political news: ಬೆಳಗಾವಿ: ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳದ್ದು ನಾಯಿಪಾಡು ಆಗಿದೆ ಎಂಬ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ತಿರುಗೇಟು ನೀಡಿದ್ದಾರೆ.
ಸರ್ಕಾರದಲ್ಲಿ ಲಿಂಗಾಯತ ನಾಯಕರನ್ನ ಕಡೆಗಣನೆ ಮಾಡಲಾಗಿದೆ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆ ಕುರಿತಂತೆ ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿರುವ ಎಚ್ ವಿಶ್ವನಾಥ್, ಜಾತಿ ಪಕ್ಷದ ಪ್ರತಿನಿಧಿ ಅಂತಾ ಮಾತಾಡ್ತಿರುವುದನ್ನು ನಾನು ಖಂಡಿಸುತ್ತೇನೆ. ನಿಮಗೆ ಕಾಂಗ್ರೆಸ್‌ನಲ್ಲಿ ಅವಕಾಶಗಳು ಸಿಕ್ಕಿವೆ. ಏಳು ಜನ ಮಂತ್ರಿ ಕೊಟ್ಟಿದ್ದಾರೆ ಇನ್ನೂ ಎಷ್ಟು ಜನ ಬೇಕಿತ್ತು. ಜಾತಿಯ ಮೇಲೆ ಯಾರನ್ನೂ ಪೋಸ್ಟಿಂಗ್ಸ್ ಕೊಡಲ್ಲ, ಬೇರೆ ಬೇರೆ ಜಾತಿಯವರಿಗೆ ಎಲ್ಲೆಲ್ಲಿ ಅವಕಾಶ ಮಾಡಿಕೊಡಬೇಕು ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ಲಿಂಗಾಯತರಿಗೆ ಏಳು ಮಂತ್ರಿ ಕೊಟ್ಟಿದ್ದೇವೆ, ಇನ್ನೆಷ್ಟು ಕೊಡಬೇಕು? ನಿಮಗೆ ಸಿಎಂ ಸ್ಥಾನ ಬೇಕಿತ್ತು ಅಂದ್ರೆ ನಾಯಕತ್ವ ತಗೊಳ್ಳಿ ಎಂದು ಸಿಡುಕಿನಿಂದಲೇ ಹೇಳಿದ ಹಳ್ಳಿ ಹಕ್ಕಿ ವಿಶ್ವನಾಥ್, ನಿಮ್ಮ ಜನಾಂಗದವರ ಕೈಯಲ್ಲಿ ಹೆಚ್ಚು ವೋಟ್ ಹಾಕಿಸಿಕೊಳ್ಳಿ. ಗೆದ್ದು ಬಂದು ಮುಖ್ಯಮಂತ್ರಿ ಅಗಿ, ಅದರಲ್ಲಿ ನಿಮ್ಮ ಆಸಕ್ತಿ ತೋರಿಸಿ. ಎಷ್ಟು ವೋಟ್ ಹಾಕಿಸಿದ್ದೀರಾ ನೀವು? ಇಲ್ಲಿ ಸಿದ್ದರಾಮಯ್ಯನವರಿಂದ ಎಷ್ಟು ವೋಟ್ ಬಿದ್ದಿದೆ. ಗೆದ್ದಿರೋ ನೀವೆಲ್ಲಾ ಸಿದ್ದರಾಮಯ್ಯನವರಿಂದ ಗೆದ್ದಿದ್ದೀರಿ. ನಾನು ಬಹಳ ಖಾರವಾಗಿ ಹೇಳಬೇಕಾಗುತ್ತೆ. ಹಾಗಾಗಿ ಅನಾವಶ್ಯಕವಾಗಿ ಮಾತಾಡಬೇಡಿ ಎಂದು ಕಿಡಿಕಾರಿದರು.
ಇನ್ನು, ಕುರುಬ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಹಾಕಿ ಹೆಚ್ಚು ಜನ ಗೆದ್ದಿದ್ದಾರೆ ಎಂದ ಎಚ್ ವಿಶ್ವನಾಥ್, ನಮ್ಮ ರಾಜ್ಯದಲ್ಲಿ ಇರುವ ಲಿಂಗಾಯತ ಸೇರಿದಂತೆ ಎಲ್ಲ ಧರ್ಮದವರು ಆಶೀರ್ವಾದ ಮಾಡಿದ್ದೀರಿ. ಹೆಚ್ಚಾಗಿ ಕುರುಬ ಸಮುದಾಯದ್ದೂ ಆಗಿದೆ. ಜಾತಿ ಆಧಾರದ ಮೇಲೆ ಅಧಿಕಾರಿ ಆಯ್ಕೆ ಆಗ್ತಿದ್ರೆ ಸರಿ ಮಾಡಲು ಹೇಳಿ. ಸಿದ್ದರಾಮಯ್ಯನವರಿಗೆ ಬಹಳ ಹತ್ತಿರ ಇದ್ದವರು ನೀವು. ಅದನ್ಯಾಕೆ ಬೀದಿಯಲ್ಲಿ ಬಂದು ದೊಡ್ಡ ರಂಪಾಟ ಮಾಡ್ತಿದ್ದೀರಾ. ಅಧಿಕಾರ ಶಾಹಿ ಆಡಳಿತವನ್ನ ಬೀದಿಗೆ ತಂದು ಮಾತಾಡ್ತಿದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು, ಶಾಮನೂರು ಶಿವಶಂಕರಪ್ಪ ಜಾತಿ ವಿಷಯ ಮಾತಾಡಿದ್ರೆ ಆಡಳಿತ ಕುಸಿಯುತ್ತೆ. ನಿಮಗೆ ಯಾರಿಗೂ ಜವಾಬ್ದಾರಿ ಇಲ್ವಾ, ಜವಾಬ್ದಾರಿ ಇಟ್ಕೊಂಡು ಮಾತಾಡಿ. ಸಣ್ಣ ಪುಟ್ಟ ಜಾತಿಗಳ ಭವಿಷ್ಯ ಇದೆ, ಅದನ್ನ ಗಮನದಲ್ಲಿಟ್ಟುಕೊಂಡು ಮಾತಾಡಿ. ಇದೆಲ್ಲ ಜನಕ್ಕೆ ಅರ್ಥ ಆಗುತ್ತೆ ಎಂದು ತಿರುಗೇಟು ನೀಡಿದರು.
ಗೊಂದಲದ ಗೂಡಾದ ಪಾಲಿಕೆ ಸಾಮಾನ್ಯ ಸಭೆ: ಒಂದು ಕಡೆ ಪ್ರತಿಭಟನೆ ಮತ್ತೊಂದು ಕಡೆ ಸಭೆ ಮುಂದೂಡಿಕೆ..!
ಗೋವಾದ ಮಾಪುಸಾದಲ್ಲಿ ಶಾಪಿಂಗ್ ಅನುಭವ ಹೇಗಿರತ್ತೆ ಗೊತ್ತಾ..? ಇಲ್ಲಿದೆ ನೋಡಿ ವೀಡಿಯೋ..
Police: ಕಾಂಗ್ರೆಸ್ ನಾಯಕನ ಮನೆಯಲ್ಲಿ ಕಳ್ಳತನ ಮಾಡಿದ ಖದೀಮರನ್ನು ಬಂದಿಸುವಲ್ಲಿ ಯಶಸ್ವಿಯಾದ ಪೊಲೀಸರು..!