್ಡಿನ ಚುನಾವಣೆಗೆ ಮೂವರು ನಾಮಪತ್ರ ಸಲ್ಲಿಸಿ ನಂತರ ವಾಪಸ್ ಪಡೆಯುವ ಮೂಲಕ ನವೀನ್ ನಾಗರಾಜ್ ಅವಿರೋಧ ಆಯ್ಕೆಗೆ ಸಹಕರಿಸಿದ್ದು, ಅವರಿಗೂ ಕೂಡ ಧನ್ಯವಾದಗಳ ಹೇಳುತ್ತೇನೆ.
ಪ್ರಶಾಂತ್ ಅವರು ನನಗೆ ಉತ್ತಮ ಸ್ನೇಹಿತರಾಗಿದ್ದು, ಅವರಂತೆ ಅವರ ಸಹೋದರ ನವೀನ್ ನಾಗರಾಜ್ ಅವರು ಸ್ನೇಹಿತರು. ಅವರು ಈಗ ಅವಿರೋಧವಾಗಿ ಆಯ್ಕೆಯಾಗಿರುವುದು ನಮಗೆಲ್ಲಾ ಸಂತೋಷ ತಂದಿದೆ. ನವೀನ್ ನಾಗರಾಜ್ ಅವರು ಸ್ಪರ್ಧಿಸಲು ಸಹಕರಿಸಿದ ಜೆಡಿಎಸ್ ವರಿಷ್ಠರು ಆದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
ಜೆಡಿಎಸ್ ಪಕ್ಷದ ಅವಧಿಯಲ್ಲಿನ ಯೋಜನೆಗಳನ್ನು ಸಾರ್ವಜನಿಕರಿಗೆ ತಿಳಿಸುವ ನಿಟ್ಟಿನಲ್ಲಿ ನವೆಂಬರ್ ೧ ರಿಂದ ರಾಜ್ಯಾದ್ಯಂತ ಪಂಚರತ್ನ ಯಾತ್ರೆ ಆರಂಭವಾಗಲಿದ್ದು, ನವೆಂಬರ್ ೨೨ ರಂದು ಹಾಸನ ಜಿಲ್ಲೆಗೆ ಆಗಮಿಸಲಿದೆ. ಜಿಲ್ಲೆಯ ಅರಕಲಗೂಡು, ಸಕಲೇಶಪುರ, ಬೇಲೂರು, ಅರಸೀಕೆರೆ ಮೂಲಕ ಸಂಚರಿಸ ಲಿದ್ದು ರಾಜ್ಯದ ೧೨೬ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಯಾತ್ರೆ ಸಂಚಾರ ನಡೆಸಲಿದೆ ಎಂದರು.
ಟಿಕೆಟ್ ಹಂಚಿಕೆ ಕುರಿತು ಹಿರಿಯರ ಹಾಗೂ ದೇವರ ಆಶೀರ್ವಾದ ಯಾವ ರೀತಿ ಇದೆ ಎಂಬುದನ್ನು ಕಾದು ನೋಡುವುದಾಗಿ ಹೇಳಿದರು. ಇನ್ನು ಪಕ್ಷದಲ್ಲಿ ಯಾವ ಗೊಂದಲ ಇರುವುದಿಲ್ಲ ಎಲ್ಲಾ ಒಟ್ಟಾಗಿ ಪಕ್ಷವನ್ನು ಕೊಂಡೂಯ್ಯುವುದಾಗಿ ವಿಶ್ವಾಸವ್ಯಕ್ತಪಡಿಸಿದರು.
ಪತ್ರಿಕಾಗೋಷ್ಟಿಯಲ್ಲಿ ನಗರಸಭೆ ಸದಸ್ಯ ರಫೀಕ್, ಇರ್ಷಾದ್ ಪಾಷಾ, ೧೬ನೇ ವಾರ್ಡಿನ ನೂತನ ಸದಸ್ಯರಾದ ನವೀನ್ ನಾಗರಾಜ್, ಮಹೇಶ್ ಇತರರು ಇದ್ದರು.ಉಪಸ್ಥಿತರಿದ್ದರು.