ಹಾಸನ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ದೇವೇಗೌಡ ಅವರು ಗುರುವಾರ ಮದ್ಯಾಹ್ನ ಹಾಸನಾಂಬೆ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದು ಪುನಿತರಾದರು.
ಜೆಡಿಎಸ್ ಬದುಕಿರುವುದೇ ರೈತರು, ದೀನ ದಲಿತರಿಗಾಗಿ- ಹೆಚ್‌ಡಿಕೆ
ಚೆನ್ನಮ್ಮ ದೇವೇಗೌಡರು ದೇವಾಲಯದ ಆವರಣಕ್ಕೆ ಬರುತ್ತಿದ್ದಂತೆ ಅವರ ಸಹಾಯಕ್ಕೆ ಡಿವೈಎಸ್ಪಿ ಉದಯಭಾಸ್ಕರ್, ಉಪ-ತಹಸೀಲ್ದಾರ್ ರಮೇಶ್ ಇತರರು ಸ್ವಾಗತಿಸಿ ಬರಮಾಡಿಕೊಂಡರು. ಚೆನ್ನಮ್ಮ ಅವರು ಮೆಟ್ಟಿಲು ಹತ್ತಲು ಸಾಧ್ಯವಾಗದೆ ಇದ್ದಾಗ ಅವರನು ಚೇರ್ ಮೇಲೆ ಕೂರಿಸಿಕೊಂಡು ಇಳಿಸಿದರು. ಚೆನ್ನಮ್ಮನವರ ಸಹಾಯಕ್ಕೆ ಡಿವೈಎಸ್ಪಿ, ಇತರರು ಹಾಗೂ ಜೆಡಿಎಸ್ ನ ಕಾರ್ಯಕರ್ತರು ಮುಂದಾದರು.
ನಿಖಿಲ್ ಸ್ಪರ್ಧೆ ಬಗ್ಗೆ ಪರೋಕ್ಷವಾಗಿ ಸೂಚನೆ ಕೊಟ್ಟ ಹೆಚ್‌ಡಿಕೆ..
ಮೊದಲು ಅಮ್ಮನವರ ದರ್ಶನ ಪಡೆದು ಗರ್ಭಗುಡಿಯಲ್ಲೆ ಕೆಲ ಸಮಯ ಇದ್ದು ಪ್ರಾರ್ಥನೆ ಸಲ್ಲಿಸಿದರು. ನಂತರ ದರ್ಬಾರ್ ಗಣಪತಿ ಹಾಗೂ ಶ್ರೀ ಸಿದ್ದೇಶ್ವರ ದೇವಾಲಯಲ್ಲೆ ತೆರಳಿ ಪೂಜೆ ಮಾಡಿಸಿದರು. ಇದೆ ವೇಳೆ ಚೆನ್ನಮ್ಮ ದೇವೇಗೌಡರ ಮಗಳಾದ ಅನುಸೂಯ ಮಂಜುನಾಥ್, ಶೈಲಜಾ ಚಂದ್ರಶೇಖರ್ ಹಾಗೂ ಮೊಮ್ಮಕ್ಕಳು ಜೊತೆಯಲ್ಲಿದ್ದರು.