Saturday, July 5, 2025

Latest Posts

ಮತದಾರರಿಗೆ ಆಮಿಷ ಒಡ್ಡಿದ್ರಾ ಹಾಸನದ ಬಿಜೆಪಿ ಅಭ್ಯರ್ಥಿ ಪ್ರೀತಂಗೌಡ..?

- Advertisement -

ಹಾಸನ : ಹಾಸನ ಶಾಸಕ ಪ್ರೀತಂಗೌಡ ಪ್ರಚಾರದ ವೈಖರಿ ನೋಡಿದ್ರೆ, ಅವರು ಮತದಾರರಿಗೆ ಆಮಿಷ ಒಡ್ಡಿದ್ರಾ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಶಾಸಕ ಪ್ರೀತಂಗೌಡ ದೇವರ ಹೆಸರಿನಲ್ಲಿ ಮತದಾರರನ್ನು ಸೆಳೆಯುವ ಯತ್ನ ಮಾಡಿದ್ದಾರೆ.

ದೇವರ ಮುಂದೆ ಮಂಗಳಾರತಿ ಮಾಡಿ ನನಗೆ ಮಾತು ಕೊಡಿ ಎಂದು ಪ್ರೀತಂಗೌಡ ಮತ ಕೇಳಿದ್ದಾರೆ. ಹಾಸನ ತಾಲೂಕಿನ ಸಾಲಗಾಮೆ ಮಲ್ಲನಾಯಕನಹಳ್ಳಿಯಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಮಲ್ಲನಾಯಕನಹಳ್ಳಿಯಲ್ಲಿ ಪ್ರೀತಂಗೌಡ ಪ್ರಚಾರದ ವೇಳೆ ತೆರೆದ ವಾಹನದಲ್ಲಿ ಪ್ರೀತಂಗೌಡರ ಪಕ್ಕದಲ್ಲಿ ನಿಂತು ಗ್ರಾಮದ ಮುಖಂಡರು ಈ ರೀತಿ ಮಾತನಾಡಿದ್ದಾರೆ.

ಗ್ರಾಮದ ದೇವಸ್ಥಾನ ಅಲ್ಲದೆ ಇನ್ನು ಮುಂದೆ ನೀವು ಮಾಡಬೇಕಾದ ಕೆಲಸ ಬೇಜಾನ್ ಇದೆ. ಅದನ್ನೆಲ್ಲ ಮಾಡಿಕೊಡಿ, ನಮ್ಮವರೆಲ್ಲಾ ಸೇರಿ ನಿಮಗೆ ಮತ ಚಲಾಯಿಸುತ್ತೀವಿ ಎಂದು ಗ್ರಾಮದ ಮುಖಂಡರು ಹೇಳಿದ್ದಾರೆ. ಈ ವೇಳೆ ಮಾತನಾಡಿದ ಶಾಸಕ ಪ್ರೀತಂಗೌಡ,

