Saturday, July 12, 2025

Latest Posts

ಕಾಲೇಜು ಆವರಣದಲ್ಲೇ ವಿದ್ಯಾರ್ಥಿನಿ ಆತ್ಮಹತ್ಯೆ: ಅವಮಾನವಾಗಿದ್ದಕ್ಕಾ ಈ ನಿರ್ಧಾರ..?

- Advertisement -

Hassan News: ಹಾಸನದ ರಾಜೀವ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಇದೇ ಕಾಲೇಜಿನ ಆವರಣದಲ್ಲಿ ನಡೆದಿದೆ.

ಮೊದಲ ವರ್ಷದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿ ಡಿಪ್ಲೋಮೋ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಮಾನ್ಯ(19), ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದಾಳೆ. ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದಳು ಎಂಬ ಆರೋಪ ಹಿನ್ನೆಲೆಯಲ್ಲಿ ಉಪನ್ಯಾಸಕರು ಬುದ್ಧಿವಾದ ಹೇಳಿದ್ದರು.

ಎಲ್ಲರ ಮುಂದೆ ಅವಮಾನ ಆಯ್ತು ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಆದರೆ ಆಕೆಯ ಪೋಷಕರು ಹೇಳೋದೇ ಬೇರೆ. ಕಾಲೇಜಿನವರು ಕೆಲವು ಮಾಹಿತಿಗಳನ್ನ ಮುಚ್ಚಿಡುತ್ತಿದ್ದಾರೆ. ನಮ್ಮ ಬಳಿ ಯಾವುದೇ ಸತ್ಯ ಹೇಳುತ್ತಿಲ್ಲ ತಲೆಸುತ್ತು ಬಂದು ಬಿದ್ದರೂ ಎನ್ನುತ್ತಾರೆ. ಮತ್ತೊಬ್ಬರು ಬೇರೆ ರೀತಿಯ ಉತ್ತರ ಕೊಡುತ್ತಾರೆ. ನನ್ನ ಮಗಳ ಸಾವಿಗೆ ಪರೋಕ್ಷವಾಗಿ ಕಾಲೇಜು ಆಡಳಿತ ಮಂಡಳಿ ಕಾರಣವಾಗಿದೆ ಎಂದು ವಿದ್ಯಾರ್ಥಿನಿಯ ತಾಯಿ ಆರೋಪಿಸಿದ್ದಾರೆ. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ರಾಜ್ಯೋತ್ಸವ ಮುಗಿಸಿ ಬರುತ್ತಿದ್ದಾಗ ಬೈಕ್ ಡಿಕ್ಕಿ, ಇಬ್ಬರು ಸಾವು

ತಾಯಿಯನ್ನು ನಿಂದಿಸಿದ ಮಾವನನ್ನು ಇರಿದು ಕೊಂದ ಅಳಿಯ

ಸರಳ ಪೂಜೆಯ ಮೂಲಕ ಸರ್ಕಾರಿ ನಿವಾಸಕ್ಕೆ ಕಾಲಿಟ್ಟ ಸಚಿವ ಸಂತೋಷ್ ಲಾಡ್

- Advertisement -

Latest Posts

Don't Miss