Friday, March 14, 2025

Latest Posts

H D Revanna ಹೇಳಿಕೆ : ಪ್ರಾಣ ಹೋದರೆ ಹೋಗಲಿ, ಸಿಎಂ ಮನೆ ಮುಂದೆ ಧರಣಿ ಮಾಡುತ್ತೇನೆ..!

- Advertisement -

ಹಾಸನ : ನನ್ನ ಪ್ರಾಣ ಹೋದರೆ ಹೋಗಲಿ ಸಿಎಂ ಬೊಮ್ಮಾಯಿ( CM Bommai) ಮನೆ ಮುಂದೆ ಧರಣಿ ಮಾಡುತ್ತೇನೆ ಎಂದು ರಾಜ್ಯ ಸರ್ಕಾರದ ವಿರುದ್ಧ ಎಚ್ ಡಿ ರೇವಣ್ಣ(H D Revanna) ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ (BJP government)ಶಿಕ್ಷಣ ಇಲಾಖೆಯಲ್ಲಿಯೂ ಸಹ ರಾಜಕೀಯ ಮಾಡುತ್ತಿದ್ದಾರೆ. ಹೊಳೆನರಸೀಪುರ(HOLENERASIPUR)ದಲ್ಲಿ ಇರುವಂತಹ ಮಹಿಳಾ ಕಾಲೇಜಿಗೆ ‘ ಎಂ ಎಸ್ ಸಿ (Msc)’ಪದವಿ ಮಂಜೂರು ಮಾಡಲು ರಾಜಕೀಯ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ಹಾಗೂ ಮೈಸೂರು ವಿಶ್ವವಿದ್ಯಾಲಯ(University of Mysore)ದವರು ಸಹ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ, ಆದರೆ ಯಾವುದೇ ಕಾರಣ ಕೊಡದೆ ಕಾಲೇಜಿನಲ್ಲಿ ಎಂ ಎಸ್ ಸಿ(Msc) ಕೋರ್ಸ್ ಮಂಜೂರು ಮಾಡಲು ಶಿಕ್ಷಣ ಸಚಿವರು ನಿರಾಕರಣೆ ಮಾಡುತ್ತಿದ್ದಾರೆ, ಆದ್ದರಿಂದ ಮಂಗಳವಾರ ಸಿಎಂ ಬೊಮ್ಮಾಯಿ ಅವರ ಮನೆ ಮುಂದೆ ಧರಣಿ ಮಾಡುತ್ತೇನೆ, ನನ್ನ ಪ್ರಾಣ ಹೋದರೆ ಹೋಗಲಿ, ಅರೆಸ್ಟ್ ಮಾಡ್ತಾರಾ ಮಾಡಲಿ, ಇಂಥ ಕೀಳು ಮಟ್ಟದ ರಾಜಕಾರಣ ಮಾಡಬಾರದು ಎಂದು ಉನ್ನತ ಶಿಕ್ಷಣ ಸಚಿವ ಡಾಕ್ಟರ್ ಅಶ್ವತ್ ನಾರಾಯಣ(Higher Education Minister Dr Ashwath Narayana)ವಿರುದ್ಧ, ಹೊಳೆನರಸೀಪುರ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಆರೋಪ ಮಾಡಿ, ಇವರನ್ನ ಶಿಕ್ಷಣ ಸಚಿವ ಎನ್ನುವುದಕ್ಕೆ ನಾಚಿಕೆಯಾಗಬೇಕು, ಇಂತಹ ಶಿಕ್ಷಣ ಸಚಿವರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಚ್ ಡಿ ರೇವಣ್ಣ ಹೇಳಿಕೆ ಪ್ರಾಣ ಹೋದರೆ ಹೋಗಲಿ ಸಿಎಂ ಧರಣಿ ಮನೆ ಮುಂದೆ ಮಾಡುತ್ತೇನೆ.

- Advertisement -

Latest Posts

Don't Miss