Friday, November 22, 2024

Latest Posts

ಮನೆಯಲ್ಲಿ ನವಿಲುಗರಿ ಇದ್ದರೆ ಆ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ..ಕುತೂಹಲಕಾರಿ ವೈಶಿಷ್ಟ್ಯಗಳು ನಿಮಗಾಗಿ..!

- Advertisement -

ಗಣೇಶ, ಕಾರ್ತಿಕೇಯ ಮತ್ತು ಇಂದ್ರನ ಜೊತೆಗೆ..ಶ್ರೀ ಕೃಷ್ಣನೂ ನವಿಲು ಗರಿಯನ್ನು ತುಂಬಾ ಇಷ್ಟಪಡುತ್ತಾನೆ. ಹಿಂದೂ ಧಾರ್ಮಿಕ ಸಂಪ್ರದಾಯಗಳಲ್ಲಿ ನವಿಲಿಗೆ ವಿಶೇಷ ಸ್ಥಾನವಿದೆ.

ದೇವರಿಗೆ ಅತ್ಯಂತ ಪ್ರಿಯವಾದ ಈ ನವಿಲು ಗರಿಯನ್ನು ಮನೆಯಲ್ಲಿಟ್ಟರೆ ಅದೃಷ್ಟ ಒಲಿಯುತ್ತದೆ ಎಂಬುದು ಜನರ ನಂಬಿಕೆ. ಮನೆಯಲ್ಲಿನ ಎಲ್ಲಾ ನಕಾರಾತ್ಮಕ ಶಕ್ತಿಗಳು ಮತ್ತು ದೋಷಗಳು ದೂರವಾಗುತ್ತವೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಶ್ರೀಕೃಷ್ಣನು ತನ್ನ ಕಿರೀಟದ ಮೇಲೆ ನವಿಲಿನ ಗರಿಯನ್ನು ಧರಿಸುತ್ತಾನೆ, ಕಾರ್ತಿಕೇಯನ ವಾಹನ ನವಿಲು..ಲಕ್ಷ್ಮಿ ಮತ್ತು ಸರಸ್ವತಿ ದೇವಿಯ ಪ್ರಾತಿನಿಧ್ಯವೆಂದು ಪರಿಗಣಿಸಲಾದ ಈ ನವಿಲು ಗರಿಯಿಂದ ಎಲ್ಲವೂ ಶುಭವಾಗಲಿದೆ ಎಂದು ಹೇಳಲಾಗುತ್ತದೆ. ಸಂಪತ್ತು ಮತ್ತು ಜ್ಞಾನ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಇಂದು ನಾವು ನವಿಲುಗೆ ಸಂಬಂಧಿಸಿದ ಕೆಲವು ವಾಸ್ತು ನಿಯಮಗಳನ್ನು ತಿಳಿಯೋಣ..

ಹಣದ ಕೊರತೆ ನಿವಾರಣೆಯಾಗಲಿದೆ..
ನೀವು ದೀರ್ಘಕಾಲದಿಂದ ಹಣದ ಸಮಸ್ಯೆ ಎದುರಿಸುತ್ತಿದ್ದರೆ ನಿಮ್ಮ ಮನೆಯಲ್ಲಿ ನವಿಲುಗರಿಯನ್ನು ಇಡುವುದರಿಂದ ಅತ್ಯಂತ ಪ್ರಯೋಜನ ವಿದೇ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಮನೆಯಲ್ಲಿ ಎಲ್ಲಿ ಹಣ ಇಡುತ್ತೀರೋ ಅಲ್ಲಿ ನವಿಲು ಗರಿಯನ್ನು ಇಡುವುದರಿಂದ ಲಕ್ಷ್ಮಿ ದೇವಿ ಸಂತೋಷಿಸಿ ಆಶೀರ್ವಾದವನ್ನು ನೀಡುತ್ತಾರೆ. ಹಾಗೆಯೆ ನೀವು ಕೆಲಸ ಮಾಡುವ ಸ್ಥಳದಲ್ಲಿ ನವಿಲು ಗರಿಯನ್ನು ಇಡುವುದರಿಂದ ಇದು ನಿಮಗೆ ಅದೃಷ್ಟವನ್ನು ತರುತ್ತದೆ.

