ಮಲೆನಾಡಿನ ಪ್ರಮುಖ ಬೆಳೆ ಅಂದ್ರೆ ಕಾಫಿ, ಕಾಫಿಬೆಳೆಯನ್ನೇ ನಂಬಿಕೊಂಡು ಲಕ್ಷಾಂತರ ಕುಟುಂಬಗಳು ಜೀವನ ಸಾಗಿಸ್ತಾ ಇದ್ದಾರೆ. ಈ ಬಾರಿ ಹೆಚ್ಚು ಮಳೆಯಿಂದ ಕಾಫಿ ಹೂ ಉರಿಹೋಗಿತ್ತು, ಇದೀಗ ಕೊಯ್ಲಿಗೆ ಬಂದಿರೋ ಕಾಫಿಗೂ ಅದೇ ವರುಣನ ಕಂಟಕ ಎದುರಾಗಿದೆ. ಕಳೆದ ಮೂರು ದಿನಗಳಿಂದ ಮಲೆನಾಡು ಭಾಗದಲ್ಲಿ ಸುರಿದ ಅಕಾಲಿಕ ಮಳೆಯಿಂದ ಅಳಿದುಳುದಿರೋ ಕಾಫಿಯೂ ನೆಲಕಚ್ತಿದೆ. ಅಕಾಲಿಕ ಮಳೆಯಿಂದ ಕಂಗಾಲಾಗಿರೋ ಬೆಳೆಗಾರರು, ಯಾಕಾದ್ರೂ ಬರ್ತಿದ್ಯಪ್ಪ ಮಳೆ ಅಂತಿದ್ದಾರೆ…
ಈ 6 ರೀತಿಯ ಜನರ ಮನೆಯಲ್ಲಿ ಎಂದಿಗೂ ಊಟ ಮಾಡಬೇಡಿ..- ಭಾಗ 1
ಹಾಸನ ಜಿಲ್ಲೆಯ ಮಲೆನಾಡು ಭಾಗದ ಬಹುತೇಕ ಮಂದಿಯ ಪ್ರಮುಖ ಬೆಳೆಯೇಎ ಕಾಫಿ. ಈ ಕಾಫಿ ಬೆಳೆಗೆ ವರಣ ದೇವನೇ ಕಂಟಕವಾಗಿದ್ದಾನೆ. ಕಳೆದ ನಾಲ್ಕೈದು ತಿಂಗಳಿನಿಂದ ಬಾರೀ ಪ್ರಮಾಣದಲ್ಲಿ ಮಳೆಯಾಗಿ, ಕಾಫಿ ಹೂ ಬಿಟ್ಟಿದ್ದಾಗ ಬಾರಿ ಮಳೆಗೆ ಹೂ ಹುದುರಿತ್ತು. ಇದೀಗ ಗಿಡದಲ್ಲೇ ಉಳಿದುಕೊಂಡಿದ್ದ ಕಾಫಿಯೂ ಅಕಾಲಿಕ ಮಳೆಯಿಂದ ನೆಲಕಚ್ತಿದೆ. ಕಳೆದ ನಾಲ್ಕೈದು ದಿನದಿಂದ ಸುರಿಯುತ್ತಿರೋ ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ನವೆಂಬರ್, ಡಿಸೆಂಬರ್ ಹಾಗೂ ಜನವರಿ ತಿಂಗಳು ಕಾಫಿ ಕಟಾವಿನ ಸಮಯ. ಈ ಸಮಯದಲ್ಲಿ ಮಳೆಯಾಗ್ತಿರೋದ್ರಿಂದ ಕೊಯ್ಲಿಗೆ ಬಂದಿರೋ ಕಾಫಿ ಗಿಡದಿಂದ ಉದುರುತ್ತಿದೆ.
ಇದಷ್ಟೇ ಅಲ್ಲದೇ, ಕೊಯ್ದಿರೋ ಕಾಫಿ ಬೀಜವನ್ನ ಒಣಗಿಸಲು ರೈತರು ಪರದಾಡುವಂತಾಗಿದೆ. ನಾಲ್ಕೈದು ದಿನದಿಂದ ಮಲೆನಾಡು ಭಾಗದಲ್ಲಿ ಮಳೆಯಾಗೋದ್ರ ಜೊತೆಗೆ ಮೋಡಕವಿದ ವಾತಾವರಣವಿದೆ. ಇದ್ರಿಂದ ಈಗಾಗಲೇ ಕೊಯ್ದಿರೋ ಕಾಫಿ ಬೀಜವನ್ನೂ ಒಣಗಿಸಲು ಸಾಧ್ಯವಾಗ್ತಿಲ್ಲ. ಈಗಾಗಲೇ ಕಾಡಾನೆಗಳ ಹಿಂಡು ಹಿಂಡಿನ ದಾಳಿಯಿಂದ ನೊಂದಿದ್ದ ಬೆಳೆಗಾರರಿಗೆ, ಅಕಾಲಿಕ ಮಳೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೆಂದ್ರ ಹಾಗೂ ರಾಜ್ಯ ಸರ್ಕಾರ ಕಾಫಿಗೆ ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡಿ, ಸೂಕ್ತ ಪರಿಹಾರವನ್ನ ಒದಗಿಸಿಕೊಡಬೇಕೆಂದು ರೈತರು ಒತ್ತಾಯ ಮಾಡ್ತಿದ್ದಾರೆ…
ಸಿಹಿ ತಿಂಡಿ ತಿಂದ ಬಳಿಕ ನೀರು ಕುಡಿಯುವುದು ಸರಿನಾ..? ತಪ್ಪಾ..?
ಒಟ್ನಲ್ಲಿ, ಅಕಾಲಿಕ ಮಳೆಯಿಂದ ಕಾಫಿ ಬೆಳೆಯ ಜೊತೆಗೆ ಇನ್ನಿತರೆ ಬೆಳೆಗೂ ಹಾನಿಯಾಗ್ತಿದೆ. ಹಾಸನ ಜಿಲ್ಲೆಯ ಬಯಲುಸೀಮೆ ಭಾಗದಲ್ಲಿ ಬೆಳೆಯೋ ರಾಗಿಗೂ ಕೊಯ್ಲಿಗೂ ಅಕಾಲಿಕ ಮಳೆ ಒಡೆತವನ್ನ ಕೊಟ್ಟಿದೆ. ಈ ಬಾರಿ ಸತತವಾದ ಮಳೆಯಿಂದಾಗಿ ಶೇಕಡಾ 50 ರಷ್ಟು ಮಂದಿ ರಾಗಿಯನ್ನೇ ಭಿತ್ತನೆ ಮಾಡಿಲ್ಲ, ಈಗ ಊಳಿದಿರೋ 50 % ರಾಗಿಯನ್ನೂ ವರುಣ ಅಕಾಲಿಕವಾಗಿ ಬಂದು ನಾಶ ಮಾಡೋಕೆ ಮುಂದಾಗಿರೋದು ರೈತರನ್ನ ಚಿಂತಿಗೀಡು ಮಾಡಿರೋದಂತೂ ಸುಳ್ಳಲ್ಲ.