Monday, April 14, 2025

Latest Posts

‘ನಾನು ಜೆಡಿಎಸ್ ಭದ್ರಕೋಟೆಯೊಳಗೆ ಹುಟ್ಟಿ ಬೆಳೆದಿದ್ದೇನೆ. ಜನರೇ ಭದ್ರಕೋಟೆಯನ್ನು ಛಿದ್ರ ಮಾಡ್ತಾರೆ’

- Advertisement -

ಹಾಸನ: ಹೊಳೆನರಸಿಪುರ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶ್ರೇಯಸ್ ಪಟೇಲ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ತಾಲೂಕು ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದ ಶ್ರೇಯಸ್‌ಗೆ ತಾಯಿ ಅನುಪಮಾ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇ.ಹೆಚ್ ಲಕ್ಷ್ಮಣ್ , ಮುಖಂಡ ಪುಟ್ಟರಾಜ್, ಲಕ್ಷ್ಮಣ್ ಸಾಥ್ ನೀಡಿದ್ದಾರೆ. ಸಹಸ್ರಾರು ಕಾರ್ಯಕರ್ತರೊಂದಿಗೆ ರ್ಯಾಲಿಯಲ್ಲಿ ಬಂದ ಶ್ರೇಯಸ್, ಮಾಜಿ ಸಚಿವ ದಿ.ಪುಟ್ಟಸ್ವಾಮಿ ಗೌಡರ ಮೊಮ್ಮಗನಾಗಿದ್ದು, ದೇವೇಗೌಡರ ಎದುರಾಳಿಯಾಗಿದ್ದ.

ನಾಮಪತ್ರ ಸಲ್ಲಿಸಿದ ಬಳಿಕ ಶ್ರೇಯಸ್ ಮಾತನಾಡಿದ್ದು, ಇಂದು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಸ್ವಾತಂತ್ರ್ಯವಿಲ್ಲದ, ದುರಾಡಳಿತ, ಕುಟುಂಬ ರಾಜಕಾರಣದಿಂದ ಜನ ಬೇಸತ್ತಿದ್ದಾರೆ. ಈ ಬಾರಿ ಜನ ಬದಲಾವಣೆ ಬಯಸಿದ್ದಾರೆ ಎಂದು ಹೇಳಿದ್ದಾರೆ.

ಅಲ್ಲದೇ, ನಮ್ಮ ತಾತ ಪುಟ್ಟಸ್ವಾಮಿಗೌಡರ ಅಭಿವೃದ್ಧಿ ಕಾರ್ಯಗಳು, ರಾಜ್ಯದಲ್ಲಿರುವ ಕಾಂಗ್ರೆಸ್ ಪರ ಅಲೆಯಿಂದ ಜಯಗಳಿಸುತ್ತೇನೆ. ನಾನು ಜೆಡಿಎಸ್ ಭದ್ರಕೋಟೆಯೊಳಗೆ ಹುಟ್ಟಿ ಬೆಳೆದಿದ್ದೇನೆ. ಜನರೇ ಭದ್ರಕೋಟೆಯನ್ನು ಛಿದ್ರ ಮಾಡ್ತಾರೆ. ಈ ಬಾರಿ ಹೊಳೆನರಸೀಪುರದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಶ್ರೇಯಸ್ ಹೇಳಿದ್ದಾರೆ.

ಈಗಾಗಲೇ ಐದು ಹೋಬಳಿಗಳಲ್ಲಿ ಪ್ರಚಾರ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಜೆಡಿಎಸ್‌ನವರ ಅಭಿವೃದ್ಧಿ ಕಾರ್ಯಗಳು ಏನೆಂಬುದನ್ನು ತೋರಿಸುತ್ತೇನೆ. ಇನ್ನೂ ಹಲವು ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ. ನಮ್ಮ ತಾಯಿಯವರು ಸಾಕಷ್ಟು ಹೋರಾಟ ಮಾಡಿದ್ದಾರೆ. ಹೊಳೆನರಸೀಪುರದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಶ್ರೇಯಸ್ ಭವಿಷ್ಯ ನುಡಿದಿದ್ದಾರೆ.

ಬೃಹತ್ ಮೆರವಣಿಗೆ ಮೂಲಕ ಬಂದು, ನಾಮಪತ್ರ ಸಲ್ಲಿಸಿದ ಹೆಚ್.ಕೆ.ಕುಮಾರಸ್ವಾಮಿ..

’20ನೇ ತಾರೀಕು ನಡೆಯಲಿರುವ ಕಾರ್ಯಕ್ರಮದಲ್ಲಿ ಹೆಚ್ಡಿಕೆ, ರೇವಣ್ಣ, ಪ್ರಜ್ವಲ್‌, ಸೂರಜ್ ಭಾಗಿಯಾಗಲಿದ್ದಾರೆ’

‘ನನ್ನನು ಹೊರತು ಪಡಿಸಿ ಇನ್ನೆಲ್ಲಾ ಅಭ್ಯರ್ಥಿಗಳು ಕೂಡ ನನಗೆ ಎದುರಾಳಿಗಳೇ’

- Advertisement -

Latest Posts

Don't Miss