H.D.Revanna ಆಪ್ತ ಅಶ್ವಥ್ ನಾರಾಯಣ ಗೌಡ ಕೊಲೆ ಯತ್ನ ಪ್ರಕರಣ: 6 ಮಂದಿ ಅರೆಸ್ಟ್‌

Hassan crime news: ಹಾಸನ- ಮಾಜಿ ಸಚಿವ ಎಚ್ಡಿ ರೇವಣ್ಣ ಆಪ್ತ ಅಶ್ವಥ್ ನಾರಾಯಣ ಗೌಡ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರೇವಣ್ಣ ಆಪ್ತ ಅಶ್ವಥ್ ಅವರು, ಹೊಳೆನರಸೀಪುರದಲ್ಲಿರುವ ರೇವಣ್ಣ ಅವರ ಮನೆಗೆ ಹೋಗಿ, ಮರಳಿ ತಮ್ಮ ಮನೆಗೆ ಬರುವಾಗ, ಈ ಅಟ್ಯಾಕ್ ನಡೆದಿತ್ತು. ಹೊಳೆನರಸೀಪುದಿಂದ ಚೆನ್ನಪಟ್ಟಣಕ್ಕೆ ಹೋಗುವ ಮಾರ್ಗದಲ್ಲಿ ಸೂರನಹಳ್ಳಿ ಬಳಿ, ಕಾರ್ ಅಡ್ಡ ಗಟ್ಟಿ ಕೊಲೆ ಮಾಡುವ ಪ್ರಯತ್ನ ನಡೆದಿತ್ತು. ಈ ಆರೋಪಿಗಳು ಶ್ರೀಮಂತರನ್ನು ಕಿಡ್ನ್ಯಾಪ್ ಮಾಡಿ, ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಆದರೆ ಹಣ ಸಿಗದ ಕಾರಣ, ಅವರ ಕೊಲೆ ಪ್ರಯತ್ನ ಮಾಡಲಾಗಿದೆ.

ಇವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಈಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಈ ಮೊದಲು ಕೂಡ ಇವರು ಇಂಥ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆಂದು ತಿಳಿದು ಬಂದಿದೆ. ಓರ್ವ ಇನ್‌ಸ್ಪೆಕ್ಟರ್ ಸೇರಿ, ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೋಲಾರದಲ್ಲಿ ಎಸ್ ಐಡಿ ವಿಭಾದ ಇನ್ಸ್ಪೆಕ್ಟರ್ ಆಗಿರೊ ಅಶೋಕ್, ಬೆಂಗಳೂರು ಮೂಲದ ಸತೀಶ್, ಮುರುಗನ್, ಮಧುಸೂದನ್, ಅಶೋಕ್ ಹಾಗು ಚನ್ನರಾಯಪಟ್ಟಣ ಮೂಲದ ತೇಜಸ್ವಿ, ಅರವಿಂದ್ ಬಂಧಿತ ಆರೋಪಿಗಳಾಗಿದ್ದಾರೆ.

ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳು ಬಂಧಿತರಾಗಿದ್ದು, ರೋಹಿತ್ ಮತ್ತು ಪ್ರವೀಣ್‌ಗಾಗಿ ಶೋಧ ಕಾರ್ಯ ಮುಂದುವರೆದಿದೆ. ಇನ್ನು ಆರೋಪಿಗಳನ್ನು ಬಂದಿಸಿ ಒಂದು ಇನ್ನೋವಾ,ಒಂದು ಐ 10, ಒಂದು ಫೋರ್ಡ್ ಕಾರು ಎಂಟು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಕೋಲಾರದ ವರ್ತೂರ್ ಪ್ರಕಾಶ್ ಕಿಡ್ನಾಪ್ ಕೇಸ್ ನಲ್ಲಿ ಭಾಗಿಯಾಗಿದ್ದ ಲೋಹಿತ್ ಹಾಗು ಪ್ರವೀಣ್ ಕೂಡ ಈ ಪ್ರಕರಣ ಭಾಗಿಯಾಗಿರೊ ಬಗ್ಗೆ ಮಾಹಿತಿ ಇದೆ. ಇನ್ನು ಈ ಆರೋಪಿಗಳನ್ನು ಬಂಧಿಸುವ ಮೂಲಕ, ಜಿಲ್ಲೆಯಲ್ಲಿ ತೀವೃ ಕುತೂಹಲ ಮೂಡಿಸಿದ್ದ ಪ್ರಕರಣಕ್ಕೆ ಪೊಲೀಸರು ತೆರೆ ಎಳೆದಿದ್ದಾರೆ.

‘ಯಾರೋ ಗಿರಾಕಿ ಲಂಚ ಪಡೆದಿರುವ ಆರೋಪಿ ಯಾರೆಂದು ಬಹಿರಂಗ ಪಡಿಸಲಿ’

‘ಶುಭ ಅಷ್ಟಮಿ ದಿನ, ನನಗೆ ಅಷ್ಟೈಶ್ವರ್ಯ ಒಲಿದ ಸಂಭ್ರಮ!’

ಚೆಂದದ ನರ್ಸ್ಗಳು ಅಜ್ಜ ಅಂತಾರೆ: ಕಾಂಗ್ರೆಸ್ ಶಾಸಕ ಬೇಸರ

About The Author