Haveri News: ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ: ಅಂಜುಮನ್ ಅಧ್ಯಕ್ಷ ನಜೀರ್ ಅಹ್ಮದ್

Haveri News: ಹಾವೇರಿ:  ಗೋ ವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಣೆ ಮಾಡಿ ಎಂದು ಅಂಜುಮನ ಅಧ್ಯಕ್ಷ ನಜೀರ್ ಅಹ್ಮದ್ ಸವನೂರ್ ಹೇಳಿದ್ದಾರೆ. ಹಾವೇರಿಯ ಹಾನಗಲ್ ಪಟ್ಟಣದ ಅಂಜುಮನ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ನಜೀರ್ ಅಹ್ಮದ್ ಸವಣೂರು, ಜೂನ 3ರಂದು ನಡಿಯಬೇಕಿದ್ದ ಪ್ರತಿಭಟನೆಯನ್ನು ಜೂನ್ 6 ರಂದು ಮಾಡಲಾಗುವುದು ಎಂದಿದ್ದಾರೆ.

ಜೂನ್ 3 ರಂದು ಡಿಕೆ ಶಿವಕುಮಾರ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ನೋಟಿಸ್ ಬಂದಿದ್ದು ಜೂನ್ ಮೂರರಂದು ಯಾವುದೇ ರೀತಿಯ ಪ್ರತಿಭಟನೆ ಮಾಡಬಾರದೆಂದು ನೋಟಿಸ್ ನಲ್ಲಿ ಹೇಳಲಾಗಿದೆ. ಹಾಗಾಗಿ ಪ್ರತಿಭಟನೆಯನ್ನು ಜೂನ್ 6 ರಂದು ಪಟ್ಟಣದ ಕಾಶ್ಮೀರಿ ದರ್ಗಾದಿಂದ್ ತಹಸೀಲ್ದಾರ್ ಕಚೇರಿ ವರೆಹಗೆ ಮೆರವಣಿಗೆ ಮುಖಾಂತರ ಪ್ರತಿಭಟಿಸಿ ತಹಸೀಲ್ದಾರ್ ಗೆ ಮನವಿ ಸಲ್ಲಿಕೆ ಮಾಡಲಾಗುತ್ತದೆ ಎಂದು ನಜೀರ್ ಹೇಳಿದ್ದಾರೆ.

ಜೂನ್ 6 ರಂದು ನಡೆಯುವ ಪ್ರತಿಭಟನೆಗೆ ತಾಲೂಕಿನ ಸಮಸ್ತ ಹಿಂದೂ ಬಾಂಧವರು ಮತ್ತು ಎಲ್ಲಾ ತಾಲೂಕಿನ ಸಂಘಟನೆ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಜೊತೆಗೂಡಿ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು. ಮನವಿ ಕೊಟ್ಟ 15 ದಿನಗಳಲ್ಲಿ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಣೆ ಮಾಡದಿದ್ದರೆ ಜಿಲ್ಲಾ ಮಟ್ಟದಲ್ಲಿ ಎಲ್ಲ ತಾಲೂಕಿನ ಮುಸ್ಲಿಂ ಬಾಂಧವರು ಸೇರಿ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.

About The Author