Political News: ಅಸಹಾಯಕ ಸಿಎಂ, ಮೂಕ ಪ್ರೇಕ್ಷಕರಾದ ಜನರು!: ಡಿ.ಕೆ.ಶಿವಕುಮಾರ್ ಸ್ಟಿಂಗ್ ಹೇಳಿಕೆ ಬಗ್ಗೆ ಆರ್.ಅಶೋಕ್ ವ್ಯಂಗ್ಯ

Political News: ಸಿಎಂ ಆದ ಬಳಿಕ ನನ್ನ ವಿರುದ್ಧವೂ ಸ್ಚಿಂಗ್ ಆಪರೇಷನ್‌ ಮಾಡಲು ಪ್ಲಾನ್ ಮಾಡಲಾಗಿತ್ತು. ಆದರೆ ಆ ಬಗ್ಗೆ ನನಗೆ ಅನುಮಾನವಿದ್ದ ಕಾರಣ, ನಾನು ಫೋಟೋಗಳನ್ನು ತೆಗೆದು ಇಟ್ಟಿದ್ದೇನೆ. ಸಮಯ ಬಂದಾಗ ಅದನ್ನು ರಿಲೀಸ್ ಮಾಡುತ್ತೇನೆ. ಸಮಯ ಬಂದಾಗ ಎಲ್ಲವೂ ಮುಂದೆ ಬರುತ್ತದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು.

ಈ ಹೇಳಿಕೆ ಬಂದ ಬಳಿಕ ವಿಪಕ್ಷ ನಾಯಕರು ಇದೇ ಅವಕಾಶವೆಂದು ಹೇಳಿಕೆ ವಿರುದ್ದ ಸಾಲು ಸಾಲು ವಾಗ್ದಾಳಿ ನಡೆಸುತ್ತಿದ್ದಾರೆ. ಈ ಹೇಳಿಕೆ ವಿರುದ್ಧ ಕಿಡಿಕಾರಿರುವ ವಿಪಕ್ಷ ನಾಯಕ ಆರ್.ಅಶೋಕ್, ಜನರನ್ನು ರಕ್ಷಿಸಬೇಕಾದ ಅಸಹಾಯಕ ವೀಕ್ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ನಿಮ್ಮ ವಿರುದ್ಧ ಸ್ಟಿಂಗ್ ಆಪರೇಷನ್‌ಗೆ ಯತ್ನ ನಡೆದಿದೆ ಎಂದಮೇಲೆ ಅದರ ದಾಖಲೆಗಳನ್ನು ಬಹಿರಂಗ ಮಾಡಬೇಕಿತ್ತು. ಈಗ ಸಮಯ ಬಂದಾಗ ಬಹಿರಂಗಪಡಿಸುತ್ತೇನೆ ಎಂದು ಮುಚ್ಚಿಹಾಕಲು ಯತ್ನಿಸಿದ್ದೀರಿ ಎಂದು ಅಶೋಕ್ ಆರೋಪಿಸಿದ್ದಾರೆ.

ಗುಪ್ತಚರ ಇಲಾಖೆ, ಪೊಲೀಸ್ ವ್ಯವಸ್ಥೆ ಎಲ್ಲವೂ ಸರ್ಕಾರದ ಅಧೀನದಲ್ಲಿದೆ. ಮುಖ್ಯಮಂತ್ರಿಗಳಿಗೇ ತಮ್ಮ ವಿರುದ್ಧದ ಷಡ್ಯಂತ್ರವನ್ನು ಬಹಿರಂಗಪಡಿಸಲು ಸಾಧ್ಯವಾಗದಿದ್ದರೆ, ಸಾಮಾನ್ಯ ಜನರ ಸುರಕ್ಷತೆಯ ಗತಿಯೇನು? ಸಮಯ ಬಂದಾಗ ನೋಡೋಣ ಎನ್ನುವುದೇಕೆ? ಈಗಲೇ ದಾಖಲೆ ಬಹಿರಂಗಪಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ! ಎಂದು ಅಶೋಕ್ ಆಗ್ರಹಿಸಿದ್ದಾರೆ.

ಈ ಹಿಂದೆ ಯಾರು ಯಾರನ್ನು ಟ್ರ್ಯಾಪ್ ಮಾಡಲು ಯತ್ನಿಸಿದ್ದರು, ಯಾವೆಲ್ಲಾ ಪ್ರಕರಣಗಳು ರಾಜ್ಯ ರಾಜಕಾರಣದಲ್ಲಿ ಚರ್ಚೆಯಾಗಿದ್ದವು ಎಂಬುದನ್ನು ಕರ್ನಾಟಕದ ಜನತೆ ಮರೆತಿಲ್ಲ. ರಾಜ್ಯದ ಜನರಿಗೆ ಬೇಕಿರುವುದು ಸ್ಫೋಟಕ ಹೇಳಿಕೆಗಳಲ್ಲ, ಸುರಕ್ಷತೆ ಮತ್ತು ಉತ್ತರದಾಯಿತ್ವ. ಮುಖ್ಯಮಂತ್ರಿಗಳೇ, ಆರೋಪಗಳ ಹಿಂದಿನ ಸತ್ಯವನ್ನು ಜನರ ಮುಂದಿಡಿ. ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸಿ! ಎಂದು ಆರ್.ಅಶೋಕ್ ಹೇಳಿದ್ದಾರೆ.

About The Author