Haveri: ಈ ರಾಶಿಯ ತಾಯಿ-ಮಕ್ಕಳ ಸಂಬಂಧ ಅತೀ ಉತ್ತಮವಾಗಿರುತ್ತದೆ.

Spiritual: ತಂದೆ-ತಾಯಿ ಮಕ್ಕಳ ಬಾಂಧವ್ಯ ಅಂದ್ರೆ, ಅದು ಎಲ್ಲಕ್ಕಿಂತ ಮಿಗಿಲಾದ, ಬೆಲೆ ಕಟ್ಟಲಾಗದ ಬಾಂಧವ್ಯ. ಆದರೂ ಕೆಲವರು ಅಪ್ಪ-ಅಮ್ಮನನ್ನು ಪ್ರೀತಿಸುವುದಿಲ್ಲ. ಇದೆಷ್ಟು ಸತ್ಯವೋ, ಕೆಲವು ಅಪ್ಪ-ಅಮ್ಮಂದಿರುವ ಮಕ್ಕಳಲ್ಲಿ ಪಾರ್ಷಿಯಾಲಿಟಿ ಮಾಡಿ, ಓರ್ವ ಮಗ ಅಥವಾ ಮಗಳನ್ನು ಹೆಚ್ಚು ಪ್ರೀತಿಸಿ, ಇನ್ನೋರ್ವ ಮಗುವನ್ನು ಕೀಳಾಗಿ ನೋಡುವ ಉದಾಹರಣೆಗಳಿಗೇನೂ ಕಡಿಮೆ ಇಲ್ಲ. ಆದರೆ ಏನೇ ಆದರೂ ತಾಯಿ ಮತ್ತು ಮಕ್ಕಳ ನಡುವಿನ ಬಾಂಧವ್ಯ ಎಂದಿಗೂ ಕಡಿಮೆಯಾಗದ ರಾಶಿಗಳ ಬಗ್ಗೆ ನಾವಿಂದು ಮಾತನಾಡಲಿದ್ದೇವೆ.

ಮೇಷ: ಮೇಷ ರಾಶಿಯವರು ತಾಯಿಯಾಗಿರಲಿ ಅಥವಾ ಮಕ್ಕಳೇ ಆಗಿರಲಿ, ಇವರ ತಾಯಿ-ಮಕ್ಕಳ ಸಂಬಂಧ ಉತ್ತವಾಗಿರುತ್ತದೆ. ಈ ರಾಶಿಯನ್ನು ಬುಧ ಆಳುವ ಕಾರಣಕ್ಕೆ, ಪೋಷಕರು ಮಕ್ಕಳಿಂದ ಸಕಲ ಸೌಲಭ್ಯಗಳನ್ನು ಪಡೆಯುತ್ತಾರೆ. ಅಲ್ಲದೇ, ಇವರ ನಡುವಿನ ಪ್ರೀತಿ-ಕಾಳಜಿ ಎಲ್ಲವೂ ಅತ್ಯುತ್ತಮವಾಗಿರುತ್ತದೆ.

ವೃಷಭ: ಸೂರ್ಯ ಆಳುವ ಈ ರಾಶಿಯವರು ಮಕ್ಕಳಿಂದ ಅತೀ ಪ್ರೀತಿಯನ್ನು ಪಡೆಯುತ್ತಾರೆ. ಅದರಲ್ಲೂ ಇವರ ಮಕ್ಕಳು ಇವರನ್ನು ಹೆಚ್ಚು ಕಾಳಜಿ ಮಾಡುತ್ತಾರೆ. ಏಕೆಂದರೆ, ವೃಷಭ ರಾಶಿಯವರು ತಾಳ್ಮೆಯ ಸ್ವಭಾವದವರು. ಇವರ ತಾಳ್ಮೆ, ಪ್ರೀತಿಯ ಗುಣವೇ ಇವರಿಗೆ ಪ್ರತಿಯಾಗಿ ಹೆಚ್ಚು ಪ್ರೀತಿ ನೀಡುವಂತೆ ಮಾಡುತ್ತದೆ.

ಮಿಥುನ: ಮಿಥುನ ರಾಶಿಯವರಿಗೂ ಮಕ್ಕಳಿಂದ ಹೆಚ್ಚು ಪ್ರೀತಿ, ಬೆಂಬಲ ಸಿಗುತ್ತದೆ. ಅಲ್ಲದೇ ಮಿಥುನ ರಾಶಿಯವರು ಗುರು ಹಿರಿಯರಿಗೆ ಹೆಚ್ಚು ಗೌರವ ನೀಡುವುದರಿಂದ, ಇವರು ಕೂಡ ತಂದೆ ತಾಯಿಯಾಗಲಿ ಅಥವಾ ಯಾರೇ ಹಿರಿಯರಾಗಲಿ ಅವರನ್ನು ಗೌರವ ಪ್ರೀತಿ ಕಾಳಜಿಯಿಂದ ಕಾಣುತ್ತಾರೆ.

ಮೀನ: ಮೀನ ರಾಶಿಯವರು ಸೂಕ್ಷ್ಮ ಸ್ವಭಾವದವರು. ಮೃದು ಮನಸ್ಸಿನವರು. ಹಾಗಾಗಿ ಇವರು ಎಲ್ಲರಿಗೂ ಪ್ರೀತಿ-ಕಾಳಜಿ ತೋರುತ್ತಾರೆ. ಯಾರಾದರೂ ಬೈದರೆ ಅವರಿಗೆ ತಿರುಗಿ ಬೈಯ್ಯುವ ಮನಸ್ಸು ಇವರಿಗೆ ಬರುವುದಿಲ್ಲ. ಅಂಥ ಸ್ವಭಾವದ ಮೀನ ರಾಶಿಯವರ ಜತೆಗಿನ ತಂದೆ-ತಾಯಿ-ಮಕ್ಕಳ ಸಂಬಂಧ ಅತ್ಯುತ್ತಮವಾಗಿರುತ್ತದೆ.

About The Author