ಅಣ್ಣ ಇಲ್ಲಿ ಎಲ್ಲಾ ತಾಯಂದಿರೇ ಇರೋದು ಅದಕ್ಕೆ ಮುಕ್ತವಾಗಿ ಕೇಳ್ತಿದ್ದೀನಿ. ಊರಲ್ಲಿ ಎಷ್ಟು ಓಟು ಇದೆಯಣ್ಣ, ನಿಮ್ಮೂರಿನಲ್ಲಿ ಹೇಳಿ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಗ್ರಾಮದ ಓರ್ವ ಯುವಕ 150 ಓಟು ಇದೆ ಎಂದು ಹೇಳಿದ್ದಾರೆ. ಈ ವೇಳೆ ಮಾತನಾಡಿದ ಪ್ರೀತಂಗೌಡ, 150 ಇದೆ ಓಟಿಂಗ್ ಆಗೋದು 120, 130 ಅಲ್ವೇನಣ್ಣ..? 120, 130 ಕ್ಕೆ ಎಷ್ಟು ಓಟು ಹಾಕ್ತಿರಾ ಹೇಳಿ, ಒಂದು ಲೆಕ್ಕಾ ಇರಲಿ ನನಗೆ, ಎಷ್ಟು ಹೇಳಿ ಅಣ್ಣಾ. ಕಳೆದ ಚುನಾವಣೆಯಲ್ಲಿ ನನಗೆ 92 ಬಂದಿರೋದು ನಿಮ್ಮ ಊರಿಂದ ಅಂತ ಗೊತ್ತಿಲ್ಲ, ಟೋಟಲ್ ಬೀಕನಹಳ್ಳಿ ಎಲ್ಲಾ ಸೇರಿ 92 ಬಂದಿರೋದು. ಈ ಬಾರಿ ನಿಮ್ಮ ಊರಿಂದ ಎಷ್ಟು ಓಟು ಹಾಕ್ತಿರಾ ಹೇಳಿ ಎಂದು ಮತ್ತೆ ಪ್ರೀತಂ ಪ್ರಶ್ನಿಸಿದ್ದಾರೆ. 65-70 ಎಂದು ಗ್ರಾಮದ ಗ್ರಾಮಸ್ಥರು ಹೇಳಿದ್ದಾರೆ.

65- 70 ಓಟು ಹಾಕುಸ್ತಿನಿ ಅಂತ ನಮ್ಮ ಹಿರಿಯರು, ನಮ್ಮ ತಾಯಂದಿರು ಎಲ್ಲಾ ಸೇರಿ ಹೇಳ್ತಿದ್ದಾರೆ. ದೇವಸ್ಥಾನದ ವಿಚಾರದಲ್ಲಿ ಯಾರು ಸುಳ್ಳು ಹೇಳಂಗಿಲ್ಲ. 70 ಜನ ಯಾರ್ಯಾರು ಮತ ಹಾಕುವವರು ಬಂದು ದೇವಸ್ಥಾನದ ಮುಂದೆ ಮಂಗಳಾರತಿ ಮಾಡ್ಸಿ ನೀವು ಗುದ್ದಲಿ ಪೂಜೆ ಮಾಡಿ ಕೆಲಸ ಪ್ರಾರಂಭ ಮಾಡಿಸಿ. ದೇವಸ್ಥಾನ ಮಾಡಿಕೋಡೊದು ನನ್ನ ಜವಾಬ್ದಾರಿ. ಆ ಎಪ್ಪತ್ತು ಜನನು ಬಂದು ಪೂಜೆ ಮಾಡ್ಸಿ ಪ್ರೀತಂಗೌಡರ ಜೊತೆ ಇರ್ತಿವಿ, ಓಟು ಹಾಕೊಡ್ತಿವಿ ಅಂತ ಮಾತು ಕೊಡಿ ಉಳಿದಿದ್ದು ಕೆಲಸ ನಾನು ಮಾಡ್ತಿನಿ ಆಗಬಹುದಾ ಎಂದು ಪ್ರೀತಂ ಗ್ರಾಮಸ್ಥರಲ್ಲಿ ಕೇಳಿದ್ದಾರೆ.

