State News: ಕಾಂಗ್ರೆಸ್ ನತ್ತ ಇದೀಗ ಹೆಚ್.ಡಿ.ಕೆ ಉಘ್ರನೋಟ ಬೀರಿದೆ. ಕಾಂಗ್ರೆಸ್ ಭ್ರಷ್ಟಾಚಾರ ಸರಮಾಲೆಗಳು ಹೆಚ್.ಡಿ.ಕೆ ದಾಖಲೆಗಳ ಮೂಲಕ ಮಳೆಗರಿಯುತ್ತಿದೆ. ಕಾಂಗ್ರೆಸ್ ಸರಕಾರದ ವಿರುದ್ಧ ಇದೀಗ ಮತ್ತೆ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಕಾಂಗ್ರೆಸ್ ಸರಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕೆ 10 ಕೋಟಿ ರೂಪಾಯಿಗೆ ಅಧಿಕಾರಿಗಳನ್ನು ಕಾಂಗ್ರೆಸ್ ಸರಕಾರ ವರ್ಗಾವಣೆ ಮಾಡುತ್ತಿದ್ದಾರೆ. 50 ಲಕ್ಷ ಕಮಿಷನ್ ಪಡೆಯುತ್ತಿದ್ದಾರೆ. ಹಾಗೆಯೆ ಇಂಧನ ಇಲಾಖೆಯಲ್ಲಿ ನಿನ್ನೆ ಅಂದರೆ ಜುಲೈ 4ರಂದು ಇಬ್ಬರು ಅದಿಕಾರಿಗಳ ವರ್ಗಾವಣೆಯಾಗಿದೆ. ಇಂಧನ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುವುದಾಗಿ ಪರೋಕ್ಷವಾಗಿ ಡಿಸಿಎಂ ಡಿಕೆಶಿಗೆ ಟಾಂಗ್ ನೀಡಿದ್ದಾರೆ. ಇದೇ ವೇಳೆ ಹೆಚ್.ಡಿ.ಕೆ ಅವರ ಆಪ್ತ ಮೂಲಗಳ ಮೂಲಕ ದಾಖಲೆ ಕೂಡಾ ಬಿಡುಗಡೆ ಮಾಡಿದ್ದಾರೆ.
ಕೆಂಗಲ್ ಗೇಟ್ ಬಳಿ ಮಾಧ್ಯಮದ ಮುಂದೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ಮೇಲೆ ಹಿಗ್ಗಾ ಮುಗ್ಗಾ ಮಾತಿನ ಮೂಲಕ ವಾಗ್ದಾಳಿಯನ್ನೇ ನಡೆಸಿದರು.




