ಹಾಸನ. ರಾಜ್ಯದಲ್ಲಿ ಸಕಾಲಕ್ಕೆ ಮಳೆಯಾಗದ ಕಾರಣ ನದಿಗಳೆಲ್ಲ ಬತ್ತಿ ಹೋಗಿ ಆಣೆಕಟ್ಟಿನಲ್ಲಿರುವ ನೀರು ಖಾಲಿಯಾಗಿ ಹೋಗುತ್ತಿವೆ. ಇತ್ತ ರೈತ ಬೆಳೆದಿರುವ ಬೆಳೆಗೆ ಸರಿಯಾಗಿ ನೀರನ್ನು ಹರಿಸಲು ಅಸಾಹಾಕನಾಗಿ ಕೈಚೆಲ್ಲಿ ಕುಳಿತಿದ್ದಾನೆ ಆದರೆ ಕೃಷಿ ಮತ್ತು ನೀರಾವರಿ ಇಲಾಖೆಯವರು ರೈತರಿಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಹೇಳಿಕೆ ನೀಡಿದ್ದಾರೆ.
ಹಾರಂಗಿ, ಕಬಿನಿ, ಹೇಮಾವತಿ, ಕೆ ಆರ್ ಎಸ್ , 34 FMC ಯಲ್ಲಿ ಈಗ 18 tmc ಉಳಿದಿದೆ. ಉಳಿದದ್ದನ್ನ ಎಲ್ಲಿಗೆ ಬಿಟ್ರೋ ಗೊತ್ತಿಲ್ಲ. 4 tmc ಡೆಡ್ ಸ್ಟೋರೆಜ್ ಹೋದ್ರೆ 8 tmc ಕುಡಿಯೋಕೆ ಬೇಕು ಅಂತಾರೆ. ಉಳಿಯೋದು ಕೇವಲ 5,tmc .
ನಮ್ಮ ಅಚ್ಚುಕಟ್ಟು ಪ್ರದೇಶದಲ್ಲಿ 20 ಸಾವಿರ ಹೆಕ್ಟೇರ್ ಬೆಳೆ ಬೆಳೆದಿದ್ದಾರೆ. ಈಗ ನೀರು ಬಿಡದೇ ಹೋದರೆ 20 ಹೆಕ್ಟೇರ್ ಬೆಳೆ ನಾಶ ಆಗಲಿದೆ. ನೀರಾವರಿ ಸಲಹಾ ಸಮಿತಿ ಸಭೆ ಕರಿಬೇಕಿತ್ತು, ಅದನ್ನ ಸರ್ಕಾರ ಮಾಡಲಿಲ್ಲ. ಅದಕ್ಕೆ ಸರ್ಕಾರ ಪರಿಹಾರ ನೀಡಬೇಕು.
ವಿಲೇಜ್ ಅಕೌಂಟೆಂಟ್, ತಹಸೀಲ್ದಾರ್ ಜಾಯಿಂಟ್ ಸರ್ವೆ ಮಾಡಬೇಕು ಈ ಮಾತನ್ನ ಡಿಸಿಯವರಿಗೂ ಹೇಳಿದ್ದೆನೆ.ಈಗ ಕೂಡಲೇ ಬೆಳೆ ಪರಿಹಾರ ಕೇಂದ್ರ ರಾಜ್ಯ ಸರ್ಕಾರ ಸೇರಿ ಕೊಡಬೇಕಾಗುತ್ತೆ. ಈ ಮೊದಲೇ ಮಳೆ ಆಗುವಾಗ ರೈತರಿಗೆ ನೀರು ಬಿಡಲಿಲ್ಲ. ಇವ್ರು ಐದು ಗ್ಯಾರಂಟಿ ಮಾಡೋಕೆ ಹೋಗಿ ಈಗ ರೈತರು ವಿಷ ತಗೊಳೊ ಹಾಗೆ ಮಾಡಿದ್ರು .ಬರಿ ನಾಲ್ಕು ತಿಂಗಳು ಗ್ಯಾರಂಟಿ ಮಾಡಿದ್ರು.
ಇವ್ರು ತಮಿಳುನಾಡಿಗೆ ನೀರು ಬಿಟ್ಟು ಕೋರ್ಟ್ ಗೆ ಅರ್ಜಿ ಹಾಕಲು ಹೋದ್ರು .ತಮಿಳುನಾಡಲ್ಲಿ ಐಎನ್ ಡಿ ಗೆಲ್ಲೊಕೆ ಹೀಗೆ ಮಾಡ್ತಿದ್ದಾರೆ. ಬೆಳೆ ನಾಶಕ್ಕೆ ಇನ್ನು ತಹಸೀಲ್ದಾರ್ ಕಚೇರಿಯಲ್ಲಿ ಅರ್ಜಿ ತೆಗೆದುಕೊಳ್ಳುತ್ತಿಲ್ಲ.ಬರಗಾಲ ಅಂತ ಘೋಷಣೆ ಮಾಡಿದ ಮೇಲೆ ಅರ್ಜಿ ತಗೋಬೇಕಲ್ವ?
ಎಷ್ಟು ದಿನ ರೈತರು ಬೆಳೆನಾ ಹೊಲದಲ್ಲಿ ಇಟ್ಕೊತಾರೆ. 135 ಸೀಟು ಬಂದಿದೆ ಅಂತ ತಮಿಳುನಾಡಲ್ಲಿ ಅಡ್ಜಸ್ಟ್ ಮಾಡ್ಕೊಂಡು ಈ ರೀತಿ ಮಾಡಬೇಡಿ. ನೀವು ಮಾಡಿದ ತಪ್ಪಿಗೆ ರೈತರಿಗೆ ಪರಿಹಾರ ನೀಡಿ. ಒಂದು ವಿಧಾನಸಭೆ ಕರೆದು ನಿರ್ಣಯ ಮಾಡಿ ಅಂತ ನಾನು ಹೇಳ್ತಿನಿ ಅವ್ರು ಕೇವಲ ಮಾಜಿ ಮೂರು ಮುಖ್ಯಮಂತ್ರಿ ಕರಿತಾರೆ
ಅವ್ರು ಕಾಫಿ ಟೀ ಕುಡ್ಕೊಂಡು ಬರ್ತಾರೆ. ಈ ಸರ್ಕಾರ ಶಾಸಕರ ಅವಕಾಶ ತಪ್ಪಿಸುತ್ತದೆ .ರಾತ್ರಿ ಎಲ್ಲಾ ಕದ್ದು ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ.
ಕಾಂಗ್ರೆಸ್ ಚಿಲ್ಲರೆ ಹೇಳಿಕೆಗೆ ರೆಡ್ಡಿ ಗರಂ: ಅವರು ಸವಲಕು ನಾಣ್ಯವೆಂದು ಪ್ರತಿಕ್ರಿಯೆ