Haveri: ದೇವಸ್ಥಾನದಲ್ಲೇ ದೇವರ ಎದುರು ನಿಂತು ಮೂತ್ರ ವಿಸರ್ಜನೆ ಮಾಡಿ ಜಾಫರ್ ಎಂಬಾತನ ಉದ್ಧಟತನ

Haveri: ಹಾವೇರಿಯ ಶಿಗ್ಗಾವಿಯಲ್ಲಿ ಮುಸ್ಲಿಂ ಯುವಕ  ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ, ದೇವರ ಮೂರ್ತಿ ಎದುರು ಮೂತ್ರ ಮಾಡಿ ಉದ್ಧಟತನ ಮೆರೆದಿದ್ದಾನೆ.

ಮಹಮದ್ ಜಾಫರ್ ಅಬ್ದುಲ್ ರೆಹಮಾನ್ ಕದರಮಂಡಲಿ ಎಂಬಾತನೇ ಈ ದುರ್ವರ್ತನೆ ತೋರಿರುವ ಯುವಕನಾಗಿದ್ದು, 20ನೇ ತಾರೀಖಿನಂದು ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಶಿಗ್ಗಾವಿ ಪಟ್ಟಣದ ಟೆಂಪೋ ಸ್ಟಾಂಡ್ ಬಳಿ ಇರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಈ ಯುವಕ ಮೂತ್ರ ವಿಸರ್ಜನೆ ಮಾಡಿದ್ದು, ದೇವಸ್ಥಾನದ ಬಳಿ ಇರುವ ಸ್ಥಳೀಯರು ಈತನ ಕೃತ್ಯವನ್ನು ನೋಡಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲೇ ಜಾಫರ್‌ನನ್ನು ಹಿಡಿದು ಕ್ಲಾಸ್ ತೆಗೆದುಕ“ಂಡಿದ್ದಾರೆ. ಶ್ರಾವಣ ಮಾಸದ ವಿಶೇಷ ಪೂಜೆಗಾಗಿ ದೇವಸ್ಥಾನವನ್ನು ಸ್ವಚ್ಛ ಮಾಡಲಾಗಿದ್ದು, ಇಲ್ಲಿ ಬಂದು ಮೂರತ್ರ ವಿಸರ್ಜನೆ ಮಾಡಲು ಎಷ್ಟು ಧೈರ್ಯ ನಿನಗೆ ಎಂದು ಜಾಫರ್‌ನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಜಾಫರ್ ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದಾನೆ.

ಆದರೆ ಶಿಗ್ಗಾವಿ ಪೊಲಿಸ್ ಠಾಣೆಯಲ್ಲಿ, ಸಿದ್ದಪ್ಪ ಶಿವಪ್ಪ ಕಾಳೆ ಎಂಬುವವರು ಜಾಫರ್ ವಿರುದ್ಧ ದೂರು ದಾಖಲಿಸಿ, ಈತನನ್ನು ಕಂಬಿ ಹಿಂದೆ ಕಳುಹಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ಸದ್ಯ ಮಹಮದ್ ಜಾಪರ್ ನನ್ನು ಬಂಧಿಸಿರೋ ಪೊಲೀಸರು, ಹಿಂದೂಗಳ ಭಾವನೆಗೆ ದಕ್ಕೆ ತರುವ ಉದ್ದೇಶದಿಂದ ಮಹಮದ್ ಜಾಪರ್ ದೇವಾಲಯದಲ್ಲೇ ಮೂತ್ರ ವಿಸರ್ಜನೆ ಮಾಡಿದ್ದಾರೆಂದು ದೂರು ದಾಖಲಿಸಿದ್ದಾರೆ. ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಹಿಂದೂ ಸಂಘಟನೆ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

About The Author