ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಕೂಡ ಓರ್ವ ರೈತ. ಹೀಗಾಗಿಯೇ ಮಂಡ್ಯ ಜಿಲ್ಲೆಯ ರೈತರ ಸಮಸ್ಯೆಗೆ ಸ್ಪಂದಿಸಿ ರೈತರ ಜಮೀನುಗಳಿಗೆ ನೀರು ಹರಿಸುವಂತೆ ಧ್ವನಿಯೆತ್ತಿದ್ದಾನೆ ಆದ್ರೆ ಮಂಡ್ಯ ಸಂಸದರು ಮಾತ್ರ ಈ ಬಗ್ಗೆ ಸಂಸತ್ ನಲ್ಲಿ ಮಾತನಾಡಿಲ್ಲ ಅಂತ ದೇವೇಗೌಡರು ಪರೋಕ್ಷವಾಗಿ ಸಂಸದೆ ಸುಮಲತಾಗೆ ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಠ ದೇವೇಗೌಡ, ನಿಜವಾದ ರೈತ ಕೆಲಸ ಮಾಡ್ತಿರೋದು ಪ್ರಜ್ವಲ್ ರೇವಣ್ಣನೇ, ಈಗಲೂ ಆತ ತನ್ನ ಜಮೀನಿನಲ್ಲಿ ಉತ್ತಮ ಬೆಳೆ ಬೆಳೆಯುತ್ತಿದ್ದಾನೆ. ಆದ್ರೆ ನಿಖಿಲ್ ಕೂಡ ಇತ್ತೀಚೆಗೆ ಕೃಷಿ ಚಟುವಟಿಕೆ ನಡೆಸಲು ಓಡಾಡ್ತಿದ್ದಾನೆ. ಸಂಸತ್ ನಲ್ಲಿ ಭ್ರಷ್ಟ ಸರ್ಕಾರ ಎಂಬ ಬಿಜೆಪಿಯ ತೇಜಸ್ವಿ ಸೂರ್ಯ ಮಾತಿಗೆ ಪ್ರಜ್ವಲ್ ಸಮರ್ಥ ಉತ್ತರ ಕೊಟ್ಟಿದ್ದಾನೆ. ತಂದೆ ಹಾಗೂ ಚಿಕ್ಕಪ್ಪನ ಹೋರಾಟ ಅವನಿಗೆ ಗೊತ್ತಿದೆ ಅಂತ ದೇವೇಗೌಡರು ತಮ್ಮ ಮೊಮ್ಮಗನನ್ನು ಹಾಡಿಹೊಗಳಿದ್ರು.
ಇದೇ ವೇಳೆ ಮಂಡ್ಯದಲ್ಲಿ ನೀರು ಬಿಡಿ ಅಂತ ಪ್ರಜ್ವಲ್ ಸಂಸತ್ ನಲ್ಲಿ ಧ್ವನಿ ಎತ್ತಿದ್ದಾನೆ. ರೈತರ ಬೆಳೆಗಳಿಗೆ 2 ಟಿಎಂಸಿ ನೀರು ಹರಿಸಿ ಅಂತ ಒತ್ತಾಯಿಸಿದ್ದಾನೆ. ಆದ್ರೆ ಸಂಸತ್ ನಲ್ಲಿ ನೀರಿನ ಬಗ್ಗೆಯೇ ಮಾತನಾಡದ ಮಂಡ್ಯ ಸಂಸದರ ಬಗ್ಗೆ ನಾನು ಮಾತನಾಡೋದಿಲ್ಲ. ಅವರ ಬಗ್ಗೆ ನಾನು ಯಾಕೆ ಕಮೆಂಟ್ ಮಾಡಲಿ ಅಂತ ದೇವೇಗೌಡರು ಸಂಸದೆ ಸುಮಲತಾ ಅಂಬರೀಶ್ ಗೆ ಟಾಂಗ್ ನೀಡಿದ್ರು.
ಶ್ರಾವಣಕ್ಕೆ ರಾಜ್ಯದಲ್ಲಿ ಸರ್ಕಾರ ರಚಿಸಿಯೇ ತೀರುತ್ತಾ ಬಿಜೆಪಿ..?ಮಿಸ್ ಮಾಡದೇ ಈ ವಿಡಿಯೋ ನೋಡಿ