Haveri News: ಹಾವೇರಿ: ಹಾವೇರಿಯ ಗೋ ಶಾಲೆ ಅಡಿಗಲ್ಲು ಸಮಾರಂಭ ನಡೆದಿದ್ದು, ಈ ವೇಳೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿರುವ ಹಿರಿಯ ನಟ ದೊಡ್ಡಣ್ಣ, ತಮ್ಮ ಜೀವನದ ಹಲವು ಘಟನೆಗಳನ್ನು ಮೆಲುಕು ಹಾಕಿದ್ದಾರೆ.
ಕೇಸರಿ ಅಂದರೆ ಗುರು. ಗುರುವಿನ ಕಾರುಣ್ಯ ಇರಬೇಕು. ಕನ್ಹೇರಿ ಶ್ರೀಗಳ ಪಾದದ ಧೂಳಿಗೂ ನಾನು ಸಮನಲ್ಲ. ದುಷ್ಟರಿಗೆ ಶಿಕ್ಷೆ ಕೊಡುವ ಶಕ್ತಿ ಕನ್ಹೇರಿ ಶ್ರೀಗಳಲ್ಲಿ ಕಾಣುತ್ತಿದ್ದೇನೆ ಎಂದು ದೊಡ್ಡಣ್ಣ ಹೇಳಿದ್ದಾರೆ. ಅಲ್ಲದೇ, ಕನ್ನಡದ ಮಹತ್ವವನ್ನು ಹೇಳಿದ್ದಾರೆ.
ಇಷ್ಡೆಲ್ಲಾ ಮಾತನಾಡಿದ ಬಳಿಕ ಅಲ್ಲೇ ನೆರದಿದ್ದ ದೊಡ್ಡಣ್ಣ ಫ್ಯಾನ್ಸ್ ಡೈಲಾಗ್ ಡೈಲಾಗ್ ಎಂದು ಕೇಳಿದ್ದು, ಅಭಿಮಾನಿಗಳನ್ನು ನಿರಾಸೆ ಮಾಡದ ದೊಡ್ಡಣ್ಣ, ತಮ್ಮ ಸಿನಿಮಾದ ಡೈಲಾಗ್ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಇದ್ದವರನ್ನೆಲ್ಲ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದ್ದಾರೆ.
ಬಳಿಕ ತಾವು ನೀಡುತ್ತಿರುವ ಉಚಿತ ಕಣ್ಣಿನ ಚಿಕಿತ್ಸೆ ಬಗ್ಗೆ ಮಾತನಾಡಿದ ದೊಡ್ಡಣ್ಣ, ಕೆಲ ದಿನಗಳ ಹಿಂದಷ್ಟೇ ಕೊಪ್ಪಳ ಅಜ್ಜರ ಬಳಿ ಹೋಗಿದ್ದೆ. ಅಲ್ಲಿ 8 ಮಕ್ಕಳಿಗೆ ಕಣ್ಣಿನ ದೊಡ್ಡ ಆಪರೇಷನ್ ಮಾಡಿಸಿದ್ದೇವೆ. 430 ಮಕ್ಕಳಿಗೆ ಉಚಿತವಾಗಿ ಕನ್ನಡಕವನ್ನ ನೀಡಿದ್ದೇವೆ. ನನ್ನ ಅಳಿಯ ಶಾಸಕನಾದ ಬಳಿಕ 20 ಸಾವಿರ ಕಣ್ಣಿನ ಚಿಕಿತ್ಸೆ ನೀಡಿಸಿದ್ದೇವೆ. ಈ ಭಾಗದಲ್ಲೂ ಆ ಸೌಲಭ್ಯವನ್ನ ಬಳಸಿಕೊಳ್ಳಿ ಎಂದು ದೊಡ್ಡಣ್ಣ ಹೇಳಿದ್ದಾರೆ.
ಅಲ್ಲದೇ ಕಣ್ಣಿನ ಚಿಕಿತ್ಸೆ ಮಾಡುವಾಗ ೊಂದು ರೂಪಾಯಿ ಕೂಡ ನೀಡುವುದು ಬೇಡ. ಫ್ರೀಯಾಗಿ ಆಪರೇಷನ್ ಮಾಡಿಸಿ, ಫ್ರೀಯಾಗಿ ಕನ್ನಡಕ ಕೊಡಿಸಿ, ನಿಮ್ಮ ಚಿಕಿತ್ಸೆ ಸಂಪೂರ್ಣವಾಗಿ ಮುಗಿಯುವವರೆಗೂ ನಾವು ನಿಮ್ಮ ಜೊತೆಗಿರ್ತೀವಿ ಎಂದು ದೊಡ್ಡಣ್ಣ ಹೇಳಿದ್ದಾರೆ.




