Hassan Political News: ಹಾಸನ: ಜೆಡಿಎಸ್ ಗೆಲುವಿಗಾಗಿ ಕಾರ್ಯಕರ್ತರು ದೇವರ ಮೊರೆ ಹೋಗಿದ್ದು, ಮತ ಎಣಿಕೆಗೆ ತೆರಳುವ ಮುನ್ನ ಜೆಡಿಎಸ್ ಪಕ್ಷದ ಶಾಸಕ ಸ್ವರೂಪ್ ಪ್ರಕಾಶ್, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಹಾಸನ ನಗರದ ಎಂ.ಜಿ.ರಸ್ತೆಯಲ್ಲಿರುವ ಗಣಪತಿಗೆ ಸ್ವರೂಪ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹಾಸನದಲ್ಲಿ ಜಿದ್ದಾಜಿದ್ದಿನ ಫೈಟ್ ಇದ್ದು, ಜೆಡಿಎಸ್ ಗೆಲುವು ಸಾಧಿಸಲಿ ಎಂದು ಸ್ವರೂಪ್, ಜೆಡಿಎಸ್ ಕಾರ್ಯಕರ್ತರೊಂದಿಗೆ ಸೇರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಹಾಸನದಲ್ಲಿ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯಕ್ರಮ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿಗಿಂತ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮುನ್ನಡೆ ಸಾಧಿಸಿದ್ದಾರೆ. ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯಕ್ರಮ ನಡೆಯುತ್ತಿದ್ದು, ಜಿಲ್ಲಾ ಚುನಾವಣಾ ಅಧಿಕಾರಿ ಸಿ.ಸತ್ಯಭಾಮ, ಚುನಾವಣೆ ಸಾಮಾನ್ಯ ವೀಕ್ಷಕ ಚಂದ್ರಮೋಹನ್ ಠಾಕೂರ್ ಸಮ್ಮುಖದಲ್ಲಿ ಮತಎಣಿಕೆ ನಡೆಯುತ್ತಿದೆ.
ಲೋಕಸಭಾ ಮತ ಎಣಿಕೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿ ದಿವ್ಯಪ್ರಭು
ಮೂರು ಕ್ಷೇತ್ರ ಗೆಲ್ತಿವಿ. ನೀವೆಲ್ಲಾ ಕೋ ಆಪರೇಟ್ ಮಾಡಿದ್ದೀರಿ ಸಂತೋಷ: ಹೆಚ್.ಡಿ.ರೇವಣ್ಣ
ವಿನೋದ್ ಅಸೂಟಿ ಗೆಲ್ಲೋದು ಪಕ್ಕಾ: ಕವಡೆ ಶಾಸ್ತ್ರ ಕೇಳಿದ ಕೈ ಅಭ್ಯರ್ಥಿ ಅಭಿಮಾನಿ