Hassan News: ಹಾಸನ: ಹಾಸನಾಂಬ ದೇವಾಲಯದಲ್ಲಿ ಸಾರ್ವಜನಿಕ ದರ್ಶನದ ನಾಲ್ಕನೇ ದಿನ ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರವೆ ಆಗಮಿಸಿದ್ದು, ಇಂದು ಮುಸಲ್ಮಾನ್ ಕುಟುಂಬ ದೇವಿಯ ದರ್ಶನ ಪಡೆದು ಗಮನ ಸೆಳೆದಿದೆ.
ಸಕಲೇಶಪುರ ಮೂಲದ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದ ಹಜೀರ ಎಂಬ ಮಹಿಳೆ ಹಾಗೂ ತಂದೆ ಮೊಹಿದ್ದೀನ್ ಗೌಸ್, ಕುಟುಂಬ ಇಂದು ಹಾಸನಾಂಬ ಹಾಗೂ ಸಿದ್ದೇಶ್ವರ ಸ್ವಾಮಿ ದರ್ಶನ ಪಡೆದು
ದೇವನೊಬ್ಬ ನಾಮಹಲವು ಎಂಬ ಸಂದೇಶ ಸಾರಿದೆ.
ನಂತರ ಸುದ್ದಿಗಾರರೊಂದಿಗೆ ಆಜಿರ ಮಾತನಾಡಿ, ಇದೆ ಮೊದಲ ಬಾರಿಗೆ ತಾವು ಹಾಸನಾಂಬ ದೇವರ ದರ್ಶನ ಪಡೆದಿದ್ದು, ದೇವರ ದರ್ಶನದಿಂದ ಒಳ್ಳೆಯ ಅನುಭವ ಆಗಿದೆ. ದೇವನೊಬ್ಬ ನಾಮಹಲವು ಎಂಬ ಸಂದೇಶದಂತೆ, ಎಲ್ಲಾ ಧರ್ಮದ ದೇವರು ಒಬ್ಬನೇ ಎಂಬುದು ನಮ್ಮ ಭಾವನೆ. ಅಲ್ಲದೆ ಹಾಸನಾಂಬೆ ಮೇಲೆ ಕೂಡ ನಮಗೆ ನಂಬಿಕೆ ಇದೆ ಎಂದರು.
ತುಂಬ ವರ್ಷಗಳಿಂದ ದೇವರ ದರ್ಶನಕ್ಕೆ ಬರಬೇಕು ಎಂದುಕೊಂಡಿದ್ದು, ಆದರೆ ಈ ಬಾರಿ ಅವಕಾಶ ಸಿಕ್ಕಿದ್ದು ನನಗೆ ತುಂಬಾ ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು. ನಮ್ಮ ಅನೇಕ ಸ್ನೇಹಿತರು ಹಾಸನಾಂಬ ದೇವಿಯ ಮಹಿಮೆ ಜೊತೆಗೆ ದೇವಾಲಯದ ಶಕ್ತಿ ಬಗ್ಗೆ ವಿವರಿಸಿದ್ದಾರೆ ಆದುದರಿಂದಲೇ ದೇವಾಲಯಕ್ಕೆ ತಾವು ಆಗಮಿಸಿದ್ದು ತುಂಬಾ ಸಂತಸ ತಂದಿದೆ ಎಂದರು.
ಕಾಂಗ್ರೆಸ್’ನವರು ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ: Govind Karajola
ಕಮಲ ಪಡೆಗೆ ಮತ್ತೊಂದು ಶಾಕ್ ಕೊಟ್ಟ ಜಗದೀಶ್ ಶೆಟ್ಟರ್; ಬಿಜೆಪಿಯ ಮತ್ತೊಬ್ಬ ಮಾಜಿ ಶಾಸಕ ಕಾಂಗ್ರೆಸ್ಗೆ