ಅಧಿಕಾರ ಹಸ್ತಾಂತರದ ಗುಟ್ಟು ಬಯಲು – ಕಾಗಿನೆಲೆಯಲ್ಲಿ ಡಿಕೆಶಿ ಮಾತು ವೈರಲ್!

‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರ ಜೊತೆ ನಾನು ಬಂಡೆಯಂತೆ ನಿಂತಿದ್ದೆ, ಈಗ ಅವರೇ ಹಾಕಿಕೊಟ್ಟ ಹಾದಿಯಲ್ಲಿ ನಮ್ಮ ಸರ್ಕಾರ ನಡೀತಿದೆ’ ಅಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಹಾವೇರಿಯ ಕಾಗಿನೆಲೆಯಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಅಧಿಕಾರ ಹಸ್ತಾಂತರ ಮತ್ತು ತಮ್ಮ ಆಡಳಿತದ ಬಗ್ಗೆ ಮನಬಿಚ್ಚಿ ಮುಕ್ತವಾಗಿ ಮಾತನಾಡಿದ್ದಾರೆ.

ಎಸ್ ‘ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ‘ಪಕ್ಷದ ಆದೇಶದಂತೆ ಸಿದ್ದರಾಮಯ್ಯನವರು ನನಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಅವರು ಸಿಎಂ ಆಗಿದ್ದಾಗ ಯಾರೂ ಹಸಿವಿನಿಂದ ಇರಬಾರದು ಅಂತ ಅನ್ನಭಾಗ್ಯ ಯೋಜನೆ ತಂದರು. ಈಗ ಬೆಲೆ ಏರಿಕೆ ಗಗನಕ್ಕೆ ಏರಿದೆ, ಜನರ ಆದಾಯ ಪಾತಾಳಕ್ಕೆ ಕುಸಿದಿದೆ. ಇಂತಹ ಟೈಮ್‌ನಲ್ಲಿ ಜಿಲ್ಲೆಯ 7 ಶಾಸಕರನ್ನ ಗೆಲ್ಲಿಸಿ ನಮಗೆ ಶಕ್ತಿ ಕೊಟ್ಟಿದ್ದೀರಿ, ಎಲ್ಲರನ್ನೂ ಒಟ್ಟಿಗೆ ತಗೊಂಡು ಹೋಗ್ತಿದ್ದೀನಿ’ ಅಂತ ಹೇಳಿದ್ದಾರೆ.

ಇದೇ ವೇಳೆ ಜನರಿಗೆ ವಿಶೇಷ ಮನವಿ ಮಾಡಿದ ಡಿಕೆಶಿ, ‘ನನ್ನನ್ನು ನಾಡಿನ ದೊರೆ ಅಥವಾ ರಾಜ ಅಂತ ಕರೆಯೋದಕ್ಕಿಂತ ಪ್ರಜಾ ಸೇವಕ ಅಂತ ಕರೆಯಿರಿ, ನಿಮ್ಮ ಸೇವಕನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡ್ತೀನಿ’ ಎಂದರು. ಜೊತೆಗೆ, ಕನಕದಾಸರು 300ಕ್ಕೂ ಹೆಚ್ಚು ಕೀರ್ತನೆಗಳ ಮೂಲಕ ಅರಿವು, ಭಕ್ತಿ ಮತ್ತು ಸಾಮಾಜಿಕ ಜಾಗೃತಿ ಮೂಡಿಸಿದ್ದಾರೆ; ಎಲ್ಲಾ ಜಾತಿ, ಧರ್ಮದವರನ್ನ ಸಮಾನವಾಗಿ ಕೊಂಡೊಯ್ಯೋದೇ ನಮ್ಮ ಸರ್ಕಾರದ ಧ್ಯೇಯ ಅಂತ ಸ್ಮರಿಸಿದ್ದಾರೆ.

ಒಟ್ಟಿನಲ್ಲಿ ಹೇಳೋದಾದ್ರೆ ‘ಕನಕದಾಸರ ಜಯಂತಿ ವೇದಿಕೆಯಲ್ಲಿ ಸಿಎಂ ಡಿಕೆಶಿ ಆಡಿದ ಈ ಮಾತುಗಳು ರಾಜಕೀಯ ವಲಯದಲ್ಲಿ ಹೆಚ್ಚು ಗಮನ ಸೆಳೆಯುತ್ತಿವೆ ಅಂತಾನೆ ಹೇಳಬಹುದು.

About The Author