Monday, February 3, 2025

Latest Posts

ಯುವತಿಯನ್ನು ಗುಂಡಿಕ್ಕಿ ಕೊಂದ ಹಮಾಸ್ ಉಗ್ರರು: ಇಸ್ರೇಲ್ನಿಂದ ವೀಡಿಯೋ ರಿಲೀಸ್

- Advertisement -

International News: ಅಕ್ಟೋಬರ್ 7ರಂದು ಶುರುವಾಗಿದ್ದ ಹಮಾಸ್-ಇಸ್ರೇಲ್ ಯುದ್ಧಇನ್ನುವರೆಗೂ ಮುಗಿದಿಲ್ಲ. ಪ್ರತಿದಿನ ಇಸ್ರೇಲ್ ಸೇನೆ ಹಮಾಸ್ ಉಗ್ರರಿಗೆ ಸಂಬಂಧಪಟ್ಟ ಹಲವಾರು ವೀಡಿಯೋಗಳನ್ನು ತನ್ನ ಟ್ವೀಟರ್‌ ಖಾತೆಯಲ್ಲಿ ಬಿಡುಗಡೆ ಮಾಡುತ್ತಿದೆ. ಅದರಂತೆ ಇಂದು ಕೂಡ ಹಮಾಸ್ ಉಗ್ರರು ಯುವತಿಯನ್ನು ಗುಂಡಿಕ್ಕಿ ಕೊಂದ ವೀಡಿಯೋವನ್ನು, ಇಸ್ರೇಲ್ ಸೇನೆ ರಿಲೀಸ್ ಮಾಡಿದ್ದು, ಈ ದೃಶ್ಯ ಭೀಕರವಾಗಿದೆ.

ಈ ಯುವತಿಯೊಂದಿಗೆ ಇನ್ನು ಕೆಲವರು ಉಗ್ರರಿಂದ ತಪ್ಪಿಸಿಕೊಂಡು ಓಡುತ್ತಿರುವುದು ಕಂಡುಬರುತ್ತದೆ. ಇಸ್ರೇಲ್‌ನಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದ್ದು, ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿತ್ತು. ಈ ವೀಡಿಯೋವನ್ನೇ ಇಸ್ರೇಲ್ ವಿದೇಶಾಂಗ ಸಚಿವಾಲಯ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

ವೀಡಿಯೋದಲ್ಲಿ ಯುವತಿ ಸೇರಿ ಕೆಲವರು ಹಮಾಸ್ ಉಗ್ರ ಅಟ್ಟಾಡಿಸಿಕೊಂಡು ಹೋಗುತ್ತಿದ್ದು, ಯುವತಿಯನ್ನು ಗುಂಡಿಕ್ಕಿ ಕೊಂದಿದ್ದಾನೆ. ಆದರೆ ಇದಕ್ಕೂ ಮುನ್ನ ಯುವತಿ ತನ್ನನ್ನು ಬಿಟ್ಟುಬಿಡುವಂತೆ ಕೇಳಿದ್ದಾಳೆ. ಆದರೂ ಆಕೆಯ ಮಾತನ್ನು ಕೇಳದೇ, ಹಮಾಸ್ ಉಗ್ರರು ಕ್ರೂರತನ ಮೆರೆದಿದ್ದಾರೆ.

ಇಸ್ರೇಲ್ ಪ್ರಧಾನಿಯನ್ನು ಗುಂಡಿಕ್ಕಿ ಕೊಲ್ಲಬೇಕು ಎಂದ ಕಾಂಗ್ರೆಸ್ ಸಂಸದ.

ಇಸ್ರೇಲ್‌ಗೆ ಪಾಕ್ ಸಪೋರ್ಟ್: ಹಮಾಸ್ ವಿರುದ್ಧ ಶಸ್ತ್ರಾಸ್ತ್ರ ಸರಬರಾಜು..?

ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿ ಅಧಿಕಾರಿಗೆ ಜೀವ ಬೆದರಿಕೆ..!

- Advertisement -

Latest Posts

Don't Miss