Sunday, September 8, 2024

Latest Posts

ರಾಜಕೀಯ ಮರೆತು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು: ಹೆಚ್.ಪಿ. ಸ್ವರೂಪ್

- Advertisement -

ಹಾಸನ: ರಾಜಕೀಯ ಮರೆತು ಕ್ಷೇತ್ರದ ಎಲ್ಲ ವರ್ಗದ ಜನರ ಸಮಸ್ಯೆಗಳಿಗೆ ನಾನು ಸ್ಪಂದಿಸಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತೇನೆ. ಚುನಾವಣೆ ಫಲಿತಾಂಶದ ನಂತರ ಕೆಲ ಕಡೆ ಸ್ಥಗಿತವಾಗಿರುವ ಕಸ ವಿಲೆವಾರಿಯ ಸಮಸ್ಯೆಯನ್ನು ಶೀಘ್ರದಲ್ಲಿಯೇ ಸರಿಪಡಿಸಲಾಗುವುದು ಎಂದು ಹಾಸನ ಕ್ಷೇತ್ರದ ನೂತನ ಶಾಸಕ ಹೆಚ್.ಪಿ. ಸ್ವರೂಪ್ ತಿಳಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನೂತನ ಅಧ್ಯಕ್ಷರಿಗೆ ಸಂಘದ ಅಧ್ಯಕ್ಷ ಬಾಳುಗೋಪಾಲ್, ಉಪಾಧ್ಯಕ್ಷರಾದ ನಂಜುಂಡೇಗೌಡ, ವೇಣುಗೋಪಾಲ್, ಕಾರ್ಯದರ್ಶಿ ಮೋಹನ್ ಕುಮಾರ್, ಕಾರ್ಯಕಾರಿ ಸದಸ್ಯ ಬೊಮ್ಮೇಗೌಡ ಇದ್ದರು. ಸಮಿತಿ ಸದಸ್ಯರು ಸೇರಿ ಸನ್ಮಾನಿಸಿ ಗೌರವಿಸಿದ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ನಮ್ಮ ನಾಯಕರಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಜಿಲ್ಲಾ ಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಭವಾನಿರೇವಣ್ಣ ಹಾಗೂ ಸಂಸದರಾದ ಪ್ರಜ್ವಲ್, ವಿಧಾನ ಪರಿಷತ್ ಸದಸ್ಯರಾದ ಸೂರಜ್ ರೇವಣ್ಣ ಅವರಿಗೆ ಮೊದಲು ವಿಶೇಷ ಧನ್ಯವಾದಗಳನ್ನ ತಿಳಿಸುತ್ತೇನೆ. ಅವರ ಆಶೀರ್ವಾದ ಸದಾ ನನ್ನ ಮೇಲೆ ಇರಲಿದೆ ಎಂದ ಅವರು, ನನ್ನ ಗೆಲುವಿಗಾಗಿ ಶ್ರಮಿಸಿದ ಮತ್ತು ಮತ ಹಾಕಿದ ಎಲ್ಲಾರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಹೈವೋಲ್ಟೇಜ್ ಕದನವೆಂದು ಈ ಕ್ಷೇತ್ರದಲ್ಲಿ ಬಿಂಬಿಸಲಾಗಿತ್ತು. ಈ ನಡುವೆ ಕೆಲವು ಕಡೆ ಚುನಾವಣೋತ್ತರ ಗಲಾಟೆ, ಗದ್ದಲ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ದಯವಿಟ್ಟು ಯಾರೂ ಆಸ್ಪದ ಕೊಡಬಾರದು ಎಂದು ಇದೆ ವೇಳೆ ಮನವಿ ಮಾಡಿದರು. ಈ ತರಹದ ಬೇಡವಾದ ಚಟುವಟಿಕೆ ಬದಿಗಿಟ್ಟು, ಎಲ್ಲರೂ ಒಟ್ಟಾಗಿ ಅಭಿವೃದ್ಧಿಯತ್ತ ಗಮನ ಹರಿಸೋಣ, ಜನ ಸಾಮಾನ್ಯರ ಕೆಲಸ ಮಾಡುತ್ತೇನೆ. ಸೋತ ನಂತರ ಒಂದು ವರ್ಗದ ಜನರಿಗೆ ಮಾಜಿ ಶಾಸಕರಾದ ಪ್ರೀತಂ ಗೌಡ ಅವರು ಎಚ್ಚರಿಕೆ ನೀಡಿದ್ದಾರೆ. ಆ ರೀತಿಯ ಬೆದರಿಕೆ ವರ್ತನೆ ಬೇಡ. ಇದಕ್ಕೆ ಯಾರೂ ಎದೆಗುಂದುವುದು ಬೇಡ. ಮತ ಹಾಕೋದು ಅವರ ಹಕ್ಕು, ಮುಂದೆ ನಿಮ್ಮ ಜೊತೆ ನಾವಿರುತ್ತೇವೆ ಎಂದು ಧೈರ್ಯ ತುಂಬಿದರು.

