Haveri News: ಹಾವೇರಿ: ಹಾವೇರಿ ಶಾಸಕ ಶಿವಕುಮಾರ್ ಮಾನೆಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ ಜೋರಾಗಿದೆ. ಇಂದು ಹಾನಗಲ್ ಪಟ್ಟಣದಲ್ಲಿ ಶಿವಕುಮಾರ್ ಮಾನೆಗೆ ಸಚಿವ ಸ್ಥಾನ ನೀಡುವಂತೆ ಮುಸ್ಲಿಂ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ.
ಕೈಯಲ್ಲಿ ಶಾಸಕ ಮಾನೆ ಭಾವಚಿತ್ರ ಹಿಡಿದು ಪ್ರತಿಭಟಿಸಿದ ಮುಖಂಡರು, 2021ರ ಉಪ ಚುನಾವಣೆ ಮತ್ತು 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲವು ಸಾಧಿಸಿದ ಶಾಸಕ ಮಾನೆಗೆ ಸಚಿವ ಸ್ಥಾನ ನೀಡಬೇಕು, ಪಕ್ಷ ಸಂಘಟನೆಗೆ ಶ್ರೇಮಿಸಿರುವ ಶಾಸಕಕರಿಗೆ ಸಚಿವ ಸ್ಥಾನ ನೀಡದಿದ್ದರೆ ಉಗ್ರ ಹೋರಾಟ ಮಾಡಲಿದ್ದೇವೆ ಎಂದು ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಇನ್ನು ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಸಿಕಂದರ್ ವಾಲಿಕಾರ ಸೇರಿದಂತೆ ಹಲವು ಮುಸ್ಲಿಂ ಸಮುದಾಯದ ಮುಖಂಡರು ಭಾಗಿಯಾಗಿದ್ದರು.




