International News: ಹಮಾಸ್ ಮತ್ತು ಇಸ್ರೇಲ್ ಯುದ್ಧಕ್ಕೆ ಸಂಬಂಧಿಸಿದಂತೆ, ಕದನ ವಿರಾಮದ ಮಾತುಕತೆ ಪ್ರಕ್ರಿಯೆಯಲ್ಲಿದ್ದು, ಸದ್ಯದಲ್ಲೇ ಇಸ್ರೇಲ್ ಜೊತೆ ಕದನ ವಿರಾಮ ಮಾಡಲಿದ್ದೇವೆ ಎಂದು ಹಮಾಸ್ ನಾಯಕ, ಇಸ್ಮಾಯಿಲ್ ಹನಿಯೆಹ್ ಹೇಳಿದ್ದಾರೆ.
ಸುಮಾರು 240 ಇಸ್ರೇಲಿ ಒತ್ತೆಯಾಳುಗಳು ಬಿಡುಗಡೆ ವಿಚಾರವಾಗಿ ಮಧ್ಯವರ್ತಿಗಳು ಮಾತುಕತೆ ನಡೆಸಿದ್ದು, ಶೀಘ್ರದಲ್ಲೇ ಕದನ ವಿರಾಮ ನಡೆಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಅಕ್ಟೋಬರ್ 7ಕ್ಕೆ ಶುರುವಾದ ಹಮಾಸ್ ಮತ್ತು ಇಸ್ರೇಲ್ ಯುದ್ಧ ಇದುವರೆಗೂ ಮುಗಿದಿಲ್ಲ. ಇಸ್ರೇಲ್ ಮೇಲೆ ದಾಳಿ ಮಾಡಿದ ಹಮಾಸ್, ಸಾವಿರಕ್ಕೂ ಹೆಚ್ಚು ಮಂದಿಯನ್ನು ಹತ್ಯೆ ಮಾಡಿತ್ತು.
ಇನ್ನು ಹಮಾಸ್ ದಾಳಿಗೆ ಪ್ರತೀಕಾರವಾಗಿ, ಇಸ್ರೇಲ್ 11ಸಾವಿರಕ್ಕೂ ಹೆಚ್ಚು ಪ್ಯಾಲೇಸ್ತಿನ್ ನಾಗರೀಕರನ್ನು ಸೇರಿ, ಹಮಾಸ್ ಉಗ್ರರ ಹತ್ಯೆ ಮಾಡಿತ್ತು. ಅಲ್ಲದೇ, ಹಮಾಸ್ ಉಗ್ರರನ್ನು ಸದೆಬಡೆಯಲು ಗಾಜಾದ ಮೂಲೆ ಮೂಲೆಗೆ ಇಸ್ರೇಲ್ ಸೇನೆ ದಾಳಿ ಮಾಡಿದ್ದು, ಎಲ್ಲ ಒತ್ತೆಯಾಳುಗಳನ್ನು ನಾವು ಬಿಡಿಸಿಕೊಳ್ಳುತ್ತೇವೆ ಎಂದು ಪಣ ತೊಟ್ಟಿತ್ತು.
ಇದೀಗ ಹಮಾಸ್ ನಾಯಕ ಇಸ್ಮಾಯಿಲ್ ಕದನ ವಿರಾಮದ ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆಗೆ, ಇಸ್ರೇಲ್ ಪ್ರಧಾನಿ ಪ್ರತಿಕ್ರಿಯೆ ಹೇಗಿರುತ್ತದೆ ಅನ್ನೋದೇ ಕುತೂಹಲವಾಗಿದೆ. ಏಕೆಂದರೆ, ಹಮಾಸ್ ಉಗ್ರರನ್ನು ಪೂರ್ತಿಯಾಗಿ ಮುಗಿಸುವುದೇ ನಮಗೆ ಕದನ ವಿರಾಮ ಎಂದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿಕೆ ನೀಡಿದ್ದರು. ಹಾಗಾಗಿ ಹಮಾಸ್ ಜೊತೆ ಶಾಂತಿ ಮಾತುಕತೆ ನಡೆಸಿ, ಕದನ ವಿರಾಮಕ್ಕೆ ಒಪ್ಪಿಗೆ ನೀಡುತ್ತಾರಾ ಇಲ್ಲವಾ ಅಂತಾ ಕಾದು ನೋಡಬೇಕಿದೆ.
ಇಸ್ರೇಲ್ ಪ್ರಧಾನಿಯನ್ನು ಗುಂಡಿಕ್ಕಿ ಕೊಲ್ಲಬೇಕು ಎಂದ ಕಾಂಗ್ರೆಸ್ ಸಂಸದ.
ಇಸ್ರೇಲ್‌ಗೆ ಪಾಕ್ ಸಪೋರ್ಟ್: ಹಮಾಸ್ ವಿರುದ್ಧ ಶಸ್ತ್ರಾಸ್ತ್ರ ಸರಬರಾಜು..?
ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿ ಅಧಿಕಾರಿಗೆ ಜೀವ ಬೆದರಿಕೆ..!