ಬೆಂಗಳೂರು: ಈಗಾಗಲೇ ಪ್ರಸಕ್ತ ವಿಧಾನಸಭೆ ಚುನಾವಣೆಯ ಜೆಡಿಎಸ್ ಅಭ್ಯರ್ಥಿಗಳ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಶನಿವಾರ ಮತ್ತೆ ಆರು ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದರು.
ಚಿತ್ರದುರ್ಗಕ್ಕೆ ವಿಧಾನ ಪರಿಷತ್ ನ ಮಾಜಿ ಸದಸ್ಯ ರಘು ಅಚಾರ್, ಮಡಿಕೇರಿಗೆ ಎನ್.ಎಂ.ಮುತ್ತಪ್ಪ, ಮೂಡಬಿದಿರೆಗೆ ಅಮರಶ್ರೀ, ವರುಣಾ ಕ್ಷೇತ್ರಕ್ಕೆ ಮಾಜಿ ಶಾಸಕ ಡಾ.ಭಾರತಿ ಶಂಕರ್, ಬಾಗಲಕೋಟೆ ಕ್ಷೇತ್ರಕ್ಕೆ ದೇವರಾಜ್ ಪಾಟೀಲ್ ಹಾಗೂ ಯಾದಗಿರಿ ಕ್ಷೇತ್ರಕ್ಕೆ ಮಾಜಿ ಸಚಿವ ಎ.ಬಿ.ಮಾಲಕರೆಡ್ಡಿ ಅವರು ಜೆಡಿಎಸ್ ಅಭ್ಯರ್ಥಿಗಳು ಎಂದು ಮಾಧ್ಯಮಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿಗಳು ಪ್ರಕಟಿಸಿದರು.
ಎನ್ ಆರ್ ಸಂತೋಷ್, ದೇವರಾಜ್ ಪಾಟೀಲ್ ಸೇರ್ಪಡೆ:
ಇದೇ ಸಂದರ್ಭದಲ್ಲಿ ಅರಸೀಕೆರೆ ವಿಧಾನಸಭೆ ಕ್ಷೇತ್ರದ ಎನ್ ಆರ್ ಸಂತೋಷ್ ಅವರು ಬಿಜೆಪಿ ತೊರೆದು ಜೆಡಿಎಸ್ ಪಕ್ಷವನ್ನು ಸೇರಿದರು. ಹಾಗೆಯೇ, ಬಾಗಲಕೋಟೆಯ ದೇವರಾಜ್ ಪಾಟೀಲ್ ಅವರು ಕಾಂಗ್ರೆಸ್ ತೊರೆದು ಪಕ್ಷಕ್ಕೆ ಸೇರಿದರು.
ಕುಮಾರಸ್ವಾಮಿ ಅವರು, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಇಬ್ಬರೂ ನಾಯಕರಿಗೆ ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡರು.
‘ನಾನು ಸ್ವರೂಪ್‌ಗೆ ಬೆಂಬಲಿಸುತ್ತೇನೆ, ಕುಮಾರಸ್ವಾಮಿ ಸಿಎಂ ಆಗ್ಬೇಕಷ್ಟೇ’
ಕಾಂಗ್ರೆಸ್ 3ನೇ ಲಿಸ್ಟ್ ರಿಲೀಸ್: ಸಿದ್ದರಾಮಯ್ಯಗಿಲ್ಲ ಕೋಲಾರ ಟಿಕೇಟ್..
ಟಿಕೇಟ್ ಕೈತಪ್ಪಿದ್ದರೆ ರೆಬೆಲ್ ಆದ ಎಂ.ಪಿ.ಕುಮಾರಸ್ವಾಮಿ, ಜೆಡಿಎಸ್‌ಗೆ ಸೇರ್ಪಡೆ..