Monday, December 23, 2024

Latest Posts

‘ಆರ್ಮಿ ಚೆನ್ನಾಗಿದ್ರೆ, ಆರ್ಮಿ ಚೀಫ್ ಆಗಬಹುದು, ಶಕ್ತಿಯುತವಾಗಿ ಕೆಲಸ ಮಾಡಲು ಅವಕಾಶ ಇರುತ್ತೆ’

- Advertisement -

ಹಾಸನ: ಹಾಸನದಲ್ಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಪ್ರೀತಂಗೌಡ ಮಾತನಾಡಿದ್ದು, ನಾನು ಪ್ರತಿ ಬಾರಿಯೂ ಹೇಳ್ತೇನೆ ಆರ್ಮಿ ಚೆನ್ನಾಗಿದ್ರೆ, ಆರ್ಮಿಯ ಲೆಫ್ಟಿನೆಂಟ್ ಆಗಬಹುದು, ಅಥವಾ ಆರ್ಮಿ ಚೀಫ್ ಆಗಬಹುದು. ಶಕ್ತಿಯುತವಾಗಿ ಕೆಲಸ ಮಾಡಲು ಅವಕಾಶ ಇರುತ್ತೆ ಎಂದು ಹೇಳಿದ್ದಾರೆ.

ಎಲ್ಲರೂ ಅನ್ಕೋತಾರೆ ಪ್ರೀತಂಗೌಡ ಸುಮ್ಮನೆ ಮಾತಾಡ್ತಾರೆ ಅಂತಾ. ನಾನು ಯಾವಾಗಲೂ ಮಾತಾಡಿದ್ರೆ ಅದರಿಂದ ಒಂದು ಶ್ರಮ ಇರುತ್ತದೆ, ತರ್ಕ ಇರುತ್ತದೆ. ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಗಳು,  276 ಬೂತ್ ಗಳಲ್ಲಿ ಬೂತ್ ಗರ ಕೂರಿಸುವವರನ್ನ ಯಾರು ಅಂತಾ ಯೋಚನೆ ಮಾಡಿರಲ್ಲ. ಆದ್ರೆ ಟಿಕೆಟ್ ಗೆ ಹೋರಾಟ ಮಾಡ್ತಾ ಇರ್ತಾರೆ, ಯಾರ ಬಂದ್ರೆ ಫೈಟ್ ಆಗುತ್ತೆ ಅಂತಾ ಚರ್ಚೆ ನಡೆಯುತ್ತಿರುತ್ತೆ. ಆದ್ರೆ ವಾಸ್ತವಾಂಶ ಏನಿರುತ್ತೆ ಅಂತಾ ಯಾವ ಊರಿಗೂ ಹೋಗಿರೋದಿಲ್ಲ ಎಂದು ಹೇಳಿದ್ದಾರೆ.

ಮಾಧ್ಯಮಗಳು ಹೋದಾಗ ಕಾರ್ಯಕರ್ತರು ಅವರಿಗೆ ಕೊಟ್ರೆ ಸಂತೋಷ ಇವರಿಗೆ ಕೊಟ್ರೆ ಸಂತೋಷ ಅಂತಾ ಅಭಿಪ್ರಾಯ ಹಂಚಿಕೊಂಡಿರ್ತಾರೆ. ಟಿಕೆಟ್ ಕೇಳಿದಂತವರದ್ದೇ ರಾಜಕೀಯವಾಗಿ ಜಿದ್ದಾಜಿದ್ದಿ ಇದೆ. ವೋಟ್ ಯಾರಿಗೆ ಹಾಕ್ತೀರಿ ಅಂತಾ ಜನಸಾಮಾನ್ಯರನ್ನ ಕೇಳಿ. ಟಿಕೆಟ್ ಯಾರಿಗೆ ಅಂತಾ ಬಿಜೆಪಿಯವರಿಗೆ ಕೇಳಿದ್ರೂ ಸ್ವರೂಪ್ ಕೊಟ್ರೆ ಒಳ್ಳೆಯದು ಅನ್ನೋ ಜನಾಭಿಪ್ರಾಯ ಬಂದಿರುತ್ತೆ. ಯಾವ ಕಾರಣಕ್ಕೆ ಹೇಳಿರ್ತಾರೆ ಅಂತಾ ನಿಮಗೇ ಗೊತ್ತಿರುತ್ತೆ ಎಂದು ಹೇಳಿದ್ದಾರೆ.

