Haveri: ಹಾವೇರಿ: ಹಾವೇರಿಯಲ್ಲಿ ವ್ಯಕ್ತಿಯೊಬ್ಬ ಅತ್ತಿಗೆ ಹಾಗೂ ಅವರ ಇಬ್ಬರು ಮಕ್ಕಳನ್ನು ಕೊಚ್ಚಿ ಕೊಂದಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಣ್ಣನ ಹೆಂಡತಿ ಸಂಬಂಧದಲ್ಲಿ ಅತ್ತಿಗೆಯಾದರೂ ತಾಯಿಯ ಸ್ಥಾನ ನೀಡುತ್ತೇವೆ. ಯಾವುದೇ ವ್ಯಕ್ತಿಗೆ ಅಣ್ಣನ ಮಕ್ಕಳು ತನಗೂ ಮಕ್ಕಳು ಎಂಬ ಭಾವನೆ ಇರುತ್ತದೆ. ಅಣ್ಣನ ಮಕ್ಕಳೂ ಪ್ರೀತಿಯಿಂದ ಚಿಕ್ಕಪ್ಪ ಎಂದು ಕರೆದಾಗ ಯಾರಿಗಾದರೂ ಖುಷಿಯಾಗುತ್ತದೆ. ಆದರೆ, ಹಾವೇರಿ ಜಿಲ್ಲೆಯಲ್ಲಿ ದುರುಳನೊಬ್ಬ ಅತ್ತಿಗೆ ಹಾಗೂ ಅವರ ಇಬ್ಬರು ಮಕ್ಕಳನ್ನೇ ಕೊಚ್ಚಿ ಕೊಲೆ ಮಾಡಿದ್ದಾನೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಯಳ್ಳೂರು ಗ್ರಾಮದಲ್ಲಿ ಕುಮಾರ್ ಗೌಡ ಎಂಬಾತನು ಅಣ್ಣನ ಹೆಂಡತಿ ಹಾಗೂ ಆತನ ಇಬ್ಬರು ಮಕ್ಕಳನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಗೀತಾ (35), ಅಕುಲ್ (10) ಹಾಗೂ ಅಂಕಿತಾ (8) ಮೃತರು. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕೊಲೆಯಾಗಿರುವ ಗೀತಾ ಪತಿ ದುಬೈನಲ್ಲಿ ಕೇಲಸ ಮಾಡುತ್ತಾನೆ. ಆರೋಪಿ ಕುಮಾರ ಪುಣೆಯಲ್ಲಿ ಕೇಲಸ ಮಾಡುತ್ತಿದ್ದ. ಕೇಲಸ ಬಿಟ್ಟ ಬಳಿಕ ಹಾನಗಲ್ ಪಟ್ಟಣದಲ್ಲಿದ್ದ ವಾಣಿಜ್ಯ ಮಳಿಗೆ, ಹೊಲವನ್ನ ನೋಡಿಕೊಂಡು ಅತ್ತಿಗೆ, ಇಬ್ಬರು ಮಕ್ಕಳು ಹಾಗು ತಾಯಿ ಜೊತೆಗೆ ವಾಸವಾಗಿದ್ದ. ಪ್ರತಿನಿತ್ಯ ಅಣ್ಣನ ಮಕ್ಕಳನ್ನ ಶಾಲೆಗೆ ಕರೆದುಕೊಂಡು ಹೋಗುವುದು ಮಾಡುತ್ತಿದ್ದ. ಊರಿನವರೆ ಹೇಳುವಂತೆ ಕುಟುಂಬದಲ್ಲಿ ಯಾವುದೇ ಕಲಹ ಇರಲಿಲ್ಲವಂತೆ. ಆದ್ರೆ ಆರೋಪಿ ಕುಮಾರ ವಿಪರೀತ ಕುಡಿತದ ಚಟಕ್ಕೆ ಬಿದ್ದಿದ್ದ. ಕಳೆದೊಂದು ತಿಂಗಳಿನಿಂದ ವಾಣಿಜ್ಯ ಮಳಿಗೆಗಳಿಂದ ಬರುತ್ತಿದ್ದ ಬಾಡಿಗೆ ಹಣವನ್ನ ಸಹೋದರ ಕುಮಾರನ ಬದಲಿಗೆ ಪತ್ನಿಯ ಅಕೌಂಟಗೆ ಹಾಕುವಂತೆ ಬಾಡಿಗೆದಾರರಿಗೆ ಹೇಳಲಾಗಿತ್ತು. ಇದರಿಂದ ಕುಮಾರಗೆ ಹಣಕಾಸಿನ ಸಮಸ್ಯೆ ಎದುರಾಗಿತ್ತು. ಇದೆ ವಿಚಾರ ಹಾಗೂ ಆಸ್ತಿ ವಿಚಾರಕ್ಕೆ ಕೊಲೆ ಮಾಡಲಾಗಿದೆ ಎಂದು ಶಂಕೆ ವ್ಯಕ್ತಪಡಿಸಿರುವ ಪೊಲೀಸರು ಆರೋಪಿಗಾಗಿ ಬಲೆ ಬಿಸಿದ್ದಾರೆ.
‘ದೊಡ್ಡ ಮಟ್ಟದಲ್ಲಿ ಅನಾಹುತವಾದರೆ ನೇರವಾಗಿ ರೂರಲ್ ಪೊಲೀಸ್ ಠಾಣೆಯವರೇ ಕಾರಣರಾಗುತ್ತಾರೆ’
ಮೇಕ್ ಇನ್ ಇಂಡಿಯಾ ಯೋಜನೆಯಡಿ ಮಹಿಳೆಗೆ ಮೋಸ: 1.2 ಕೋಟಿ ರೂ. ವಂಚಿಸಿದ ಉದ್ಯಮಿ
‘ಕಾಂಗ್ರೆಸ್ ಪಕ್ಷಕ್ಕೆ ಜಯವಾಗಲಿ. ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಜಯವಾಗಲಿ’