Political News: ಹುಬ್ಬಳ್ಳಿ: ಕಾವೇರಿಗಾಗಿ ಬೆಂಗಳೂರು ಬಂದ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನೆಲ, ಜಲ ಅನ್ಯಾಯ ಆದಾಗ ಬಂದ್ ಮಾಡೋದು ಸಹಜ. ಕರ್ನಾಟಕ ದಲ್ಲಿ ನೆಲ ಜಲ ಭಾಷೆ ವಿಷಯದಲ್ಲಿ ಅನ್ಯಾಯ ಆದಾಗ ಬಂದ್ ಮಾಡೋದು ಸಹಜ. ಆದ್ರೆ ಆಸ್ತಿ ಪಾಸ್ತಿ ನಷ್ಟ ಆಗದೆ ಇರೋ ಹಾಗೆ ಬಂದ್ ಮಾಡಿ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಕಾವೇರಿ ವಿಚಾರದಲ್ಲಿ ನಮ್ಮ ತಪ್ಪು ಇಲ್ಲ. ಮಳೆ ಬರದೆ ಇದ್ರಾ ನಮ್ಮ ತಪ್ಪಾ..? ಅದು ಪ್ರಕೃತಿ ವಿಕೋಪ. ಕಳೆದ ಬಾರಿ 600 ಟಿಎಮ್ ಸಿ ನೀರು ಸಮುದ್ರಕ್ಕೆ ಹರಿದು ಹೋಯ್ತು.. ನಮ್ಮ ಹತ್ರ ನೀರು ಇರದೆ ಇರೋದು ಸುಪ್ರೀಂ ಕೋರ್ಟ್ ಗೆ ಗೊತ್ತಿಲ್ವಾ..? ಕಮೀಟಿ ಗೆ ನೀರು ಇರೋದು ಗೊತ್ತಿಲ್ವಾ ಎಂದು ರೆಡ್ಡಿ ಪ್ರಶ್ನಿಸಿದ್ದಾರೆ.
ಮಿನಿಮಮ್ ನೀರು ಹೋಗತ್ತೆ. ಪ್ರಧಾನ ಮಂತ್ರಿಗಳು ಯಾಕೆ ಈ ವಿಷಯದಲ್ಲಿ ಮೌನ..? ಸಂಸದರು ಯಾಕೆ ಮಾತಾಡಲ್ಲ..? ಕೇಂದ್ರ ಸರ್ಕಾರ ಮದ್ಯಸ್ಥಿಕೆ ವಹಿಸೋಕೆ ಬರಲ್ಲ ಎಂದ ಹೇಳಿಕೆಗೆ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ.
ಎಲ್ಲರನ್ನೂ ಕರೆದು ಪ್ರಧಾನಿ ತೀರ್ಮಾನ ಮಾಡಬೇಕು. ಅವರ ಕಡೆ ಅಧಿಕಾರ ಇದೆ. ಕುಮಾರಸ್ವಾಮಿ ಕಡೆ ದಾಖಲೆ ಇದ್ರೆ ಲೋಕಾಯುಕ್ತಕ್ಕೆ ಹೋಗಲಿ. ಕುಮಾರಸ್ವಾಮಿ ಇದೀಗ ವಿರೋಧ ಪಕ್ಷದವರು.. ಅವರ ಬಿಜೆಪಿ ಜೆಡಿಎಸ್ ಮೈತ್ರಿ ಅವರಿಗೆ ಬಿಟ್ಟಿದ್ದು. ಲೋಕಸಭೆ ಚುನಾವಣೆಯಲ್ಲಿ ನಮಗೆ 20 ಸ್ಥಾನ ಬರತ್ತೆ. ಬಿಜೆಪಿಗೆ ಒಂದೋ ಎರಡೋ ಎಂದು ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದ್ದಾರೆ.
ಡಿಸಿಎಮ್ ಹುದ್ದೆ ವಿವಾದ ಬಗ್ಗೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಹಾಗೆ ಮಾತಾಡೋದೆ ಸರಿ ಅಲ್ಲ. ಇದು ಅನವಶ್ಯಕ. ಮುಖ್ಯಮಂತ್ರಿ ಇದಾರೆ ,ಉಪ ಮುಖ್ಯಮಂತ್ರಿ ಇದಾರೆ. ಡಿಸಿಎಮ್ ಮಾಡಬೇಕ ಅಂದ್ರೆ ಹೈಕಮಾಂಡ್ ಮಾಡ್ತಿದ್ದು. ಮಾಡಿಲ್ಲ ಅಂದ್ರೆ ಹಾಗೆ ಮಾತಾಡೋದ ಸರಿ ಅಲ್ಲ ಎಂದ ರಾಮಲಿಂಗಾರೆಡ್ಡಿ.
ನೂತನ ಸಂಸತ್ ಗೆ ರಾಷ್ಟ್ರಪತಿ ಅಹ್ವಾನ ಮಾಡದೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಹಿಂದೆ ನಾರಾಯಣ ಕಾಂಗ್ರೆಸ್ ನಿಂದ ಚುನಾವಣೆಗೆ ನಿಂತಿದ್ರು. ಅವರನ್ನ ಬಿಜೆಪಿ ವಿರೋಧ ಯಾಕೆ ಮಾಡಿದ್ರು ಎಂದ ರಾಮಲಿಂಗಾರೆಡ್ಡಿ. ಕಾಂಗ್ರೆಸ್ ಚಿಲ್ಲರೆ ಹೇಳಿಕೆಗೆ ಗರಂ ಆಗಿ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಅವರು ಸವಲಕು ನಾಣ್ಯ ಎಂದಿದ್ದಾರೆ.
’75 ವರ್ಷ ನಾವು ಚಿಲ್ಲರೆ ಮೇಲೆ ಕಟ್ಟಿದ ಬುನಾದಿ ಮೇಲೆ ಇವರು ನೋಟು ಮಾಡಿದ್ರು’
ಮೋದಿ ಅವರು 10 ವರ್ಷದಲ್ಲಿ ದೇಶವನ್ನ ದಿವಾಳಿ ಮಾಡಿದ್ದಾರೆ: ಸಚಿವ ಸಂತೋಷ್ ಲಾಡ್
ಹೆಬ್ಬಾಳ್ಕರ್ ಲಿಂಗಾಯತ ಲೀಡರ್ ಅಂತಾ ಹೇಳೋ ಅವಶ್ಯಕತೆ ಇದೆಯಾ? ಸಂತೋಷ ಲಾಡ್…..!