ಹಾಗೆಯೇ ಮುಂದಿನ ಚುನಾವಣೆಗೆ ಈಗಿನಿಂದಲೇ ರಣಕಹಳೆ ಊದುವೆ ಎಂದಿದ್ದಾರೆ. ಆ ರೀತಿಯ ಮಾತು ಬೇಡ, ಅಭಿವೃದ್ಧಿಗೆ ಸಹಕಾರ ಕೊಡಲಿ ಎಂದು ಕೋರಿದರು. ಗ್ರಾಮೀಣ ಭಾಗದಲ್ಲಿ ಏತ ನೀರಾವರಿ, ಕೆರೆಗಳಿಗೆ ನೀರು ತುಂಬಿಸುವುದು ಮೊದಲಾದ ಕಾಮಗಾರಿಗಳನ್ನು ಕಾಂಗ್ರೆಸ್ ಸರ್ಕಾರದ ಸಹಯೋಗದೊಂದಿಗೆ ಮಾಡಲು ಶಕ್ತಿ ಮೀರಿ ಶ್ರಮಿಸಲಾಗುವುದು. ನಿನ್ನೆ ಮಾಜಿ ಪ್ರಧಾನಿ ಹೆಚ್ .ಡಿ.ದೇವೇಗೌಡರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದು, ಕ್ಷೇತ್ರದ ಅಭಿವೃದ್ಧಿಗೆ ಸಹಕಾರದ ಜೊತೆಗೆ ಅಗತ್ಯ ಸಲಹೆ ಸೂಚನೆ ನೀಡಿದ್ದಾರೆ ಎಂದರು. ನಗರದ ಕೆಲವು ಕಡೆಗಳಲ್ಲಿ ಕಸದ ಆಟೋ ನಿಂತು ಹೋಗಿದೆ.ಈ ಬಗ್ಗೆ ತುರ್ತು ಸಭೆ ನಡೆಸಿ ಎರಡು ದಿನದಲ್ಲಿ ಕಸದ ವಿಲೇವಾರಿ ಸಮಸ್ಯೆ ಬಗೆ ಹರಿಸಲಾಗುವುದು. ಕೆಲ ಕಡೆಗಳಲ್ಲಿ ಹುಡಾದಿಂದ ವಾಹನ ಬಿಡಲಾಗಿತ್ತು. ಇನ್ನೂ ಕೆಲವು ಕಡೆ ಟ್ರಸ್ಟ್‌ನವರು ಕಸ ವಿಲೇವಾರಿ ಮಾಡುತ್ತಿದ್ದರು. ಈಗ ನಿಂತಿದೆ, ಅದನ್ನು ಶೀಘ್ರವೇ ಸರಿಪಡಿಸಲಾಗುವುದು ಎಂದು ವಿಶ್ವಾಸವ್ಯಕ್ತಪಡಿಸಿದರು. ಇರುವ ಫುಡ್ ಕೋರ್ಟ್ ಒಡೆಯೋ ಪ್ರಶ್ನೆ ಇಲ್ಲ, ವದಂತಿಗೆ ಯಾರೂ ಕಿವಿಗೊಡಬೇಡಿ. ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಸದಸ್ಯರಾದ ವಾಸುದೇವ್, ನವೀನ್ ನಾಗರಾಜ್, ಮಾಜಿ ಉಪಾಧ್ಯಕ್ಷ ಇರ್ಷಾದ್ ಪಾಷ, ಜೆಡಿಎಸ್ ಜಿಲ್ಲಾ ವಕ್ತಾರ ಹೊಂಗೆರೆ ರಘು, ಮುಖಂಡರಾದ ಸ್ವಾಮಿಗೌಡ, ಮಾಜಿ ಸದಸ್ಯ ಮಹೇಶ್ ಇತರರು ಉಪಸ್ಥಿತರಿದ್ದರು.

‘ದ್ವೇಶ, ಬೂಟಾಟಿಕೆಯನ್ನು ಓದ್ದೋಡಿಸಿದ ಸ್ವಾಭಿಮಾನಿ ಕನ್ನಡಿಗರಿಗೆ ಧನ್ಯವಾದಗಳು, ಬೆತ್ತಲೆಯಾದ ಚಕ್ರವರ್ತಿ’

‘ನನ್ನ ಹುಟ್ಟುಹಬ್ಬಕ್ಕೆ ಕರ್ನಾಟಕ ಜನತೆ ಅತ್ಯುತ್ತಮ ಉಡುಗೊರೆ ನೀಡಿದ್ದಾರೆ’

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಿರ್ಣಯಗಳು

- Advertisement -

Latest Posts

Don't Miss