Politiccal News: ರಾಜಕೀಯ ರಣರಂಗದಲ್ಲಿ ಮತ್ತೆ ಸಾಕ್ಷ್ಯಗಳ ಗಲಾಟೆ ಜೋರಾಗಿದೆ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪೆನ್ ಡ್ರೈವ್ ಮೂಲಕ ಸಾಕ್ಷಿಗಳನ್ನು ಕ್ರೂಢೀಕರಿಸಿದ್ದೇನೆ ಸಮಯ ಬಂದಾಗ ಬಿಡುಗಡೆ ಮಾಡುವೆ ಎಂದು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು. ಕುಮಾರಸ್ವಾಮಿ ಒಬ್ಬ ಹಿರಿಯ ನಾಯಕ ಅದಲ್ಲದೆ ಎರಡೆರಡು ಬಾರಿ ಮುಖ್ಯಮಂತ್ರಿಗಳಾಗಿ ಮಾಜಿ ಪ್ರಧಾನಿ ಮಗನಾಗಿ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ.
ಜೊತೆಗೆ ಅವರು ಸಾಕ್ಷಿ ಇದೆ ಎನ್ನುತ್ತಿರುವುದು ಕೇವಲ ಬ್ಲಾಕ್ ಮೇಲಿಂಗ್ ಮಾಡೋ ಹಾಗೆ ಕಾಣಿಸ್ತಿದೆ. ಅವರು ಈ ರೀತಿ ಮಾಡಬಾರದು. ಅವರಿಗೆ ಇದು ಶೋಭೆ ಅಲ್ಲ. ಸಾಕ್ಷಿ ಇದ್ದರೆ ಬಿಡುಗಡೆ ಮಾಡಲಿ ಎಂದು ಹೆಚ್.ಡಿ.ಕೆ ವಿರುದ್ಧ ವಾಗ್ದಾಳಿ ನಡೆಸಿದರು. ಹಾಗು ಮುಂದುವರಿದು ಮಾತನಾಡಿ ಹೆಚ್.ಡಿ.ಕುಮಾರ ಸ್ವಾಮಿಯೇ ವಿಪಕ್ಷ ನಾಯಕ ಎಂದು ವ್ಯಂಗ್ಯವಾಡಿದರು.
Siddaramaiha : ಸಿದ್ದರಾಮಯ್ಯ ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು…!