ಬ್ಯಾಂಕ್ ಗ್ರಾಹಕರೇ ಇತ್ತ ಗಮನಿಸಿ – UPI ಪೇಮೆಂಟ್ ನಲ್ಲಿ ಹೊಸ ಆದೇಶ!

20 ರೂಪಾಯಿ ಟೀ ಕುಡಿದಿರಲಿ ಅಥವಾ 100 ರೂಪಾಯಿ ತರಕಾರಿ ತಗೊಂಡಿರಲಿ—UPI ಪೇಮೆಂಟ್ ಮಾಡಿದ ತಕ್ಷಣ ಮೊಬೈಲ್‌ಗೆ ಬ್ಯಾಂಕ್ SMS ಬರೋದನ್ನ ನೋಡೋ ಅಭ್ಯಾಸ ನಮಗೆಲ್ಲಾ ಇದೆ ಅಲ್ವಾ? ಆದ್ರೆ ಇನ್ಮುಂದೆ ಆ ಅಭ್ಯಾಸಕ್ಕೆ ಬ್ರೇಕ್ ಬೀಳೋ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ. 2027ರ ಜನವರಿ 1ರಿಂದ HDFC ಬ್ಯಾಂಕ್ ತನ್ನ ಗ್ರಾಹಕರಿಗೆ 500 ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಮೊತ್ತದ UPI ವಹಿವಾಟುಗಳಿಗೆ SMS ಅಲರ್ಟ್ ಕಳಿಸೋದನ್ನ ನಿಲ್ಲಿಸೋ ಪ್ಲಾನ್‌ನಲ್ಲಿದೆ ಅಂತ ಮಾಹಿತಿ ಬಂದಿದೆ.

ಇದರ ಹಿಂದೆ RBI ಹೊಸ ಮಾರ್ಗಸೂಚಿ ಇದ್ದು, 2027ರ ಜನವರಿ 1ರಿಂದ 500 ರೂಪಾಯಿಗಿಂತ ಜಾಸ್ತಿ ಮೊತ್ತದ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಹಿವಾಟುಗಳಿಗೆ ತಕ್ಷಣ SMS ಅಲರ್ಟ್ ಕಳಿಸೋದು ಕಡ್ಡಾಯ. ಆದ್ರೆ 500 ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಮೊತ್ತದ ವಹಿವಾಟಿಗೆ SMS ಕಳಿಸಬೇಕಾ ಬೇಡ್ವಾ ಅನ್ನೋದನ್ನ ಬ್ಯಾಂಕ್‌ಗಳಿಗೇ ಬಿಟ್ಟಿದ್ದಾರೆ. ಹೀಗಾಗಿ 50, 100, 200 ಅಥವಾ 500 ರೂಪಾಯಿ ಪೇಮೆಂಟ್ ಮಾಡಿದಾಗ HDFC ಕಡೆಯಿಂದ SMS ಬರದೇ ಇರಬಹುದು. 500ಕ್ಕಿಂತ ಹೆಚ್ಚು ಇದ್ರೆ ಮಾತ್ರ SMS ಎಂದಿನಂತೆ ಬರುತ್ತೆ ಅಂತ ಹೇಳಲಾಗ್ತಿದೆ..

SMS ಬರದಿದ್ರೂ ಗಾಬರಿ ಆಗೋ ಅವಶ್ಯಕತೆ ಏನಿಲ್ಲ, ಯಾಕಂದ್ರೆ ಬದಲಾಗ್ತಿರೋದು ಮಾಹಿತಿ ಬರೋ ವಿಧಾನ ಮಾತ್ರ, ಪೇಮೆಂಟ್ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಇಲ್ಲ. HDFC ಬ್ಯಾಂಕ್ ಎಲ್ಲಾ UPI ವಹಿವಾಟುಗಳಿಗೂ ಇಮೇಲ್ ಅಲರ್ಟ್‌ಗಳನ್ನ ಮುಂದುವರಿಸುತ್ತೆ ಅಂತ ಹೇಳಲಾಗಿದೆ. ಅಂದ್ರೆ 50 ರೂಪಾಯಿ ಕಳಿಸಿದ್ರೂ ನಿಮ್ಮ ರಿಜಿಸ್ಟರ್ಡ್ ಇಮೇಲ್‌ಗೆ ವಿವರ ಬರುತ್ತೆ. ಜೊತೆಗೆ ಬ್ಯಾಂಕ್ ಆಪ್ ಮತ್ತು ಪುಷ್ ನೋಟಿಫಿಕೇಶನ್‌ನಲ್ಲೂ ಚೆಕ್ ಮಾಡ್ಕೋಬಹುದು.

ಜನವರಿ 1ರಿಂದ ಕನ್ಫ್ಯೂಷನ್ ಆಗಬಾರದು ಅಂದ್ರೆ ಈಗಲೇ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಮೊಬೈಲ್ ನಂಬರ್ ಮತ್ತೆ ಇಮೇಲ್ ಆಕ್ಟಿವ್ ಇದೆಯಾ ಅಂತ ಚೆಕ್ ಮಾಡಿಕೊಳ್ಳಿ. ಜೊತೆಗೆ ‘ಬ್ಯಾಂಕ್ ಆಪ್‌ನಲ್ಲಿ ನೋಟಿಫಿಕೇಶನ್ ಆನ್ ಇಟ್ಕೊಳ್ಳಿ.

About The Author