ಜಾತಕ ದೋಷ ನಿವಾರಣೆಯಾಗುತ್ತದೆ..
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ.. ಜಾತಕದಲ್ಲಿ ರಾಹುದೋಷ ಇರುವವರು ಆ ದೋಷದಿಂದ ಮುಕ್ತಿ ಹೊಂದಲು ತಮ್ಮ ಬಳಿ ನವಿಲುಗರಿಯನ್ನು ಇಟ್ಟುಕೊಳ್ಳಿ. ನವಿಲು ಗರಿ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ. ಇದು ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಿಸುತ್ತದೆ.

ಓದುವುದರಲ್ಲಿ ಯಶಸ್ಸು..
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಕ್ಕಳ ಅಧ್ಯಯನ ಕೊಠಡಿಯಲ್ಲಿ ನವಿಲು ಗರಿಯನ್ನು ಇಡುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಮಕ್ಕಳು ಓದುವ ಕಡೆ ಗಮನ ಕೊಡದಿದ್ದರೆ ನವಿಲನ್ನು ಮಕ್ಕಳ ಕೋಣೆಯಲ್ಲಿ ಇಡುವಂತೆ ವಾಸ್ತು ತಜ್ಞರು ಸಲಹೆ ನೀಡುತ್ತಾರೆ. ಇದು ಅವರ ಮನಸ್ಸನ್ನು ಕೇಂದ್ರೀಕರಿಸಲು ಮತ್ತು ಓದುವುದರಲ್ಲಿ ವಿಜಯವನ್ನು ಸಾದಿಸಲು ಸಹಾಯ ವಾಗುತ್ತದೆ.

ನಕಾರಾತ್ಮಕ ಶಕ್ತಿ ದೂರವಾಗುತ್ತದೆ..
ಕೆಲವೊಮ್ಮೆ ನಕಾರಾತ್ಮಕ ಶಕ್ತಿಯು ನಿಮ್ಮ ಸುತ್ತಲೂ ಸುತ್ತುತ್ತಿರುವಂತೆ ಭಾಸವಾಗುತ್ತದೆ. ನೀವು ಮಾಡುವ ಪ್ರತಿಯೊಂದೂ ಕೆಲಸವನ್ನು ಅಡ್ಡಿಪಡಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮನೆಯಲ್ಲಿ ನವಿಲು ಗರಿಯನ್ನು ಇಟ್ಟುಕೊಳ್ಳಿ. ಇದರಿಂದ ಮನೆಯಲ್ಲಿನ ನೆಗೆಟಿವ್ ಎನರ್ಜಿ ದೂರವಾಗಿ ಪಾಸಿಟಿವ್ ಎನರ್ಜಿ ಬರುತ್ತದೆ. ಮನೆಯ ಪ್ರವೇಶ ದ್ವಾರದಲ್ಲಿರುವ ಗಣಪತಿ ಮೂರ್ತಿಯ ಪಕ್ಕದಲ್ಲಿ ನವಿಲಿನ ಗರಿಯನ್ನು ಎಡುವುದರಿಂದ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ.

2022 ಮುಗಿಯುವ ಮೊದಲು ಈ 5 ವಸ್ತುಗಳನ್ನು ಮನೆಗೆ ತನ್ನಿ..!!

ಈ ವಸ್ತುಗಳನ್ನು ಅಪ್ಪಿತಪ್ಪಿಯೂ ಉಚಿತವಾಗಿ ತೆಗೆದುಕೊಳ್ಳಬೇಡಿ..!

ಹೊಸ ವರ್ಷದ ಮೊದಲ ದಿನ ಹೀಗೆ ಮಾಡಿದರೆ..ಇಡೀ ವರ್ಷ ಹಣದ ಸುರಿಮಳೆ…!

 

- Advertisement -

Latest Posts

Don't Miss