ಅಲ್ಲದೇ, ವೋಟ್ ಯಾರಿಗೆ ಹಾಕ್ತೀರಾ ಅಂತಾ ಇಡೀ ಕ್ಷೇತ್ರದ ಜನರನ್ನ ಕೇಳಿ. ಒಂದೇ ಮಾತು ಬರುತ್ತೆ ಅವರ ತಂದೆಯವರಿಗೆ 20 ವರ್ಷ ಅವಕಾಶ ಮಾಡಿಕೊಟ್ವಿ. ಅವರ ಕುಟುಂಬದಲ್ಲಿ ಅವರ ಚಿಕ್ಕಪ್ಪ ಒಂದ್ಸಾರಿ ಮುನ್ಸಿಪಾಲಿಟಿ ಅಧ್ಯಕ್ಷರನ್ನ ಮಾಡಿದ್ವಿ. ಇವರನ್ನ ಒಂದು ವರ್ಷ ಜಿಲ್ಲಾಪಂಚಾಯತ್ ಅಧ್ಯಕ್ಷರನ್ನ ಮಾಡಿದ್ವಿ. ಅವರು ಅಷ್ಟೂ ವರ್ಷ ಮಾಡಿದ ಹತ್ತುಪಟ್ಟು‌ ಕೆಲಸವನ್ನು ಕಳೆದ ಐದು ವರ್ಷದಲ್ಲಿ ಒಮ್ಮೆ ಶಾಸಕರಾಗಿ ಮಾಡಿದ್ದೀರಿ. ನಿಮಗೆ ಇಂಡಿಪೆಂಡೆಂಟ್ ಆಗಿ ಡಿಶಿಷನ್ ತಗೊಳ್ಳೋದಕ್ಕೆ ನಿಮ್ಮ ಪಕ್ಷದಲ್ಲಿ ಶಕ್ತಿಯನ್ನು ಕೊಟ್ಟಿದ್ದಾರೆ.

ಪಿಎ ಹತ್ರ ಕೆಲ್ಸ ಮಾಡಬೇಕು, ಪಿಸಿಯತ್ರ ಕೆಲ್ಸ ಮಾಡಿಸಬೇಕು ಅಂದ್ರೆ ಹೊಳೆನರಸೀಪುರದ ಕಡೆ ತಿರುಗಿ ನೋಡೋ ಅವಶ್ಯಕತೆ ಇರುತ್ತದೆ. ಅವರಿಗೆ ಶಕ್ತಿಯನ್ನು ಕೊಟ್ಟಿರೋದಿಲ್ಲ, ಅಂತಹ ವ್ಯಕ್ತಿಯನ್ನು ಗೆಲ್ಲಿಸಿಕೊಂಡು ರಾಜಕಾರಣ ಮಾಡೋದು ಹೇಗೆ ಅಂತಾ ಅವರ ಪಕ್ಷದ ಕಾರ್ಯಕರ್ತರು ಜನಸಾಮಾನ್ಯರು ಯೋಚನೆ ಮಾಡ್ತಾ ಇದ್ದಾರೆ . ಅದೇ ಕಾರಣಕ್ಕೆ ನೀವು ಊಹೆ ಮಾಡೋದಕ್ಕೂ ಅಸಾಧ್ಯ. ಶೇಕಡಾ 50 ರಷ್ಟು ಕಾರ್ಯಕರ್ತರು ಬಿಜೆಪಿಗೆ ಬಂದಿದ್ದಾರೆ ಎಂದು ಪ್ರೀತಂಗೌಡ ಹೇಳಿದ್ದಾರೆ.

‘ನನಗೆ ಬಿಜೆಪಿಯಲ್ಲಿ ನಿಜಕ್ಕೂ ಮೋಸವಾಗಿದೆ, ಈ ರೀತಿ ಅವಮಾನ ಮಾಡುತ್ತಾರೆ ಎಂದುಕೊಂಡಿರಲಿಲ್ಲ’

ಜೆಡಿಎಸ್ ಭರವಸೆಗಳ ಪತ್ರ ಬಿಡುಗಡೆ ಮಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು

ಮತ್ತೆ 6 ಅಭ್ಯರ್ಥಿಗಳನ್ನು ಘೋಷಣೆ ಮಾಡಿದ ಹೆಚ್.ಡಿ.ಕುಮಾರಸ್ವಾಮಿ

- Advertisement -

Latest Posts

Don't Miss