Friday, November 22, 2024

Latest Posts

Fake Gold: ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ 25 ಲಕ್ಷ ವಂಚಿನೆ; ಆರೋಪಿಗಳ ಬಂಧನ..!

- Advertisement -

ಹಾವೇರಿ: ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ. ಕಡಿಮೆ ಬೆಲೆಗೆ ಚಿನ್ನವನ್ನು ಕೊಡುವುದಾಗಿ ನಂಬಿಸಿ ವಂಚಿಸಿದ ಘಟನೆ ಶಿಗ್ಗಾಂವಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು ಮೂಲದ ಲಕ್ಷ್ಮಣ ಚನ್ನಬಸವ ಎಂಬುವವರಿಗೆ ಮೊದಲು ಹರಪ್ಪನಗಳ್ಳಿ ತಾಲೂಕಿನ ಹೊಳಲು ಗ್ರಾಮದ ಬಳಿ ಎರಡು ಅಸಲಿ ನಾಣ್ಯಗಳನ್ನು ಕಡಿಮೆ ಬೆಲೆಗೆ ಕೊಟ್ಟು ನಂಬಿಸಿದ್ದ ವಂಚಕರು 25 ಲಕ್ಷದಲ್ಲಿ 2 ಕೆಜಿ ಚಿನ್ನವನ್ನು ನೀಡುವುದಾಗಿ ಹೇಳಿ ಬೆಂಗಳೂರಿನಿಂದ ಶಿಗ್ಗಾಂವಿಗೆ ಕರೆಸಿದ್ದರು. ಅದರಂತೆ ಶಿಗ್ಗಾಂವಿ ಹೊರವಲಯದ ಸರ್ವಿಸ್ ರಸ್ತೆಯ ಬಳಿ 25 ಲಕ್ಷ ಪಡೆದುಕೊಂಡು ನಕಲಿ ಚಿನ್ನ ನೀಡಿ ಪರಾರಿಯಾಗಿದ್ದಾರೆ.

ಚಿನ್ನ ಪಡೆದು ಮನೆಗೆ ಹೋಗಿ ಚಿನ್ನವನ್ನು ಪರೀಕ್ಷಿಸಿದ ಚನ್ನಬಸವನಿಗೆ ವಂಚಕರು ಮೊಸ ಮಾಡಿರುವುದು ತಿಳಿದು ಬಂದಿದೆ. ನಂತರ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ವಂಚಕರ ವಿರುದ್ದ ದೂರು ನೀಡಿದ್ದಾರೆ. ಪ್ರಕರಣ ಕುರಿಉ ದೂರು ದಾಖಲಿಸಿಕೊಂಡ ಪೋಲಿಸರು ಆರೋಪೊಗಳಿಗಾಗಿ ಬಲೆ ಬೀಸಿ ಕರಣ್ ಮತ್ತು ಪ್ರವೀಣ್ ರನ್ನು ಬಂಧಿಸಿ ಇಬ್ಬರ ಕಡೆಯಿಂದ 12 ಲಕ್ಷ ವಶಪಡಿಸಿಕೊಂಡಿದ್ದು ಇನ್ನಿಬ್ಬರು ಆರೋಪಿಗಳಾದ ಸಂತೋಷ್ ಮತ್ತು ಪ್ರಕಾಶ್ ಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

Karnataka Lokayukta: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಪುರಸಭೆ ಅಧಿಕಾರಿ..!

Head Master: ಫೋಕ್ಸೋ ಪ್ರಕರಣದಲ್ಲಿ ಶಾಲೆಯ ಮುಖ್ಯ ಶಿಕ್ಷಕನ ಬಂಧನ..!

ಹುಚ್ಚವನಹಳ್ಳಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ..!

- Advertisement -

Latest Posts

Don't Miss