ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಏಕಾಂಗಿಯಾದ ಹಮಾಸ್: ಬೆಂಬಲ ಹಿಂಪಡೆದ ರಷ್ಯಾ, ಇರಾನ್

International News: ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದ್ದಾಗ, ಅದನ್ನು ಸಂಭ್ರಮಿಸಿ, ಹಣಕಾಸು, ಮಿಲಿಟರಿ ನೆರವು ನೀಡಿದ್ದ ರಷ್ಯಾ ಮತ್ತು ಇರಾನ್, ಇದೀಗ ಹಮಾಸ್ ಬೆಂಬಲವನ್ನು ಹಿಂಪಡೆದಿದೆ. ಈ ಮೂಲಕ ಎರಡೂ ರಾಷ್ಟ್ರಗಳು ಈ ಯುದ್ಧದಿಂದ ಹಿಂದೆ ಸರಿದಿದ್ದು, ಹಮಾಸ್ ಏಕಾಂಗಿಯಾಗಿದೆ.

ಆದರೆ ಇಲ್ಲಿ ಇರಾನ್ ಹಮಾಸ್‌ಗೆ ರಾಜಕೀಯ ಬೆಂಬಲ ನೀಡಿದರೂ, ನೇರವಾಗಿ ಹೋರಾಟದಲ್ಲ ಪ್ರವೇಶಿಸುವುದಿಲ್ಲ ಎಂದಿದೆ. ಇನ್ನು ಈ ಬದಲಾವಣೆಗೆ ಕಾರಣವೇನು ಎಂದರೆ, ಗಾಜಾದಲ್ಲಿ ಇಸ್ರೇಲ್, ಹಮಾಸ್ ಉಗ್ರರನ್ನು ಮಣ್ಣುಮುಕ್ಕಿಸುತ್ತಿರುವಂತೆ, ಕೆಲವು ಅಮೆರಿಕನ್ನರು ಇರಾನ್ ಮೇಲೆ ದಾಳಿಗೆ ಕರೆ ನೀಡಿದ್ದಾರೆ.

ಇನ್ನು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಮಾತನಾಡಿ, ಇರಾನ್, ಲೆಬಿನಾನ್, ಹಿಜ್ಬುಲ್ಲಾ, ಇಸ್ರೇಲ್- ಪ್ಯಾಲೇಸ್ತಿನ್ ಯುದ್ಧವನ್ನು, ಪ್ರಮುಖ ಪ್ರಾದೇಶಿಕ ಸಂಘರ್ಷವಾಗಿ, ಪರಿವರ್ತಿಸಲು ಪ್ರಯತ್ನಿಸುತ್ತಾರೆ ಎಂದು ಮಾಸ್ಕೋ ನಂಬುವುದಿಲ್ಲ ಎಂದು ಹೇಳಿದ್ದಾರೆ. ಲೆಬಿನಾನ್, ಇರಾನ್‌ನ ಯಾವುದೇ ಪ್ರಮುಖ ಸಂಘರ್ಷದ ಬಯಕೆ ಇಲ್ಲ ಎಂದು ಮಾಸ್ಕೋ ಹೇಳಿದೆ. ಈ ಬಿಕ್ಕಟ್ಟಿನಲ್ಲಿ ಯಾವುದೇ ದೇಶ ಭಾಗಿಯಾಗಲು ಬಯಸುವುದಿಲ್ಲ ಎಂದು ಲಾವ್ರೋವ್ ಹೇಳಿದ್ದಾರೆ.

ಹೀಗೆ ಹೇಳಿಕೆ ಕೊಡುವ ಮೂಲಕ ರಷ್ಯಾ ಮತ್ತು ಇರಾನ್ ದೇಶಗಳು, ಹಮಾಸ್‌ಗೆ ಕೊಟ್ಟ ಬೆಂಬಲವನ್ನು ಹಿಂಪಡೆದು, ಹಿಂದೆ ಸರಿದಿದೆ. ಇನ್ನು ಇಸ್ರೇಲ್ ಮತ್ತು ಹಮಾಸ್ ಯುದ್ಧದ ಬಗ್ಗೆ ಹೇಳುವುದಾದರೆ, ಹಮಾಸ್ ಉಗ್ರರನ್ನು ಇಸ್ರೇಲ್ ಸೇನೆ ಮುಕ್ಕಾಲು ಭಾಗದಷ್ಟು ಮುಗಿಸಿದೆ. ಗಾಜಾದ ಮೂಲೆ ಮೂಲೆಗೆ ತಲುಪಿ ನಾವು ಉಗ್ರರನ್ನು ಹುಡುಕುವುದರಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ಇಸ್ರೇಲ್ ಸಪೋರ್ಟ್‌ಗೆ ಬಂದ ಅಮೆರಿಕ: ಮಿಡಲ್‌ ಈಸ್ಟ್‌ನಲ್ಲಿ ಪಡೆಗಳ ನಿಯೋಜನೆ ವಿಸ್ತರಣೆ

ಅಲ್ ಶಿಫಾ ಆಸ್ಪತ್ರೆಗೆ ನುಗ್ಗಿದ ಇಸ್ರೇಲ್ ಸೇನೆ: ಶಂಕಿತ ಹಮಾಸ್ ಕಮಾಂಡ್ ಸೆಂಟರ್ ನಾಶ್

ಗಾಜಾದಲ್ಲಿರುವ ಹಮಾಸ್ ಉಗ್ರರ ಸಂಸತ್ತ ಕಟ್ಟಡವನ್ನೇ ವಶಪಡಿಸಿಕೊಂಡ ಇಸ್ರೇಲ್ ಸೇನೆ

About The Author