Haveri News: ಕರ್ನಾಟಕ ರಾಜ್ಯವನ್ನು ಬರ ಪೀಡಿತ ರಾಜ್ಯವೆಂದು ಘೋಷಣೆ ಮಾಡಿ: ರಾಮನ ಗೌಡ ಪಾಟೀಲ್

Haveri News: ಹಾವೇರಿ: ಕೂಡಲೇ ಕರ್ನಾಟಕ ರಾಜ್ಯವನ್ನು ಬರ ಪೀಡಿತ ರಾಜ್ಯವೆಂದು ಘೋಷಣೆ ಮಾಡಿ ಎಂದು ಹಾನಗಲ್ ತಾಲೂಕಾ j d s ಅಧ್ಯಕ್ಷ ರಾಮನ ಗೌಡ ಪಾಟೀಲ ಹೇಳಿದ್ದಾರೆ.

ಹಾವೇರಿಯಲ್ಲಿ ಮಾಧ್ಯಮದ ಜತೆ ಮಾತನಾಡಿರುವ ಅವರು, ರೈತರು ಸಂಕಷ್ಟ್ ದಲ್ಲಿ ಇದಾಗ ರೈತರ ಪರ ಮೊದಲು ನಿಲುವ ಪಕ್ಷ ಜೆ ಡಿ ಎಸ್ ಪಕ್ಷ. ನಮ್ಮ ರೈತರು ಈಗಾಗಲೇ ಶೇಕಡ 90ರಷ್ಟು ಬಿತ್ತನೆ ಮಾಡಿದ್ದು ಮಳೆ ನೋಡಿದರೆ ಕೈ ಕೊಟ್ಟಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈಗಾಗಲೇ 14 ಜಿಲ್ಲೆ ಗಳು ಬರಪೀಡಿತ ಇವೆ ಎಂದು ಮೂಕಿಕವಾಗಿ ಹೇಳಿದಾರೆ ಅದರಲ್ಲೂ ನಮ್ಮ ಹಾವೇರಿ ಜಿಲ್ಲೆ ಕೂಡ ಇದೆ. ಆದರೆ ನಮಗೆ ಯಾವುದೇ ಮೌಕಿಕವಾಗಿ ಹೇಳುವುದು ಬೇಡ ಅಧಿಕೃತವಾಗಿ ಘೋಷಣೆ ಮಾಡಿ. ಮುಂದಿನ ದಿನಗಳಲ್ಲಿ ಮಳೆ ಕೈ ಕೊಟ್ಟರೆ ದನ ಕರುಗಳಿಗೆ ಮೇವು ಬರ ಬರುವುದು ಖಂಡಿತ.

ರಾಜ್ಯ ಸರ್ಕಾರ 15 ದಿನ ಒಳಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಬರಗಾಲ ಎಂದು ಘೋಷಣೆ ಮಾಡದಿದ್ದರೆ ಜೆ ಡಿ ಎ ಸ್ ಪಕ್ಷದಿಂದ ಉಗ್ರವಾದ ಹೋರಾಟ ಮಾಡುವುದು ಎಂದು ಹೇಳಿದರು.

About The Author