Thursday, August 7, 2025

Latest Posts

ಬಿಡದಿ ಫಾರ್ಮ್‌ಹೌಸ್‌ನಲ್ಲಿ ಕುಟುಂಬಸ್ಥರೊಂದಿಗೆ ಹೆಚ್.ಡಿ.ಕುಮಾರಸ್ವಾಮಿ ಸಂಕ್ರಾಂತಿ ಸಂಭ್ರಮ

- Advertisement -

Political News: ಇಂದು ನಾಡಿನೆಲ್ಲೆಡೆ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಸಂಭ್ರಮದಿಂದ, ಕುಟುಂಬಸ್ಥರ ಜೊತೆ ಸಂಕ್ರಾಂತಿ ಸೆಲೆಬ್ರೇಟ್ ಮಾಡಿದ್ದಾರೆ.

ಬಿಡದಿಯ ತೋಟದ ಮನೆಯಲ್ಲಿ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಅವರ ಮಗ ನಿಖಿಲ್ ಕುಮಾರ್ ಸ್ವಾಮಿ, ರೇವತಿ ನಿಖಿಲ್, ಪುತ್ರ ಅವ್ಯಾನ್ ದೇವ್ ಇವರೆಲ್ಲರೂ ಸೇರಿ, ಬಿಡದಿಯ ಮನೆಯಲ್ಲಿ ಸಂಕ್ರಾಂತಿ ಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ಪುರೋಹಿತರ ಕಡೆಯಿಂದ ದೇವರಿಗೆ ವಿಶೇಷ ಪೂಜೆ ಮಾಡಿಸಿ, ಹಸುವಿಗೆ, ಮೇಕೆಗಳಿಗೆ ಆಹಾರ ನೀಡಿದ್ದಾರೆ.

ಅವ್ಯಾನ್ ದೇವ್ ಕೂಡ ಪೂಜೆಯಲ್ಲಿ ಭಾಗಿಯಾಗಿ, ಹಸು ಮತ್ತು ಮೇಕೆಗಳಿಗೆ ಹುಲ್ಲು ತಿನ್ನಿಸಿದ್ದಾರೆ. ಅವುಗಳೊಂದಿಗೆ ಆಟವಾಡಿದ್ದಾರೆ. ಅಪ್ಪ ಅಮ್ಮ, ಅಜ್ಜ ಅಜ್ಜಿಯ ಜೊತೆ ಸಖತ್ ಎಂಜಾಯ್ ಮಾಡಿದ್ದಾನೆ. ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಕೂಡ ಮಾಡಿದ್ದರು

ಬಿಡದಿಯ ತೋಟದ ಮನೆಯಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ನನ್ನ ಧರ್ಮಪತ್ನಿಯವರಾದ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರು, ಪುತ್ರ ಶ್ರೀ ನಿಖಿಲ್ ಕುಮಾರಸ್ವಾಮಿ ಅವರು, ಸೊಸೆಯವರಾದ ಶ್ರೀಮತಿ ರೇವತಿ ಅವರು, ಮೊಮ್ಮಗ ಚಿ.ಅವ್ಯಾನ್ ದೇವ್ ಅವರೆಲ್ಲರ ಜತೆ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದೆ ಎಂದು ಹಬ್ಬದ ಆಚರಣೆಯ ಫೋಟೋವನ್ನು ಶೇರ್ ಮಾಡಿದ್ದಾರೆ.

https://twitter.com/hd_kumaraswamy/status/1746900605321495006

 

ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಮೊದಲ ಮಾತು..

ಅನಂತ್ ಕುಮಾರ್ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ: ಬಿ.ವೈ.ವಿಜಯೇಂದ್ರ

‘ಮಂಜೂರಾಗಿದ್ದ ಅನುದಾನ ವಾಪಸ್ ಪಡೆಯುವಂತೆ ಪತ್ರ ಬರೆದ ಸರ್ಕಾರದ್ದು ಯಾವ ಸೀಮೆ ರಾಜಕೀಯ..?’

- Advertisement -

Latest Posts

Don't Miss