Haveri: ಶಾಸಕ ಶ್ರೀನಿವಾಸ್ ಮಾನೆಯವರಿಗೆ ಸಚಿವ ಸ್ಥಾನ ಸಿಗಲಿ ಎಂದು ಕಾಶ್ಮೀರ್ ದರ್ಗಾದಲ್ಲಿ ಪ್ರಾರ್ಥನೆ

Haveri News: ಹಾವೇರಿ: ಶ್ರೀನಿವಾಸ್ ಮಾನೆಯವರಿಗೆ ಸಚಿವ ಸ್ಥಾನ ಸಿಗಲಿ ಎಂದು ಹಾನಗಲ್ ಪಟ್ಟಣದಲ್ಲಿ ಕಾಂಗ್ರೆಸನ ಮುಸ್ಲಿಂ ಮುಖಂಡರು ಪಟ್ಟಣದ ಕಾಶ್ಮೀರ್ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದರು.

2023 ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿಯಲಿಕ್ಕೆ ಶ್ರೀನಿವಾಸ್ ಮಾನೆ ಅವರ ಪಾತ್ರ ಬಹುಮುಖ್ಯವಾಗಿತ್ತು. ಅಲ್ಲದೇ, 2021ರ ಮರು ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು ಆಗಿನ ಸಿಎಂ ಹಾವೇರಿ ಜಿಲ್ಲೆ , ಶಿಗ್ಗಾವ್ ಸವನುರಿನ ಕ್ಷೇತ್ರದ ಶಾಸಕರಾದ ಬಸವರಾಜ್ ಬೊಮ್ಮಾಯಿ ಅವರು ಇದು ಕೂಡ ತಮ್ಮ ತವರು ಜಿಲ್ಲೆಯಲ್ಲಿ ತಮ್ಮ ಪಕ್ಷವನ್ನು ಗೆಲ್ಲಿಸಿಕೊಳ್ಳಲಿಕ್ಕೆ ಆಗಲಿಲ್ಲ.

ಆದರೆ ಶ್ರೀನಿವಾಸ್ ಮಾನೆ ಶಿಗ್ಗಾವ್ ಸವಣೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಯಾಸಿರ್ ಖಾನ್ ಪಠಾಣ್ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಬಹುದೊಡ್ಡ ಪಾತ್ರ  ವಹಿಸಿದ್ದರು. ಹಾವೇರಿ ಜಿಲ್ಲೆಯಲ್ಲಿ ಕಾಂಗ್ರೆಸ್ಸಿನ ಆರು ಶಾಸಕರಿದ್ದು ಆರು ಶಾಸಕರಲ್ಲಿ ಯಾರಿಗಾದರೂ ಸಚಿವ ಸ್ಥಾನ ಕೊಟ್ಟರೆ ನಮಗೆ ಸಂತೋಷ ಎಂದು ಕಾಂಗ್ರೆಸ್ ಮುಖಂಡ ಮತಿನ್ ಶಿರಬಡಗಿ ಹೇಳಿದ್ದಾರೆ.

About The Author