- Advertisement -
Tumakuru News: ತುಮಕೂರು: ಹಳೆಯ ವಸ್ತುಗಳು ತುಂಬಿದ್ದ ಕೊಠಡಿಗೆ ಬೆಂಕಿ ಬಿದ್ದಿದ್ದು, ಕೊಠಡಿಯಲ್ಲಿ ಮಲಗಿದ್ದ ವ್ಯಕ್ತಿ ಸುಟ್ಟು, ಕರಕಲಾಗಿದ್ದಾನೆ.
ತುಮಕೂರಿನ ಕ್ಯಾತಸಂದ್ರದಲ್ಲಿ ಈ ಘಟನೆ ನಡೆದಿದ್ದು, ತಡರಾತ್ರಿ ಘಟನೆ ನಡೆದ ಕಾರಣಕ್ಕೆ, ಕೊಠಡಿಯಲ್ಲೇ ಮಲಗಿದ್ದ ವ್ಯಕ್ತಿ, ಮಲಗಿದ್ದಲ್ಲೇ, ಸುಟ್ಟು ಹೋಗಿದ್ದಾನೆ. ಘಟನೆ ತಿಳಿದ ತಕ್ಷಣ, ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಬೆಂಕಿನ ನಂದಿಸಿದ್ದಾನೆ. ಬಳಿಕ ಕೊಠಡಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ಇದ್ದು, ಕ್ಯಾತಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ದೇಹ ತುಮಕೂರು ಜಿಲ್ಲಾಸ್ಪತ್ರೆ ಶವಗಾರಕ್ಕೆ ರವಾನಿಸಲಾಗಿದೆ. ಇನ್ನು ಸಾವನ್ನಪ್ಪಿದವರ ಗುರುತು ಇನ್ನೂ ಪತ್ತೆ ಆಗದ ಕಾರಣ, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
- Advertisement -