Sunday, December 1, 2024

Latest Posts

Loksabha; Election ಜೋಶಿಗೆ ಸೋಲುಣಿಸಲು ಸೂಕ್ತ ಅಭ್ಯರ್ಥಿ ಹುಡುಕಾಟದಲ್ಲಿ ಕೈ ಪಡೆ..!

- Advertisement -

ರಾಜಕೀಯ ಸುದ್ದಿ: ಲೋಕಸಭೆ ಚುನಾವಣೆಗೆ ಬಿಜೆಪಿ ಪ್ರಬಲ ನಾಯಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯನ್ನು ಸೋಲಿಸಲು ಕಾಂಗ್ರೆಸ್ ತೆರೆಮರೆಯಲ್ಲಿ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದೆ.

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ಜಗದೀಶ್ ಶೇಟ್ಟರ್ ಅವರನ್ನುಕಣಕ್ಕಿಳಿಸಲು ಸಿದ್ದವಾಗಿತ್ತು ಆದರೆ ಶೆಟ್ಟರ್ ಚುನಾವಣೆಯಿಂದ ಹಿಂದೆ ಸರಿದಿದ್ದರಿಂದ ಬೇರೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತಯಾರಿ ಮಾಡುವತ್ತ ಗಮನ ಹರಿಸುತ್ತಿದೆ

ರಾಷ್ಟ್ರಮಟ್ಟದ ನಾಯಕರಾಗಿ ಗುರುತಿಸಿಕೊಂಡಿರುವ ಜೋಶಿ ವಿರುದ್ಧ ಲಿಂಗಾಯತ ನಾಯಕರನ್ನೇ ಕಣಕ್ಕಿಳಿಸಲು ಮುಂದಾಗಿರುವ ಕೈಪಡೆ, ಬದ್ಧ ವೈರಿಯನ್ನು ಅಖಾಡಕ್ಕಿಳಿಸೋ ರಣತಂತ್ರಕ್ಕೆ ಕಾಂಗ್ರೆಸ್ ಮುಂದಾಗಿದ್ದು. ಯಡಿಯೂರಪ್ಪನವರ ಸಂಬಂಧಿ, ಮಾಜಿ ಶಾಸಕ ಎಸ್.ಐ ಚಿಕ್ಕನಗೌಡ ಹೆಸರು ಕಾಂಗ್ರೆಸ್ ಅಂಗಳದಲ್ಲಿ ಕೇಳಿ ಬರುತ್ತಿವೆ. ಇತ್ತ ಧಾರವಾಡ ಕ್ಷೇತ್ರದ ವ್ಯಾಪ್ತಿಯಲ್ಲಿ ಗೌಡರು ಸಕ್ರಿಯರಾಗಿದ್ದಾರೆ

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಹೊರಬಂದು ಸ್ಪರ್ಧಿಸಿ ಪರಾಭವಗೊಂಡಿದ್ದರು. ತಮಗೆ ಬಿಜೆಪಿ ಟಿಕೆಟ್ ತಪ್ಪಲು ಜೋಶಿ ಅವರೇ ಕಾರಣ ಎಂಬ ಸಿಟ್ಟು ಗೌಡರಿಗೆ ಇದೆ ಎಂದು ಹೇಳಲಾಗಿದೆ. ಪಂಚಮಸಾಲಿ ಸಮುದಾಯದ ಹಿರಿಯ ಮುಖಂಡ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರು ಚಿಕ್ಕನಗೌಡರು ಕಾಂಗ್ರೆಸ್ ಸೇರ್ಪಡೆಯಾಗೋದಾಗಿ ಘೋಷಣೆ ಮಾಡಿದ್ದಾರೆ.

ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸೋದು ಖಚಿತ ಎಂದು ಕರ್ನಾಟಕ ಟಿವಿಗೇ ಎಸ್.ಐ.ಚಿಕ್ಕನಗೌಡ್ರ ಹೇಳಿದ್ದಾರೆ. ಆದ್ರೆ ಕ್ಷೇತ್ರ ಯಾವುದನ್ನು ಖಚಿತಪಡಿಸಿಲ್ಲ.

Karnataka Lokayukta: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಪುರಸಭೆ ಅಧಿಕಾರಿ..!

ಹುಚ್ಚವನಹಳ್ಳಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ..!

Head Master: ಫೋಕ್ಸೋ ಪ್ರಕರಣದಲ್ಲಿ ಶಾಲೆಯ ಮುಖ್ಯ ಶಿಕ್ಷಕನ ಬಂಧನ..!

- Advertisement -

Latest Posts

Don't Miss