ಎಪ್ಪತ್ತಕ್ಕಿಂತ ಕಡಿಮೆ ಓಟು ಬಂದ್ರೆ ಚುನಾವಣೆ ಆದ್ಮೇಲೆ ಮಾತಾಡೋದು. ಯಾರು ಎಪ್ಪತ್ತು ಜನ ಅಂತ ಈಗ ಕರ್ಸಣ್ಣ, ಪೂಜೆ ಮಾಡ್ಸಿಬಿಟ್ಟು ನನಗೆ ಮಾಡಿಕೊಡಿ. ಏಕೆಂದರೆ ನನಗೆ ನೆಂಟಸ್ಥನದ್ದು ಕಾಟ ಜಾಸ್ತಿ ನನಗೆ. ಊರಲ್ಲಿ ಇರ್ತಾರೆ, ಹಾಸನದಲ್ಲಿ ಇರ್ತಾರೆ ಚುನಾವಣೆ ಬಂದತಕ್ಷಣ ಇಲ್ಲಿ ಬಂದು ನೆಂಟಸ್ಥನ ಮಾಡ್ಕಂಡು, ನಮ್ಮ ಅಣ್ಣ ತಮ್ಮ, ಅವರು ನನಗೆ,  ನೆಂಟರು, ಇವರು ನನಗೆ ನೆಂಟರು ಅಂತ ಅವರ ಕಡೆಗೆ ಮುಖ ಕೊಟ್ಟರೆ ನಾನ್ ಮಾಡಿದ್ ಕೆಲ್ಸಕ್ಕೆ ಕೂಲಿ ಯಾರು ಕೊಡೋದು..? ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ, ಓಟು ಹಾಕೋ ಎಪ್ಪತ್ತು ಜನ ಸೇರುಸ್ಕಳಿ ಅಣ್ಣಾ. ನಿಮ್ಮ ಕೈಮುಗಿದು ಕೇಳ್ಕತಿನಿ, ಎಪ್ಪತ್ತು ಜನನು ಮಂಗಳಾರತಿ ಮಾಡಿ ಎಪ್ಪತ್ತು ಜನನು ಪ್ರೀತಂಗೌಡಂಗೆ ಓಟು ಹಾಕ್ತಿವಿ ಅಂತ ತೀರ್ಮಾನ ಮಾಡಿ ನಾನು ಮಾಡಿಕೊಡ್ತಿನಿ ನನ್ನ ಜವಾಬ್ದಾರಿ. ಆಗಬಹುದಾ ಅಣ್ಣಾ ಆಗಬಹುದಾ ಅಕ್ಕ ಎಂದು ಪ್ರೀತಂಗೌಡ ಮತದಾರರಲ್ಲಿ ಕೇಳಿದ್ದಾರೆ.

ಅಲ್ಲದೇ, ಮಲ್ಲನಾಯಕನಹಳ್ಳಿಯಲ್ಲಿ ದಿ.ಎಚ್.ಎಸ್.ಪ್ರಕಾಶ್ ಅವರ ಸಂಬಂಧಿಕರು ಹೆಚ್ಚಿರುವ ಊರು ಎನ್ನುವ ಮೂಲಕ, ಗ್ರಾಮದಲ್ಲಿ ಪ್ರಚಾರ ಮಾಡುವ ವೇಳೆ ಸ್ವರೂಪ್ ಹೆಸರು ಹೇಳದೆ ಪರೋಕ್ಷವಾಗಿ ಅವರ ಸಂಬಂಧಿಕರು ಎನ್ನುವ ಕಾರಣಕ್ಕೆ ಮತ ಹಾಕಬೇಡಿ ಎಂದು ಪ್ರೀತಂಗೌಡ ಹೇಳಿದ್ದಾರೆ.

‘ಹಿಂದಿ ಆಳ್ವಿಕೆ ಬೇಡ ಕನ್ನಡದ ಪಕ್ಷ ಬೇಕು ಅಂತ ಜನ ನಿರೀಕ್ಷಿಸಿದ್ದಾರೆ’

ಮೋದಿ ವಿಷದ ಹಾವೆಂಬ ಹೇಳಿಕೆ ಬಗ್ಗೆ ಸ್ಪಷ್ಟನೆ ಕೊಟ್ಟ ಮಲ್ಲಿಕಾರ್ಜುನ ಖರ್ಗೆ..

‘ಕುತಂತ್ರಿಗಳು ಒಂದ್‌ ಹೆಣ್ಣುಮಗು ಮೇಲೆ ಕೇಸ್ ಹಾಕೋಕ್ಕೆ ಇಳಿದಿದ್ದಾರೆ’

- Advertisement -

Latest Posts

Don't Miss